ಹಲ್ದಿ ಕಾರ್ಯಕ್ರಮದಲ್ಲಿ ಕತ್ರೀನಾ ಕೈಫ್ ಧರಿಸಿದ ಆಭರಣಗಳು ಎಲ್ಲರ ಗಮನ ಸೆಳೆಯುತ್ತಿವೆಯಾದರೂ ಅವು ದುಬಾರಿ ಅಲ್ಲ!
ಹಲ್ದಿ ಕಾರ್ಯಕ್ರಮಕ್ಕಾಗಿ ಕತ್ರೀನಾ ಅವರು ಗೊಟಾ ಮತ್ತು ತಿಲ್ಲಾ ಕುಸುರಿ ಕೆಲಸವುಳ್ಳ ಶ್ವೇತವರ್ಣದ ಆರ್ಗಂಡಿ ಲೆಹೆಂಗಾ ಧರಿಸಿ ಅದಕ್ಕೆ ಗೊಟಾ ಹಾಗೂ ಮರೋರಿ ಕುಸುರಿ ವರ್ಕ್ ಇದ್ದ ಆರ್ಗಾಂಜಾ ದುಪ್ಪಟ್ಟಾ ಜೊತೆಯಾಗಿಸಿದ್ದರು.
ನಾವಿದನ್ನು ಹೇಳುತ್ತಲೇ ಇದ್ದೇವೆ, ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಲಗ್ನ ನಡೆದು ಒಂದು ವಾರ ಕಳೆದರೂ ಅದರ ಕುರಿತಾದ ಚರ್ಚೆಗಳು ಮುಗಿಯುತ್ತಿಲ್ಲ. ಅವರ ಮದುವೆ ನಡೆದಿದ್ದು ಡಿಸೆಂಬರ್ 9 ರಂದು ನಿಜ, ಆದರೆ ಅವರಿಬ್ಬರು ತಮ್ಮ ತಮ್ಮ ಕುಟುಂಬ ಮತ್ತು ಹತ್ತಿರದ ನೆಂಟರಿಷ್ಟರು ಮತ್ತು ಆಪ್ತ ಸ್ನೇಹಿತರೊಂದಿಗೆ ಡಿಸೆಂಬರ್ 6ರಂದೇ ಜೈಪುರ ತಲುಪಿದ್ದರು. ಅದೇ ದಿನ ಮದುವೆಗೆ ಸಂಬಂಧಿಸಿದ ಸಾಂಪ್ರದಾಯಿಕ ಕಾರ್ಯಕ್ರಮಗಳು ಸವಾಯಿ ಮಾಧೊಪುರ್ನಲ್ಲಿರುವ ಸಿಕ್ಸ್ ಸೆನ್ಸಸ್ ಬರ್ವಾರಾ ಕೋಟೆಯಲ್ಲಿ ಒಂದೊಂದಾಗಿ ಆರಂಭಗೊಂಡವು. ಆದರೆ, ಮದುವೆಯೂ ಸೇರಿದಂತೆ ಉಳಿದ ಕಾರ್ಯಕ್ರಮಗಳ ಪೋಟೋಗಳನ್ನು ಈ ಜೋಡಿಯು ಮದುವೆಯಾದ ನಂತರವೇ ಮಾಧ್ಯಮಗಳಿಗೆ, ಅಭಿಮಾನಿಗಳಿಗೆ ಸಿಗುವಂತೆ ಮಾಡಿದ್ದು. ಈ ವಾರಾಂತ್ಯ ಸಮೀಪಿಸುತ್ತಿದ್ದಂತೆ ನಮಗೆ ಅವರ ಅರಶಿನ (ಹಲ್ದಿ) ಕಾರ್ಯಕ್ರಮದ ಫೋಟೋಗಳು ಲಭ್ಯವಾಗಿವೆ.
ಹಲ್ದಿ ಕಾರ್ಯಕ್ರಮಕ್ಕಾಗಿ ಕತ್ರೀನಾ ಅವರು ಗೊಟಾ ಮತ್ತು ತಿಲ್ಲಾ ಕುಸುರಿ ಕೆಲಸವುಳ್ಳ ಶ್ವೇತವರ್ಣದ ಆರ್ಗಂಡಿ ಲೆಹೆಂಗಾ ಧರಿಸಿ ಅದಕ್ಕೆ ಗೊಟಾ ಹಾಗೂ ಮರೋರಿ ಕುಸುರಿ ವರ್ಕ್ ಇದ್ದ ಆರ್ಗಾಂಜಾ ದುಪ್ಪಟ್ಟಾ ಜೊತೆಯಾಗಿಸಿದ್ದರು.
ಆದರೆ ಕತ್ರೀನಾ ಧರಿಸಿದ ಉಡುಪುಗಳಿಗಿಂತ ಅವರು ತೊಟ್ಟಿದ್ದ ಹೂವಿನಾಕಾರದ ಆಭರಣಗಳು ಜನರ ಗಮನ ಸೆಳೆದಿವೆ. ಮುಂಬೈ ಮೂಲದ ಫ್ಲೋರಲ್ ಆರ್ಟ್ ಮತ್ತು ಡಿಸೈನ್ ಸ್ಟುಡಿಯೋದ ಒಡತಿ ಸೃಷ್ಟಿ ಇದನ್ನು ವಿನ್ಯಾಸಗೊಳಿಸಿದ್ದಾರೆ. ಈ ಆಭರಣಗಳು ಬಹಳ ಸಿಂಪಲ್ ಆಗಿವೆ ಮತ್ತು ಹೇಳಿಕೊಳ್ಳವ ಹೆಚ್ಚುಗಾರಿಕೆಯೇನೂ ಅವುಗಳಲ್ಲಿ ಇಲ್ಲ. ಆದರೆ ಅವು ಎಲ್ಲರ ಗಮನ ತಮ್ಮತ್ತ ಸೆಳೆಯುವಂತೆ ಮಾಡಿರುವುದು ಮಾತ್ರ ಸುಳ್ಳಲ್ಲ.
ಸಹಾರಾ ಎಳೆಗಳೊಂದಿಗೆ ಜೋಡಿಸಲ್ಪಟ್ಟಿದ್ದ ಟಗರ್ ಕಲಿ ಹೂವಿನ ವಿನ್ಯಾಸದ ಕಿವಿಯೋಲೆಗಳನ್ನು ಕತ್ರೀನಾ ಧರಿಸಿದ್ದರು. ಹಾಗೆಯೇ ಒಣಹೂಗಳಿಂದ ಮಾಡಿದ್ದ ಸರಳವೆನಿಸುವ ಉಂಗುರ, ಬಳೆ ಮತ್ತು ಕಲೀರಾಗಳನ್ನು ಸಹ ಅವರು ಧರಿಸಿದ್ದರು.
ಅಂದಹಾಗೆ, ಹಲ್ದಿ ಕಾರ್ಯಕ್ರಮಕ್ಕೆ ಕತ್ರೀನಾ ಧರಿಸಿದ್ದ ಆಭರಣಗಳು ಬಹಳ ದುಬಾರಿ ಇರಬಹುದು ಅಂತ ಭಾವಿಸಿದ್ದೀರಾ? ಇಲ್ಲ, ನಿಮ್ಮ ಊಹೆ ತಪ್ಪು ಮಾರಾಯ್ರೇ.
ಫ್ಲೋರಲ್ ಆರ್ಟ್ ಮತ್ತು ಡಿಸೈನ್ ಸ್ಟುಡಿಯೋದ ಸೃಷ್ಟಿ, ಇಂಗ್ಲಿಷ್ ಮಾಧ್ಯಮವೊಂದರ ಜೊತೆ ನಡೆಸಿದ ಎಕ್ಸ್ಕ್ಲ್ಯೂಸಿವ್ ಮಾತುಕತೆಯಲ್ಲಿ ಬೆಲೆಯನ್ನು ಬಹಿರಂಗ ಪಡಿಸಿದ್ದಾರೆ. ಆಭರಣಗಳ ಬೆಲೆ ಸುಮಾರು ರೂ. 15,000 ಆಗುತ್ತದಂತೆ, ಅಷ್ಟೇ.
ಇದನ್ನೂ ಓದಿ: ನಟ ಧ್ರುವ ಸರ್ಜಾರಿಂದ ಉಧೋ ಉಧೋ ಹುಲಿಗೆಮ್ಮ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ