ನಟ ಧ್ರುವ ಸರ್ಜಾರಿಂದ ಉಧೋ ಉಧೋ ಹುಲಿಗೆಮ್ಮ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ
ಉಧೋ ಉಧೋ ಹುಲಗೆಮ್ಮ ಎಂಬ ಲಿರಿಕಲ್ ವಿಡಿಯೋ ಸಾಂಗ್ ಅನ್ನು ಹುಲಗೆಮ್ಮನ ಸನ್ನಿಧಾನದಲ್ಲಿಯೇ ನಟ ಧ್ರುವ ಸರ್ಜಾ ಬಿಡುಗಡೆ ಮಾಡಿದರು. ಈ ವೇಳೆ ಕೆ.ಮಂಜು, ನಾಯಕ ನಟ ಶ್ರೇಯಸ್, ನಿರ್ದೇಶಕ ನಂದಕಿಶೋರ್ ಉಪಸ್ಥಿತರಿದ್ದರು. ವಿಡಿಯೋ ಸಾಂಗ್ ಬಿಡುಗಡೆಗೂ ಮುನ್ನ ಧ್ರುವ ಸರ್ಜಾ ಹುಲಗೆಮ್ಮ ದೇವಿಯ ದರ್ಶನ ಪಡೆದಿದ್ದಾರೆ.
ಕೊಪ್ಪಳ: ಹುಲಿಗೆಮ್ಮ ದೇವಸ್ಥಾನ ಐತಿಹಾಸಿಕ ಕ್ಷೇತ್ರ. ಇಲ್ಲಿಗೆ ರಾಜ್ಯದ ನಾನಾ ಭಾಗದಿಂದ ಭಕ್ತರು ಬರುತ್ತಾರೆ. ಅಷ್ಟೇ ಅಲ್ಲದೇ ಸಿನಿಮಾ ಮಂದಿಗೂ ಹುಲಿಗೆಮ್ಮನ ಸನ್ನಿಧಾನ ಅಚ್ಚು ಮೆಚ್ಚು. ಇದೀಗ ಈ ಸನ್ನಿಧಾನದಲ್ಲಿ ಇದೇ ದೇವಿಯ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ ಆಗಿದೆ. ಈ ವಿಡಿಯೋ ಸಾಂಗ್ ಬಿಡುಗಡೆ ಮಾಡಿದ್ದು, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ( Dhruva Sarja). ಕೊಪ್ಪಳ ತಾಲೂಕಿನ ಹುಲಗಿಯ ಹುಲಿಗೆಮ್ಮ ದೇವಸ್ಥಾನದಲ್ಲಿ ನಿನ್ನೆ (ಡಿಸೆಂಬರ್ 15) ಎಲ್ಲಿ ನೋಡಿದರಲ್ಲಿ ಜನವೋ ಜನ. ಇದಕ್ಕೆಲ್ಲ ಕಾರಣ ರಾಣಾ ಸಿನಿಮಾ. ನಂದಕಿಶೋರ್ ನಿರ್ದೇಶನ ಹಾಗೂ ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ರಾಣಾ ಚಿತ್ರದ ಲಿರಿಕಲ್ ವಿಡಿಯೋ ನಿನ್ನೆ ಹುಲಗಿಯಲ್ಲಿ ಬಿಡುಗಡೆ ಮಾಡಲಾಯಿತು.
ಉಧೋ ಉಧೋ ಹುಲಿಗೆಮ್ಮ ಎಂಬ ಲಿರಿಕಲ್ ವಿಡಿಯೋ ಸಾಂಗ್ ಅನ್ನು ಹುಲಿಗೆಮ್ಮನ ಸನ್ನಿಧಾನದಲ್ಲಿಯೇ ನಟ ಧ್ರುವ ಸರ್ಜಾ ಬಿಡುಗಡೆ ಮಾಡಿದರು. ಈ ವೇಳೆ ಕೆ.ಮಂಜು, ನಾಯಕ ನಟ ಶ್ರೇಯಸ್, ನಿರ್ದೇಶಕ ನಂದಕಿಶೋರ್ ಉಪಸ್ಥಿತರಿದ್ದರು. ವಿಡಿಯೋ ಸಾಂಗ್ ಬಿಡುಗಡೆಗೂ ಮುನ್ನ ಧ್ರುವ ಸರ್ಜಾ ಹುಲಿಗೆಮ್ಮ ದೇವಿಯ ದರ್ಶನ ಪಡೆದಿದ್ದಾರೆ.
ಹುಲಿಗೆಮ್ಮನ ಮೇಲೆ ಇರುವ ಹಾಡನ್ನು ತಾಯಿ ಸನ್ನಿಧಾನದಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರದ ನಿರ್ಮಾಪಕ ಪುರಷೋತ್ತಮ ಗುಜ್ಜಲ್ ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದರು. ಲಿರಿಕಲ್ ವಿಡಿಯೋ ಬಿಡುಗಡೆ ಮಾಡುವ ಮೊದಲು ಅಗಲಿದ ಪುನೀತ್ ರಾಜ್ಕುಮಾರ್ ಅವರಿಗೆ ಚಿತ್ರ ತಂಡ ಮೌನಾಚಾರಣೆ ಮೂಲಕ ನಮನ ಸಲ್ಲಿಸಿತು.
ಇನ್ನು ಧ್ರುವ ಸರ್ಜಾ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಈ ವೇಳೆ ನೆಚ್ಚಿನ ನಾಯಕ ನಟನನ್ನು ನೋಡುವುದಕ್ಕೆ ಬಂದ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ಕೂಡಾ ತೋರಸಿದರು. ಕೊನೆಗೆ ಧ್ರುವ ಸರ್ಜಾ ತಾವೇ ಸೆಲ್ಫಿ ಕ್ಲಿಕ್ಕಿಸಿ ಅಭಿಮಾನಿಗಳಿಗೆ ಖುಷಿಪಡಿಸಿದ್ದಾರೆ. ಅಂತಿಮವಾಗಿ ಈ ಲಿರಿಕಲ್ ವಿಡಿಯೋ ಸಾಂಗ್ ನಿಮ್ಮೂರ ಸಾಂಗ್ ನೀವೇ ಇದನ್ನ ಕಾಪಾಡಬೇಕೆಂದು ನಿರ್ದೇಶಕ ನಂದಕಿಶೋರ್ ಜನರಲ್ಲಿ ಮನವಿ ಮಾಡಿಕೊಂಡರು.
ವರದಿ : ಶಿವಕುಮಾರ್
ಇದನ್ನೂ ಓದಿ: ‘ಅಪ್ಪು ಮಾಮನ ನೆನಪಲ್ಲಿ ‘ಮದಗಜ’ ಸಾಂಗ್ ರಿಲೀಸ್ ಮಾಡಿದೀವಿ’; ಸುದ್ದಿಗೋಷ್ಠಿಯಲ್ಲಿ ಶ್ರೀಮುರಳಿ ಮಾತು
ಮೈಸೂರಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜೀವನ ಚರಿತ್ರೆ ಆಧಾರಿತ ಆಲ್ಬಮ್ ಸಾಂಗ್ ಬಿಡುಗಡೆ