‘ಅಪ್ಪು ಮಾಮನ ನೆನಪಲ್ಲಿ ‘ಮದಗಜ’ ಸಾಂಗ್​ ರಿಲೀಸ್​ ಮಾಡಿದೀವಿ’; ಸುದ್ದಿಗೋಷ್ಠಿಯಲ್ಲಿ ಶ್ರೀಮುರಳಿ ಮಾತು

Madhagaja title song: ‘ಅಪ್ಪು ಮಾಮನನ್ನು ನಾವು ಯಾರೂ ಮರೆಯೋಕೆ ಆಗಲ್ಲ. ಈ ಹಾಡನ್ನು ನಾನು ಅವರಿಗಾಗಿ ಡೆಡಿಕೇಟ್​ ಮಾಡುತ್ತೇನೆ’ ಎಂದು ಶ್ರೀಮುರಳಿ ಹೇಳಿದ್ದಾರೆ.

‘ಅಪ್ಪು ಮಾಮನ ನೆನಪಲ್ಲಿ ‘ಮದಗಜ’ ಸಾಂಗ್​ ರಿಲೀಸ್​ ಮಾಡಿದೀವಿ’; ಸುದ್ದಿಗೋಷ್ಠಿಯಲ್ಲಿ ಶ್ರೀಮುರಳಿ ಮಾತು
| Updated By: ಮದನ್​ ಕುಮಾರ್​

Updated on: Nov 11, 2021 | 4:12 PM

‘ಅಯೋಗ್ಯ’ ಸಿನಿಮಾ ಖ್ಯಾತಿಯ ಮಹೇಶ್​ ನಿರ್ದೇಶನ ಮಾಡಿರುವ ‘ಮದಗಜ’ ಚಿತ್ರದ ಟೈಟಲ್​ ಸಾಂಗ್​ ಬಿಡುಗಡೆ ಆಗಿದೆ. ಈ ಸಲುವಾಗಿ ಗುರುವಾರ (ನ.11) ಸುದ್ದಿಗೋಷ್ಠಿ ನಡೆಸಲಾಯಿತು. ಶ್ರೀಮರಳಿ, ಆಶಿಕಾ ರಂಗನಾಥ್​ ಸೇರಿದಂತೆ ಇಡೀ ಚಿತ್ರತಂಡದವರು ಪುನೀತ್​ ರಾಜ್​ಕುಮಾರ್​ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ‘ಮದಗಜ ಚಿತ್ರದ ಮೊದಲ​ ಪ್ರೆಸ್​ ಮೀಟ್​ ಇದು. ಅಪ್ಪು ಮಾಮನಿಗೆ ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಹಾಡು ರಿಲೀಸ್​ ಮಾಡಿದ್ದೇವೆ. ಅವರ ನೆನಪಿನಲ್ಲಿ ಪೂಜೆ ಸಲ್ಲಿಸಿದ್ದೇವೆ. ಅಪ್ಪು ಮಾಮನನ್ನು ನಾವು ಯಾರೂ ಮರೆಯೋಕೆ ಆಗಲ್ಲ. ಈ ಹಾಡನ್ನು ನಾನು ಅವರಿಗಾಗಿ ಡೆಡಿಕೇಟ್​ ಮಾಡುತ್ತೇನೆ. ಅತ್ಯುತ್ತಮ ಗುಣಮಟ್ಟದಲ್ಲಿ ಮೂಡಿಬಂದಿರುವ ಈ ಹಾಡನ್ನು ಅವರು ನೋಡಿದ್ದರು’ ಎಂದು ಶ್ರೀಮುರಳಿ.

ಟೈಟಲ್​ ಸಾಂಗ್​ ನೋಡಿದ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ‘ಈ ಹಾಡನ್ನು ದೊಡ್ಡ ಪರದೆ ಮೇಲೆ ನೋಡಲು ಕಾಯುತ್ತಿದ್ದೇವೆ. ರವಿ ಬಸ್ರೂರು ಸಂಗೀತ ಸೂಪರ್​ ಆಗಿದೆ’ ಎಂಬಿತ್ಯಾದಿ ಕಮೆಂಟ್​ಗಳ ಮೂಲಕ ಫ್ಯಾನ್ಸ್​ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬೃಹತ್​ ಸೆಟ್​ಗಳು ಮತ್ತು ಅದ್ದೂರಿ ಮೇಕಿಂಗ್​ನಿಂದಾಗಿ ಈ ಹಾಡು ಗಮನ ಸೆಳೆಯುತ್ತಿದೆ. ಶ್ರೀಮುರಳಿ ಡ್ಯಾನ್ಸ್​ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಾಡಿಗೆ ಸಂತೋಷ್​ ವೆಂಕಿ ಧ್ವನಿ ನೀಡಿದ್ದಾರೆ. ನವೀನ್​ ಕುಮಾರ್​ ಛಾಯಾಗ್ರಹಣ, ಹರೀಶ್​ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ.

ಇದನ್ನೂ ಓದಿ:

ಪುನೀತ್​ ನಿಧನದ ಬಳಿಕ ಜಿಮ್​ಗೆ ತೆರಳಲು ಯುವಕರ ಹಿಂದೇಟು; ಪೋಷಕರಲ್ಲೂ ಆವರಿಸಿದೆ ಭಯ

ಪುನೀತ್​ ಸಾವಿನಲ್ಲೂ ಲಾಭ ಮಾಡಲು ಪ್ರಯತ್ನಿಸಿದ್ರಾ ರಜನಿಕಾಂತ್​? ಸಿಟ್ಟಾದ ಜನರಿಂದ ಕಟು ಟೀಕೆ

Follow us