AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿ ಡಾ.ಬಿ.ಆರ್​. ಅಂಬೇಡ್ಕರ್​ ಜೀವನ ಚರಿತ್ರೆ ಆಧಾರಿತ ಆಲ್ಬಮ್ ಸಾಂಗ್​ ಬಿಡುಗಡೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿಕೆಆರ್ ಯೂಟ್ಯೂಬ್​ ಚಾನಲ್​ನಲ್ಲಿ ಇವರೇ ಮಹಾನಾಯಕ ಬಿಡುಗಡೆಯಾಗಿದೆ. ಅಂಬೇಡ್ಕರ್ ಜಯಂತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸಲು ಸೋಮಶೇಖರ್ ಜಿಗಣಿ ಮತ್ತು ತಂಡದವರು ಉತ್ಸಕರಾಗಿದ್ದಾರೆ.

ಮೈಸೂರಿನಲ್ಲಿ ಡಾ.ಬಿ.ಆರ್​. ಅಂಬೇಡ್ಕರ್​ ಜೀವನ ಚರಿತ್ರೆ ಆಧಾರಿತ ಆಲ್ಬಮ್ ಸಾಂಗ್​ ಬಿಡುಗಡೆ
ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್
preethi shettigar
|

Updated on: Apr 14, 2021 | 9:31 AM

Share

ಮೈಸೂರು: ಇಂದು ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ. ಈ ಹಿನ್ನೆಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತು ಆಲ್ಬಮ್ ಸಾಂಗ್ ಒಂದು ಸಿದ್ಧವಾಗಿದೆ. ಕೇವಲ ಐದು ನಿಮಿಷಗಳಲ್ಲೇ ಅಂಬೇಡ್ಕರ್ ಜೀವನದ ಪ್ರಮುಖ ಘಟನೆಗಳನ್ನು ಸೃಷ್ಟಿಸಲಾಗಿದ್ದು, ಈ ಹಾಡನ್ನು ಕೆ.ಎ.ಎಸ್ ಅಧಿಕಾರಿಯೊಬ್ಬರು ಸಂಯೋಜಿಸಿದ್ದಾರೆ ಎನ್ನುವುದು ವಿಶೇಷ.

ಕಾರ್ಮೋಡ ಕವಿದಿದೆ, ಕತ್ತಲೆ ಆವರಿಸಿದೆ, ಕೋಲ್ಮಿಂಚಿನ ವೇಗದಲ್ಲಿ ಬೆಳಕಾಗಿ ಹರಿದಿದೆ.. ಇವರೇ ನಮ್ಮ ನಾಯಕ.. ಹೀಗೆ ಶುರುವಾಗುವ ಹಾಡು ಎಂತವರಿಗೂ ಮೈನವಿರೇಳಿಸುತ್ತದೆ. ಒಂದೂವರೆ ತಿಂಗಳ ಪರಿಶ್ರಮದ ಫಲವಾಗಿ ಸಿದ್ಧವಾಗಿರುವ ಆಲ್ಬಮ್ ಸಾಂಗ್ ಅನ್ನು ಅಂಬೇಡ್ಕರ್ ಜಯಂತಿಗೆ ಡೆಡಿಕೇಟ್ ಮಾಡಲಾಗಿದೆ. ಸುಮಾರು 40 ದಿನಗಳ ಪ್ರರಿಶ್ರಮದಿಂದ ಈ‌ ಹಾಡನ್ನು ಮಾಡಲಾಗಿದೆ ಎಂದು ಮಂಡ್ಯದ ಬಿಸಿಎಂ ಉಪನಿರ್ದೇಶಕರಾದ ಸೋಮಶೇಖರ್ ಜಿಗಣಿ ಹೇಳಿದ್ದಾರೆ.

ಅಂಬೇಡ್ಕರ್ ಜೀವನ ಚರಿತ್ರೆಯನ್ನು ಆಲ್ಬಮ್ ಸಾಂಗ್ ಮಾಡಬೇಕು ಎನ್ನುವುದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂಡ್ಯ ಜಿಲ್ಲೆಯ ಉಪನಿರ್ದೇಶಕ ಸೋಮಶೇಖರ್ ಜಿಗಣಿ ಅವರ ಪರಿಕಲ್ಪನೆ. ಮೈಸೂರಿನ ಯುವ ಕೊಳಲುವಾದಕ ನೀತು ನಿನಾದ್ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಪ್ರಯತ್ನವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ನೆರವಾಗಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಒಡೆಯತದ ಪಿಆರ್​ಕೆ ಸ್ಟುಡಿಯೋ, ಈ ಆಲ್ಬಂ ಸಾಂಗ್ ರಿಲೀಸ್ ಮಾಡಿದ್ದು, ಖ್ಯಾತ ಗಾಯಕ ವಿಜಯ ಪ್ರಕಾಶ್ ಅದ್ಭುತವಾಗಿ ಹಾಡಿದ್ದಾರೆ.

ಅಂಬೇಡ್ಕರ್ ಜೀವನ ಚರಿತ್ರೆ ಬಹುತೇಕರಿಗೆ ಗೊತ್ತಿದೆ. ಜೀವನ, ಸಾಧನೆ, ಐತಿಹಾಸಿಕ ಮೈಲುಗಲ್ಲುಗಳನ್ನು ಕೇವಲ ಐದು ನಿಮಿಷದಲ್ಲಿ ಇದೆಲ್ಲವನ್ನು ಕಟ್ಟಿಕೊಡುವುದು ಅಷ್ಟು ಸುಲಭದ ಮಾತಲ್ಲ. ಆತ್ಯಾಧುನಿಕ ಟೆಕ್ನಾಲಜಿ ಬಳಸಿಕೊಂಡು ರೋಹಿತ್ ಪಟೇಲ್ ಸಾರಥ್ಯದ ವಿದ್ವತ್ ಸಂಸ್ಥೆ ಗ್ರಾಫಿಕ್ಸ್ ಡಿಸೈನ್ ಮಾಡಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿಕೆಆರ್ ಯೂಟ್ಯೂಬ್​ ಚಾನಲ್​ನಲ್ಲಿ ಇವರೇ ಮಹಾನಾಯಕ ಬಿಡುಗಡೆಯಾಗಿದೆ. ಅಂಬೇಡ್ಕರ್ ಜಯಂತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸಲು ಸೋಮಶೇಖರ್ ಜಿಗಣಿ ಮತ್ತು ತಂಡದವರು ಉತ್ಸಕರಾಗಿದ್ದಾರೆ.

ಇದನ್ನೂ ಓದಿ:

ಅಂಬೇಡ್ಕರ್ ಭವನ ನಿರ್ಮಾಣ ಸ್ಥಳದಲ್ಲಿ ಎರಡು ಗುಂಪುಗಳ ನಡುವೆ ದೊಣ್ಣೆಗಳಿಂದ ಮಾರಾಮಾರಿ; ಹಲವರಿಗೆ ಗಾಯ

ಸಂವಿಧಾನ ಓದು ಕಾರ್ಯಕ್ರಮದಲ್ಲಿ ಅಂಬೇಡ್ಕರ್​ ಕುರಿತು ಹಾಡುವಾಗ ಭಾವುಕರಾದ ಸಂಸದ ವಿ.ಶ್ರೀನಿವಾಸ ಪ್ರಸಾದ್

(Dr. BR Ambedkar Biography Audio Album song released on PRK Audio)

‘ಇದು ಕದಂಬರ ಬಗೆಗಿನ ಕಥೆ ಅಲ್ಲ’; ಸ್ಟೋರಿ ಬಗ್ಗೆ ರಿಷಬ್ ಸ್ಪಷ್ಟನೆ
‘ಇದು ಕದಂಬರ ಬಗೆಗಿನ ಕಥೆ ಅಲ್ಲ’; ಸ್ಟೋರಿ ಬಗ್ಗೆ ರಿಷಬ್ ಸ್ಪಷ್ಟನೆ
ರಾಜಸ್ಥಾನದಲ್ಲಿ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿ ಪೆಟ್ರೋಲ್ ಬಂಕ್ ಲೂಟಿ
ರಾಜಸ್ಥಾನದಲ್ಲಿ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿ ಪೆಟ್ರೋಲ್ ಬಂಕ್ ಲೂಟಿ
ಮೋದಿ ಮನೆ ಮುಂದೆ ರಸ್ತೇಲಿ ಎಷ್ಟು ಗುಂಡಿಗಳಿವೆ ನೋಡಿ: ಡಿಕೆ ಶಿವಕುಮಾರ್
ಮೋದಿ ಮನೆ ಮುಂದೆ ರಸ್ತೇಲಿ ಎಷ್ಟು ಗುಂಡಿಗಳಿವೆ ನೋಡಿ: ಡಿಕೆ ಶಿವಕುಮಾರ್
ವಿದ್ಯುತ್ ಕಂಬ ಏರಿ ತಂತಿ ಹಿಡಿದು ನೇತಾಡಿದ ಮಕ್ಕಳು
ವಿದ್ಯುತ್ ಕಂಬ ಏರಿ ತಂತಿ ಹಿಡಿದು ನೇತಾಡಿದ ಮಕ್ಕಳು
ದಸರಾ ದೀಪಾಲಂಕಾರ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ದಸರಾ ದೀಪಾಲಂಕಾರ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ಇಂದೋರ್​​ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು
ಇಂದೋರ್​​ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ