ಅಂಬೇಡ್ಕರ್ ಭವನ ನಿರ್ಮಾಣ ಸ್ಥಳದಲ್ಲಿ ಎರಡು ಗುಂಪುಗಳ ನಡುವೆ ದೊಣ್ಣೆಗಳಿಂದ ಮಾರಾಮಾರಿ; ಹಲವರಿಗೆ ಗಾಯ

ಅಂಬೇಡ್ಕರ್ ಭವನ ನಿರ್ಮಾಣ ಸ್ಥಳದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ
ಹೊಸಕೋಟೆ ತಾಲೂಕಿನ ದೊಡ್ಡದೇನಹಳ್ಳಿ ಗ್ರಾಮದ ಬಳಿ ಅಂಬೇಡ್ಕರ್ ಭವನ ನಿರ್ಮಾಣ ಜಾಗಕ್ಕೆ ನಿನ್ನೆ ಸಂಜೆ ಅಧಿಕಾರಿಗಳು ಸರ್ವೆ ನಡೆಸಲು ಬಂದು ಸ್ಥಳ ಪರಿಶೀಲನೆ ನಡೆಸಿ ಹೋಗಿದ್ದರು. ಹೀಗಾಗಿ ಅದೇ ಸ್ಥಳಕ್ಕೆ ಗ್ರಾಮದ ದಲಿತರು ಹೋಗಿದ್ರಂತೆ, ಈ ವೇಳೆ ಮತ್ತೊಂದು ಗೊಂಪು ಅದೇ ಸ್ಥಳಕ್ಕೆ ಬಂದಿದ್ದು ಈ ಎರಡು ಗುಂಪುಗಳ ನಡುವೆ ಕಿರಿಕ್ ಆಗಿದೆ.
ದೇವನಹಳ್ಳಿ: ಅಂಬೇಡ್ಕರ್ ಭವನ ನಿರ್ಮಾಣ ಸ್ಥಳಕ್ಕೆ ಅಧಿಕಾರಿಗಳು ಸರ್ವೆಗೆಂದು ಬಂದು ಹೋದ ಬಳಿಕ ಸ್ಥಳಕ್ಕೆ ಬಂದ 2 ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಪರಸ್ಪರ ದೊಣ್ಣೆಗಳಿಂದ ಹೊಡೆದಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ದೊಡ್ಡದೇವನಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹೊಸಕೋಟೆ ತಾಲೂಕಿನ ದೊಡ್ಡದೇನಹಳ್ಳಿ ಗ್ರಾಮದ ಬಳಿ ಅಂಬೇಡ್ಕರ್ ಭವನ ನಿರ್ಮಾಣ ಜಾಗಕ್ಕೆ ನಿನ್ನೆ ಸಂಜೆ ಅಧಿಕಾರಿಗಳು ಸರ್ವೆ ನಡೆಸಲು ಬಂದು ಸ್ಥಳ ಪರಿಶೀಲನೆ ನಡೆಸಿ ಹೋಗಿದ್ದರು. ಹೀಗಾಗಿ ಅದೇ ಸ್ಥಳಕ್ಕೆ ಗ್ರಾಮದ ದಲಿತರು ಹೋಗಿದ್ರಂತೆ, ಈ ವೇಳೆ ಮತ್ತೊಂದು ಗೊಂಪು ಅದೇ ಸ್ಥಳಕ್ಕೆ ಬಂದಿದ್ದು ಈ ಎರಡು ಗುಂಪುಗಳ ನಡುವೆ ಕಿರಿಕ್ ಆಗಿದೆ. ಈ ವೇಳೆ ದೊಣ್ಣೆಗಳಿಂದ ಎರಡೂ ಗುಂಪಿನವರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸರ್ಕಾರಿ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಂಬೇಡ್ಕರ್ ಭವನ ಮುಖ್ಯಾನೋ.. ಅಂಬೇಡ್ಕರ್ ಆದರ್ಶ ಮುಖ್ಯಾನೋ.. ರಣರಂಗವಾದ ಕೋಲಾರ ನಗರಸಭೆ