GATE 2021 Result Date: ಗೇಟ್ ಪರೀಕ್ಷೆಯ ಫಲಿತಾಂಶ ದಿನಾಂಕ ಪ್ರಕಟ; ಹೆಚ್ಚಿನ ವಿವರಗಳು ಇಲ್ಲಿವೆ

Bombay IIT GATE Exam Results: ಈ ಬಾರಿಯ ಗೇಟ್ ಪರೀಕ್ಷೆ ಒಟ್ಟು 27 ವಿಷಯಗಳಿಗೆ ನಡೆದಿದ್ದು, ಫೆಬ್ರವರಿ 6,7,13 ಮತ್ತು 14ರಂದು ಪರೀಕ್ಷೆಗಳು ಜರುಗಿದ್ದವು. ಒಟ್ಟು 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

GATE 2021 Result Date: ಗೇಟ್ ಪರೀಕ್ಷೆಯ ಫಲಿತಾಂಶ ದಿನಾಂಕ ಪ್ರಕಟ; ಹೆಚ್ಚಿನ ವಿವರಗಳು ಇಲ್ಲಿವೆ
ಗೇಟ್ ಪರೀಕ್ಷೆಯ ಫಲಿತಾಂಶ ಮಾರ್ಚ್ 22ರಂದು ಬಿಡುಗಡೆಯಾಗಲಿದೆ.
Follow us
guruganesh bhat
| Updated By: Lakshmi Hegde

Updated on:Mar 18, 2021 | 6:56 PM

ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ (IIT Bombay) 2021ನೇ ಸಾಲಿನ ಗೇಟ್ ಪರೀಕ್ಷೆಯ ಫಲಿತಾಂಶವನ್ನು ಮಾರ್ಚ್ 22 ರಂದು ಪ್ರಕಟಿಸುವುದಾಗಿ ತಿಳಿಸಿದೆ. ಗೇಟ್ ಪರೀಕ್ಷೆಯ ಫಲಿತಾಂಶವನ್ನು ಐಐಟಿ ಬಾಂಬೆಯ ಅಧಿಕೃತ ಜಾಲತಾಣ gate.iitb.ac.in ಅಲ್ಲಿ ವೀಕ್ಷಿಸಬಹುದಾಗಿದ್ದು, ಫೆಬ್ರವರಿ 26 ರಂದೇ ಈ ಬಾರಿಯ ಗೇಟ್ ಪರೀಕ್ಷೆಯ ಅಧಿಕೃತ ಉತ್ತರಗಳ ಪ್ರತಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಉತ್ತರ ಪತ್ರಿಕೆಯಲ್ಲಿನ ಉತ್ತರಗಳನ್ನು ಪ್ರಶ್ನಿಸಲು ಮಾರ್ಚ್ 4ರವರೆಗೆ ಕಾಲಾವಕಾಶವನ್ನು ಸಹ ನೀಡಲಾಗಿದೆ. (GATE exam results will be announced soon, check on the official website)

ಫಲಿತಾಂಶ ವೀಕ್ಷಣೆ ಹೇಗೆ? ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಅಧಿಕೃತ ಜಾಲತಾಣದ ವಿಳಾಸ ಇಂತಿದೆ: gate.iitb.ac.in

  • ಅಧಿಕೃತ ಜಾಲತಾಣದ ಹೋಮ್ ಪೇಜ್​ನಲ್ಲಿ GATE 2021 RESULTS ಮೇಲೆ ಕ್ಲಿಕ್ಕಿಸಿ
  • ನೀವು ಫಲಿತಾಂಶದ ಪುಟಕ್ಕೆ ರಿ ಡೈರೆಕ್ಟ್ ಆಗುತ್ತೀರಿ
  • ನಿಮ್ಮ ಅಪ್ಲಿಕೇಶನ್ ಐಡಿ ಮತ್ತು ಪಾಸ್​ವರ್ಡ್​ನ್ನು ನಮೂದಿಸಿ
  • ಇಷ್ಟು ಮಾಡಿದರೆ ನಿಮಗೆ ನಿಮ್ಮ ಗೆಟ್ ಪರೀಕ್ಷೆಯ ಫಲಿತಾಂಶ ತೆರೆದುಕೊಳ್ಳುತ್ತದೆ.
  • ಭವಿಷ್ಯದ ಉಪಯೋಗಳಿಗಾಗಿ ನಿಮ್ಮ ಫಲಿತಾಂಶದ ಪೇಜ್​ನ್ನು ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಿ

ನೀವು ನೆನಪಿಡಲೇಬೇಕಾದ ಒಂದು ವಿಷಯವೆಂದರೆ, ಗೇಟ್ ಪರೀಕ್ಷೆಯ ಫಲಿತಾಂಶವು ಮೂರು ವರ್ಷಗಳಿಗೆ ಮಾತ್ರ ಸೀಮಿತವಿರುತ್ತದೆ. ಈ ಬಾರಿಯ ಗೇಟ್ ಪರೀಕ್ಷೆ ಒಟ್ಟು 27 ವಿಷಯಗಳಿಗೆ ನಡೆದಿದ್ದು, ಫೆಬ್ರವರಿ 6,7,13 ಮತ್ತು 14ರಂದು ಪರೀಕ್ಷೆಗಳು ಜರುಗಿದ್ದವು. ಒಟ್ಟು 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: Tv9 Digital Live: 10 ಸಾವಿರ ಇ-ಮೇಲ್​ಗೂ ಕಿವಿಗೊಡದ ವಿಟಿಯು; ಒಂದೇ ದಿನದ ಅಂತರದಲ್ಲಿ ಕಠಿಣ ವಿಷಯಗಳ ಪರೀಕ್ಷೆ ನಡೆಸಲು ಸಿದ್ಧತೆ

Tv9 Facebook Live | ನಮ್ಮ ಭವಿಷ್ಯದೊಂದಿಗೆ ಚೆಲ್ಲಾಟ ಬೇಡ; ಎಂಜಿನಿಯರಿಂಗ್​ ಪರೀಕ್ಷೆ ದಿನಾಂಕ ಬದಲಿಸಿ

Published On - 6:42 pm, Thu, 18 March 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ