AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜಿತ್ ಹಾಗೂ ನಯನತಾರಾ ನಡೆಗೆ ವಿತರಕರ ವಲಯದಲ್ಲಿ ಆಕ್ರೋಶ; ಮಾಡಿದ ತಪ್ಪೇನು?

ತಮಿಳು ನಟ ಅಜಿತ್ ಕುಮಾರ್ ಭಾರಿ ಸಂಭಾವನೆ ಬೇಡಿಕೆ ಇಟ್ಟಿದ್ದರಿಂದ ನಿರ್ಮಾಪಕರು ಸಿಗದೆ ಸ್ವಂತ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ ಎಂದು ವಿತರಕ ತಿರುಪ್ಪುರ್ ಸುಬ್ರಮಣ್ಯಂ ಹೇಳಿದ್ದಾರೆ. ಜೊತೆಗೆ ಅಜಿತ್ ಹಾಗೂ ನಯನತಾರಾ ಸಿನಿಮಾ ಪ್ರಚಾರದಿಂದ ದೂರ ಉಳಿಯುವ ದ್ವಂದ್ವ ನೀತಿಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

ಅಜಿತ್ ಹಾಗೂ ನಯನತಾರಾ ನಡೆಗೆ ವಿತರಕರ ವಲಯದಲ್ಲಿ ಆಕ್ರೋಶ; ಮಾಡಿದ ತಪ್ಪೇನು?
ಅಜಿತ್-ನಯನತಾರಾ
ರಾಜೇಶ್ ದುಗ್ಗುಮನೆ
|

Updated on: Aug 19, 2026 | 6:58 AM

Share

ಮುಖ್ಯಾಂಶಗಳು

  • ಸಂಭಾವನೆ ಇಳಿಸದ ಅಜಿತ್ ಕುಮಾರ್
  • ಸ್ವಂತ ಪ್ರಾಜೆಕ್ಟ್‌ಗೆ ಮಾತ್ರ ಪ್ರಚಾರ
  • ನಿರ್ಮಾಪಕರಿಗೆ ಸುಬ್ರಮಣ್ಯಂ ಖಡಕ್ ಕರೆ

ತಮಿಳು ಚಿತ್ರರಂಗದ ಖ್ಯಾತ ವಿತರಕ ಮತ್ತು ಫೈನಾನ್ಸಿಯರ್ ತಿರುಪ್ಪುರ್ ಸುಬ್ರಮಣ್ಯಂ ಅವರು ನಟ ಅಜಿತ್ ಕುಮಾರ್ ಮತ್ತು ನಟಿ ನಯನತಾರಾ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾರೆಯರು ಸಂಭಾವನೆ ಹೆಚ್ಚಿಸಿಕೊಂಡು, ಸಿನಿಮಾದ ಪ್ರಚಾರದಿಂದ ದೂರ ಉಳಿಯುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ನಿರ್ಮಾಪಕರು ಈ ವಿಚಾರದಲ್ಲಿ ಕಟ್ಟುನಿಟ್ಟಿನ ನಿರ್ಧಾರ ತಳೆಯಬೇಕು ಎಂದು ಅವರು ಕರೆ ನೀಡಿದ್ದಾರೆ.

ಸಂಭಾವನೆ ಹೆಚ್ಚಳ ಮತ್ತು ಸ್ವಂತ ನಿರ್ಮಾಣ

‘ನಟ ಅಜಿತ್ ಕುಮಾರ್ ತಮ್ಮ ಸಂಭಾವನೆಯನ್ನು ಕಡಿತಗೊಳಿಸಲು ಒಪ್ಪಿಲ್ಲ.ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಅಷ್ಟು ದೊಡ್ಡ ಮೊತ್ತವನ್ನು ನೀಡಲು ಯಾವ ನಿರ್ಮಾಪಕರೂ ಸಿದ್ಧರಿಲ್ಲ. ಸುಮಾರು ಒಂದೂವರೆ ವರ್ಷಗಳ ಕಾಲ ಅಜಿತ್ ಹೊಸ ಅವಕಾಶಗಳಿಗಾಗಿ ಕಾದಿದ್ದರು. ಕೊನೆಗೆ ಯಾವುದೇ ನಿರ್ಮಾಪಕರು ಮುಂದೆ ಬಾರದಿದ್ದಾಗ, ಅವರು ಸ್ವಂತ ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರೆ. ‘ಡೇರ್‌ಡೆವಿಲ್’ ಚಿತ್ರವನ್ನು ಅಜಿತ್ ಅವರ ಪತ್ನಿ ಶಾಲಿನಿ ನಿರ್ಮಿಸುತ್ತಿದ್ದಾರೆ. ಬೇರೆ ನಿರ್ಮಾಪಕರಿಗೆ ಲಾಭದಲ್ಲಿ ಪಾಲು ಕೇಳುವ ನಟರು, ಸ್ವಂತ ಸಿನಿಮಾಗೆ ಉಚಿತವಾಗಿ ಕೆಲಸ ಮಾಡಲು ಸಿದ್ಧರಿರುತ್ತಾರೆ’ ಎಂದು ಸುಬ್ರಮಣ್ಯಂ ವ್ಯಂಗ್ಯವಾಡಿದ್ದಾರೆ.

ಪ್ರಚಾರದ ವಿಚಾರದಲ್ಲಿ ತಾರೆಯರ ದ್ವಂದ್ವ ನೀತಿ

ಸಿನಿಮಾ ಪ್ರಚಾರದ ವಿಷಯದಲ್ಲೂ ತಾರೆಯರ ನಡೆ ಸರಿಯಿಲ್ಲ ಎಂದು ಸುಬ್ರಮಣ್ಯಂ ಆರೋಪಿಸಿದ್ದಾರೆ. ‘ಅಜಿತ್ ಮತ್ತು ನಯನತಾರಾ ತಮ್ಮ ಚಿತ್ರಗಳ ಪ್ರಚಾರಕ್ಕೆ ಬರುವುದಿಲ್ಲ. ಆದರೆ, ತಮ್ಮ ಸ್ವಂತ ಬ್ರ್ಯಾಂಡ್ ಅಥವಾ ನಿರ್ಮಾಣದ ಪ್ರಾಜೆಕ್ಟ್‌ಗಳನ್ನು ಪ್ರಚಾರ ಮಾಡುತ್ತಾರೆ. ಅಜಿತ್ ರೇಸಿಂಗ್ ತಂಡ ಹಾಗೂ ಕೋಲ್ಡ್ ಡ್ರಿಂಕ್ಸ್ ಜಾಹೀರಾತಿನಲ್ಲಿ ಭಾಗವಹಿಸುತ್ತಾರೆ. ನಯನತಾರಾ ಕೂಡ ತಮ್ಮ ಸ್ವಂತ ಬ್ಯಾನರ್‌ನ ಸಿನಿಮಾಗಳನ್ನು ಪ್ರಚಾರ ಮಾಡುತ್ತಾರೆ. ಬಾಲಿವುಡ್ ಮತ್ತು ಟಾಲಿವುಡ್ ನಟರು ತಮ್ಮ ಚಿತ್ರಗಳನ್ನು ಭರ್ಜರಿಯಾಗಿ ಪ್ರಚಾರ ಮಾಡುತ್ತಾರೆ. ಆದರೆ ತಮಿಳುನಾಡಿನಲ್ಲಿ ಮಾತ್ರ ಈ ರೀತಿಯ ಪರಿಸ್ಥಿತಿ ಇದೆ’ ಎಂದು ಮರುಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಜಿತ್ ಕುಮಾರ್ 64ನೇ ಸಿನಿಮಾಗೆ ಡೇರ್‌ಡೆವಿಲ್; ಶೀರ್ಷಿಕೆ; ರೇಸಿಂಗ್ ಸಾಕ್ಷ್ಯಚಿತ್ರ ಗ್ಲಾಡಿಯೇಟರ್ಸ್ ಫಸ್ಟ್ ಲುಕ್ ಔಟ್

ನಿರ್ಮಾಪಕರು ಕಟ್ಟುನಿಟ್ಟಾಗುವ ಅಗತ್ಯವಿದೆ

‘ನಿರ್ಮಾಪಕರು ಒಪ್ಪಂದಕ್ಕೆ ಸಹಿ ಹಾಕುವಾಗಲೇ ಪ್ರಚಾರದ ಷರತ್ತನ್ನು ಸೇರಿಸಬೇಕು. ಸಿನಿಮಾ ಪ್ರಚಾರಕ್ಕೆ ಬರದಿದ್ದರೆ ಅಂತಹ ನಟರೊಂದಿಗೆ ಸಿನಿಮಾ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಬೇಕು. ನಟರು ತಮ್ಮ ಸಂಭಾವನೆ ಮತ್ತು ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅತ್ಯಗತ್ಯ. ಮಾರುಕಟ್ಟೆಯ ಸ್ಥಿತಿಯನ್ನು ಅರ್ಥೈಸಿಕೊಂಡು ನಿರ್ಮಾಪಕರ ಹಿತವನ್ನು ಕಾಯಬೇಕಿದೆ. ನಟರು ಸಹಕರಿಸದಿದ್ದರೆ ಚಿತ್ರರಂಗದ ಭವಿಷ್ಯ ಕಷ್ಟಕರವಾಗಲಿದೆ’ ಎಂದು ಸುಬ್ರಮಣ್ಯಂ ಎಚ್ಚರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮೂವರ ಶೂಟೌಟ್​​ ಕೇಸ್​​: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಮೂವರ ಶೂಟೌಟ್​​ ಕೇಸ್​​: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಜೈಲಿನಲ್ಲಿ ಪವಿತ್ರಾ ಗೌಡಗೆ ವಿಪರೀತ ಜ್ವರ; ವಿಚಾರಣೆಗೆ ಗೈರು
ಜೈಲಿನಲ್ಲಿ ಪವಿತ್ರಾ ಗೌಡಗೆ ವಿಪರೀತ ಜ್ವರ; ವಿಚಾರಣೆಗೆ ಗೈರು