AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಷ್ಟ ಕಾಲ ಬರ್ತಿದೆ, ಸಾಲ ಬೇಡ, ಮೂರು ವರ್ಷದ ಎಮರ್ಜೆನ್ಸಿ ಫಂಡ್ ಇಡಿ’; ರಾಹುಲ್ ಗಾಂಧಿ ಸಲಹೆಗಾರನ ಪೋಸ್ಟ್ ವೈರಲ್

ಕಷ್ಟದ ಕಾಲ ಬರುತ್ತಿದೆ. ಹೊಸ ಸಾಲ ಮಾಡಬೇಡಿ. ರಿಯಲ್ ಎಸ್ಟೇಟ್ ಇತ್ಯಾದಿಯಲ್ಲಿ ಹೂಡಿಕೆ ಮಾಡಬೇಡಿ ಎಂದು ಹಣಕಾಸು ಸಲಹೆಗಾರ ದಂಡಪಾಣಿ ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ಹೂಡಿಕೆಗಳನ್ನು ನಿರ್ವಹಿಸುವ ಮುತ್ತುಕೃಷ್ಣನ್ ದಂಡಪಾಣಿ ಅವರ ಈ ಪೋಸ್ಟ್ ಟ್ರೆಂಡಿಂಗ್ ಆಗುತ್ತಿದೆ. ಜಿಡಿಪಿ ಶೇ. 7ರಷ್ಟು ಬೆಳೆಯುತ್ತಿದ್ದರೂ ಈ ಮಾತುಗಳನ್ನಾಡಿದ್ದಾರೆ ಎಂದು ಕೆಲವರು ಲೇವಡಿ ಮಾಡಿದ್ದಾರೆ.

‘ಕಷ್ಟ ಕಾಲ ಬರ್ತಿದೆ, ಸಾಲ ಬೇಡ, ಮೂರು ವರ್ಷದ ಎಮರ್ಜೆನ್ಸಿ ಫಂಡ್ ಇಡಿ’; ರಾಹುಲ್ ಗಾಂಧಿ ಸಲಹೆಗಾರನ ಪೋಸ್ಟ್ ವೈರಲ್
ರಾಹುಲ್ ಗಾಂಧಿ ಮತ್ತು ಮುತ್ತುಕೃಷ್ಣನ್ ದಂಡಪಾಣಿImage Credit source: X and PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 04, 2026 | 2:40 PM

Share

ನವದೆಹಲಿ, ಅಕ್ಟೋಬರ್ 4: ಕಷ್ಟದ ಕಾಲ ಬರುತ್ತಿದೆ. ಮೂರು ವರ್ಷದ ವೆಚ್ಚಕ್ಕೆ ಆಗುವಷ್ಟು ಎಮರ್ಜೆನ್ಸಿ ಫಂಡ್ ನಿರ್ಮಿಸಿ. ಯಾವ ಹೊಸ ಸಾಲ ಮಾಡಬೇಡಿ ಎಂದು ಹೂಡಿಕೆದಾರ ಮತ್ತು ಹಣಕಾಸು ಸಲಹೆಗಾರ ಮುತ್ತುಕೃಷ್ಣನ್ ದಂಡಪಾಣಿ ಅವರು ನೀಡಿರುವ ಸಲಹೆ ಈಗ ಟ್ರೆಂಡಿಂಗ್​ನಲ್ಲಿದೆ. ದಂಡಪಾಣಿ ಅವರು ಕಳೆದ 13 ವರ್ಷಗಳಿಂದ ರಾಹುಲ್ ಗಾಂಧಿ ಅವರ ಹೂಡಿಕೆಗಳನ್ನು ನಿರ್ವಹಿಸುತ್ತಾ ಬಂದಿರುವರಾಗಿದ್ದಾರೆ. ಹೀಗಾಗಿ, ಅವರ ಅಭಿಪ್ರಾಯಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.

ಕೆಲವರು ಎಂ ದಂಡಪಾಣಿ ಅವರ ಅಭಿಪ್ರಾಯವನ್ನು ಅಲ್ಲಗಳೆದಿದ್ದಾರೆ. ಕೆಲವರು ಟ್ರೋಲ್ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವವರಲ್ಲಿ ಆತಂಕ ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿರುವಂತಿದೆ ಎಂದು ಒಬ್ಬರು ಟೀಕಿಸಿದ್ದಾರೆ.

ದೇಶದ ಜಿಡಿಪಿ ಶೇ. 7ರಷ್ಟು ಬೆಳವಣಿಗೆ ಹೊಂದುತ್ತಿರುವಾಗಲೇ ಈ ಮಾತುಗಳನ್ನಾಡುತ್ತಿರುವ ಆಶ್ಚರ್ಯ ಎಂದು ಮಗದೊಬ್ಬರು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ:

ಇದು ಮೂರ್ಖತನ. ನಾನು ಸಾಲ ಪಡೆದು ಆಸ್ತಿಗಳನ್ನು ಖರೀದಿಸುತ್ತೇನೆ. ಸರ್ಕಾರದ ಕರೆನ್ಸಿಗಳು ನಶಿಸಲಿವೆ ಎಂದು ಇನ್ನೊಬ್ಬರು ಪ್ರತಿವಾದ ಮಾಡಿದ್ದಾರೆ.

ತಮ್ಮ ಟೀಕಾಕಾರರಿಗೆ ದಂಡಪಾಣಿ ಪ್ರತ್ಯುತ್ತರ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಮಾಡಿದ್ದ ಟ್ವೀಟ್ ಅನ್ನು ಈಗ ಟ್ರೆಂಡ್ ಮಾಡಲಾಗುತ್ತಿದೆ. ತಾನು ಈ ವಿಚಾರದ ಬಗ್ಗೆ ವರ್ಷಗಳಿಂದ ಹೇಳುತ್ತಲೇ ಬಂದಿದ್ದೇನೆ. ಹೊಸದೇನು ಹೇಳಿಲ್ಲ ಎಂದು ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಮುತ್ತುಕೃಷ್ಣನ್ ದಂಡಪಾಣಿ ಹೇಳಿದ್ದೇನು?

ದಂಡಪಾಣಿ ಅವರು ಸೆಪ್ಟೆಂಬರ್ 29ರಂದು ಹಾಕಿದ ಪೋಸ್ಟ್ ಹೀಗಿದೆ: ‘ನಾನೇನು ನಾಸ್ಟ್ರಾಡಾಮಸ್ ಅಲ್ಲ. ಜರುಗಲಿರುವ ಸಂಭನೀಯತೆ ಬಗ್ಗೆ ಕಳೆದ ಎರಡು ವರ್ಷದಿಂದ ಎಚ್ಚರಿಸುತ್ತಲೇ ಬಂದಿದ್ದೇನೆ. ಅಗಣಿತ ಬಾರಿಯೂ ಅದನ್ನು ಪುನರುಚ್ಚರಿಸುತ್ತೇನೆ.

ಇದನ್ನೂ ಓದಿ:

‘ನಿಮ್ಮ ಕುಟುಂಬಕ್ಕೆ ಮೂರು ವರ್ಷಗಳಿಗಾಗುವಷ್ಟು ವೆಚ್ಚದ ಹಣವನ್ನು ಎಮರ್ಜೆನ್ಸಿ ಕಾರ್ಪಸ್ ಆಗಿ ಇಡಲು ಯತ್ನಿಸಿ. ಹೊಸ ಸಾಲಗಳನ್ನು ಮಾಡಬೇಡಿ. ದೀರ್ಘಾವಧಿ ಸಾಲಕ್ಕೆ ಕಾರಣವಾಗುವ ರಿಯಲ್ ಎಸ್ಟೇಟ್ ಅಥವಾ ಮನೆ ಖರೀದಿ ಬೇಡ. ಕೆಲಸ ಮತ್ತು ಹುದ್ದೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಆದಾಯ ಖಚಿತಪಡಿಸಿಕೊಳ್ಳಲಷ್ಟೇ ಗಮನ ಇರಲಿ.

‘ಆಕಾಶವೇನೂ ಕಳಚಿ ಬೀಳುತ್ತೆ ಅಂತಲ್ಲ. ಈ ಪ್ರಪಂಚ ಈ ಹಿಂದೆಯೂ ಇಂಥ ಬಿಕ್ಕಟ್ಟುಗಳನ್ನು ಎದುರಿಸಿದೆ. ಮುಂದೆಯೂ ಎದುರಿಸುತ್ತದೆ. ಈ ಕೆಲಸಗಳನ್ನು ಮಾಡುವುದರಿಂದ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕಷ್ಟದ ಸಮಯವನ್ನು ನಿರ್ವಹಿಸಲು ನೆರವಾಗಬಹುದು. ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಖಂಡಿತ ಬರುತ್ತದೆ. ಪ್ರಕೃತಿಯ ಚಕ್ರಗಳೇ ಹೀಗೆ ಎಂದು ಮುತ್ತುಕೃಷ್ಣನ್ ದಂಡಪಾಣಿ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಚೆನ್ನೈನವರಾದ ದಂಡಪಾಣಿ ಅವರು ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ ಆಗಿದ್ದಾರೆ. 2013ರಿಂದ ಅವರು ರಾಹುಲ್ ಗಾಂಧಿ ಅವರ ಹೂಡಿಕೆಗಳನ್ನು ನಿರ್ವಹಿಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More