AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪಿಎಂ ಕೇರ್ಸ್ ನಿಧಿ’ ವಿವರ ಬಹಿರಂಗ: ಫಂಡ್​ನಲ್ಲಿರುವ ಹಣ 8,452 ಕೋಟಿ ರೂಗೆ ಏರಿಕೆ

Audit report reveals PM Cares Fund data: ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಸ್ಥಾಪಿಸಲಾಗಿರುವ ಪಿಎಂ ಕೇರ್ಸ್ ಫಂಡ್​ನ ವಿವರವನ್ನು ಬಹಿರಂಗಪಡಿಸಲಾಗಿದೆ. 2024-25ರ ವರ್ಷದಲ್ಲಿ ಈ ನಿಧಿಯಲ್ಲಿರುವ ಬ್ಯಾಲನ್ಸ್ ಹಣ 8,452 ಕೋಟಿ ರೂ ಎಂಬುದು ಆಡಿಟ್ ವರದಿಯಲ್ಲಿ ಬೆಳಕಿಗೆ ಬಂದಿದೆ. 2023-24ರಲ್ಲಿ ಈ ಫಂಡ್​ನಲ್ಲಿ 7,188 ಕೋಟಿ ರೂ ಇತ್ತು.

‘ಪಿಎಂ ಕೇರ್ಸ್ ನಿಧಿ’ ವಿವರ ಬಹಿರಂಗ: ಫಂಡ್​ನಲ್ಲಿರುವ ಹಣ 8,452 ಕೋಟಿ ರೂಗೆ ಏರಿಕೆ
ಹಣImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 18, 2026 | 7:27 PM

Share

ನವದೆಹಲಿ, ಆಗಸ್ಟ್ 18: ಕೋವಿಡ್ ಸಾಂಕ್ರಾಮಿಕದಂತಹ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು 2020ರಲ್ಲಿ ಸ್ಥಾಪಿಸಲಾದ ‘ಪಿಎಂ ಕೇರ್ಸ್ ಫಂಡ್’ (PM CARES Fund) ನ ಇತ್ತೀಚಿನ ಆಡಿಟ್ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿದ್ದು, ಫಂಡ್‌ನ ಒಟ್ಟು ಶೇಷ ಮೊತ್ತ 8,452.95 ಕೋಟಿ ರೂಗೆ ಏರಿಕೆಯಾಗಿದೆ.

ಕಳೆದ ಹಣಕಾಸು ವರ್ಷದಲ್ಲಿದ್ದ (FY24) 7,188.63 ಕೋಟಿ ರೂಗೆ ಹೋಲಿಸಿದರೆ, FY25ರ ಆರ್ಥಿಕ ವರ್ಷದ ಕೊನೆಯಲ್ಲಿ (ಮಾರ್ಚ್ 31) ಪಿಎಂ ಕೇರ್ಸ್ ಫಂಡ್‌ನ ಒಟ್ಟು ಮೊತ್ತ 8,452.95 ಕೋಟಿ ರೂಗೆ ಹೆಚ್ಚಾಗಿದೆ.

ಸ್ಥಿರ ಠೇವಣಿಗಳಲ್ಲಿ ಹೂಡಿಕೆ: ನಿಧಿಯಲ್ಲಿರುವ ಒಟ್ಟು ಮೊತ್ತದ ಶೇ. 93 ರಷ್ಟು ಭಾಗವು (ಸುಮಾರು 7,846.65 ಕೋಟಿ ರೂ) ಬ್ಯಾಂಕ್​ಗಳಲ್ಲಿ ಸ್ಥಿರ ಠೇವಣಿಯಲ್ಲಿದೆ (Fixed Deposit). ಈ ಠೇವಣಿಯಿಂದ ಬಂದ 469.38 ಕೋಟಿ ರೂ ಬಡ್ಡಿ ಹಣವೇ ಈ ವರ್ಷ ನಿಧಿಯ ಅತಿದೊಡ್ಡ ಆದಾಯದ ಮೂಲವಾಗಿದೆ.

ಇದನ್ನೂ ಓದಿ: ಇರಾನ್-ಅಮೆರಿಕ ನೀ ಕೊಡೆ ನಾ ಬಿಡೆ ಜಗ್ಗಾಟ; ಹಾರ್ಮುಜ್ ಜಲಸಂಧಿ ಅಮೆರಿಕದ ಭೂಭಾಗ ಎಂದು ಟ್ರಂಪ್ ಘೋಷಣೆ

ದೇಣಿಗೆಯಲ್ಲಿ ಇಳಿಕೆ: ನಿಧಿಗೆ ಹರಿದುಬರುವ ದೇಶೀಯ ಮತ್ತು ವಿದೇಶಿ ದೇಣಿಗೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ದೇಶೀಯ ದೇಣಿಗೆಯು 681.81 ಕೋಟಿ ರೂನಿಂದ 479.05 ಕೋಟಿ ರೂಗೆ ಕುಸಿದಿದ್ದರೆ, ವಿದೇಶಿ ದೇಣಿಗೆಯು 9.28 ಲಕ್ಷ ರೂಗೆ ಇಳಿಕೆಯಾಗಿದೆ.

ವರದಿಯ ಪ್ರಕಾರ, ಈ ಹಣಕಾಸು ವರ್ಷದಲ್ಲಿ ನಿಧಿಯಿಂದ ಕೇವಲ 87.85 ಲಕ್ಷ ರೂ ಮಾತ್ರ ವೆಚ್ಚ ಮಾಡಲಾಗಿದೆ (ಮುಖ್ಯವಾಗಿ ‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆಗಾಗಿ). ಕಳೆದ ವರ್ಷಕ್ಕೆ (15.60 ಕೋಟಿ ರೂ) ಹೋಲಿಸಿದರೆ ಈ ಬಾರಿ ವೆಚ್ಚದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.

ಇದನ್ನೂ ಓದಿ: ಬಿಹಾರ ವಿದ್ಯಾರ್ಥಿಗಳ ಪ್ರತಿಭಟನೆ; ಎಕೆ-47 ಬಳಸಿದ ಘಟನೆ, ಕಾನ್ಸ್​ಟೆಬಲ್ ಅಮಾನತು ಬಳಿಕ ಎಸ್​ಪಿ ತಲೆದಂಡ

ನಿಧಿಯಲ್ಲಿ ಇಷ್ಟೊಂದು ದೊಡ್ಡ ಮೊತ್ತವನ್ನು ಬಳಸದೆ ಖಾಲಿಯಾಗಿ ಇಟ್ಟಿರುವುದರ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಮತ್ತು ವಿರೋಧ ಪಕ್ಷಗಳು ಪ್ರಶ್ನೆ ಎತ್ತಿದ್ದು, ಪಾರದರ್ಶಕತೆಯ ಕುರಿತು ಚರ್ಚೆಗಳು ಆರಂಭವಾಗಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us