AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ಸರ್ಕಾರಿ ನೌಕರರಿಗೆ ತಮಿಳುನಾಡು ಸರ್ಕಾರದ ಸಿಹಿಸುದ್ದಿ: 3ನೇ ಮಗುವಿನ ಹೆರಿಗೆಗೂ ಸಿಗಲಿದೆ 1 ವರ್ಷ ರಜೆ

ತಮಿಳುನಾಡು ಸರ್ಕಾರವು ಮಹಿಳಾ ಸರ್ಕಾರಿ ನೌಕರರಿಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಮೂರನೇ ಮಗುವಿನ ಜನನಕ್ಕೂ ಒಂದು ವರ್ಷ (365 ದಿನಗಳು) ವೇತನ ಸಹಿತ ಹೆರಿಗೆ ರಜೆ ಲಭ್ಯವಿರುತ್ತದೆ. ಈ ಮೊದಲು ಮೂರನೇ ಮಗುವಿಗೆ ಕೇವಲ 12 ವಾರಗಳ ರಜೆ ಮಾತ್ರ ಇತ್ತು. ಮಹಿಳಾ ಸಬಲೀಕರಣ ಹಾಗೂ ನೌಕರರ ಕಲ್ಯಾಣದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇದು ಸಾವಿರಾರು ಮಹಿಳಾ ಉದ್ಯೋಗಿಗಳಿಗೆ ದೊಡ್ಡ ನೆರವಾಗಲಿದೆ.

ಮಹಿಳಾ ಸರ್ಕಾರಿ ನೌಕರರಿಗೆ ತಮಿಳುನಾಡು ಸರ್ಕಾರದ ಸಿಹಿಸುದ್ದಿ: 3ನೇ ಮಗುವಿನ ಹೆರಿಗೆಗೂ ಸಿಗಲಿದೆ 1 ವರ್ಷ ರಜೆ
ವಿಜಯ್
ನಯನಾ ರಾಜೀವ್
|

Updated on: Aug 19, 2026 | 7:16 AM

Share

ಚೆನ್ನೈ, ಆಗಸ್ಟ್​ 19: ತಮಿಳುನಾಡು(Tamil Nadu) ಸರ್ಕಾರವು ಮಹಿಳಾ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಮಹಿಳಾ ನೌಕರರು ತಮ್ಮ ಮೂರನೇ ಮಗುವಿನ ಜನನದ ಸಂದರ್ಭದಲ್ಲೂ ಪೂರ್ಣ 1 ವರ್ಷ ವೇತನ ಸಹಿತ ಹೆರಿಗೆ ರಜೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಮೂರನೇ ಮಗುವಿಗೆ ಕೇವಲ 12 ವಾರಗಳ ರಜೆ ಮಾತ್ರ ಇತ್ತು. ಈಗ ಅದನ್ನು ಮೊದಲ ಎರಡು ಮಕ್ಕಳಂತೆ 365 ದಿನಗಳಿಗೆ ಹೆಚ್ಚಿಸಲಾಗಿದೆ.

ಸಚಿವರ ಪ್ರಕಟಣೆ: ಮಾನವ ಸಂಪನ್ಮೂಲ ನಿರ್ವಹಣಾ ಸಚಿವ ಡಿ. ಶರತ್‌ಕುಮಾರ್ ಅವರು ವಿಧಾನಸಭೆಯಲ್ಲಿ ಇಲಾಖೆಯ ಅನುದಾನ ಬೇಡಿಕೆ ಮಂಡಿಸುವ ವೇಳೆ ಈ ಐತಿಹಾಸಿಕ ತೀರ್ಮಾನವನ್ನು ಪ್ರಕಟಿಸಿದರು. ಸರ್ಕಾರವು ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಸದಾ ಆದ್ಯತೆ ನೀಡುತ್ತಿದ್ದು, ನೌಕರರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ಹೊಸ ನಿಯಮವನ್ನು ಜಾರಿಗೆ ತರಲು ಶೀಘ್ರದಲ್ಲೇ ಅಧಿಕೃತ ಸರ್ಕಾರಿ ಆದೇಶ ಹೊರಬೀಳಲಿದೆ.

ತಮಿಳುನಾಡಿನಲ್ಲಿ ಹೆರಿಗೆ ರಜೆಯ ಇತಿಹಾಸ 2011: ಹೆರಿಗೆ ರಜೆಯನ್ನು 90 ದಿನಗಳಿಂದ 6 ತಿಂಗಳಿಗೆ ಹೆಚ್ಚಿಸಲಾಯಿತು.

2016: ರಜೆಯ ಅವಧಿಯನ್ನು 6 ತಿಂಗಳಿಂದ 9 ತಿಂಗಳಿಗೆ ವಿಸ್ತರಿಸಲಾಯಿತು.

2021: ಮೊದಲ ಎರಡು ಮಕ್ಕಳಿಗೆ ಹೆರಿಗೆ ರಜೆಯನ್ನು ಪೂರ್ಣ 1 ವರ್ಷಕ್ಕೆ (365 ದಿನಗಳು) ಹೆಚ್ಚಿಸಲಾಯಿತು. ಈಗ 3ನೇ ಮಗುವಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ.

ಮತ್ತಷ್ಟು ಓದಿ: ಬಿಜೆಪಿ ತೊರೆಯಲು ನಿಜವಾದ ಕಾರಣ ಬಿಚ್ಚಿಟ್ಟ ಅಣ್ಣಾಮಲೈ; ಗುಜರಾತ್ ಕೇಂದ್ರಿತ, ದೆಹಲಿ ಕೇಂದ್ರಿತ ರಾಜಕೀಯ ಧೋರಣೆಗೆ ಟೀಕೆ

‘ತಮಿಳ್ ತಾಯ್ ವಳ್ತು’ ಹಾಡು ಕಡ್ಡಾಯ

ರಾಜ್ಯಗೀತೆಗೆ ಮೊದಲ ಆದ್ಯತೆ: ತಮಿಳುನಾಡು ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು, ಕಚೇರಿಗಳು, ಶಾಲೆ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸಮಾರಂಭಗಳಲ್ಲಿ ಕಾರ್ಯಕ್ರಮದ ಆರಂಭದಲ್ಲಿ ‘ತಮಿಳ್ ತಾಯ್ ವಳ್ತು’ ಹಾಡುವುದನ್ನು ಕಡ್ಡಾಯಗೊಳಿಸಿದೆ. ಇತ್ತೀಚೆಗೆ ವಿಧಾನಸಭೆಯಲ್ಲಿ ಈ ಕುರಿತ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದ ಬೆನ್ನಲ್ಲೇ ಅಧಿಕೃತ ಆದೇಶ ಹೊರಡಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More