ಸಂವಿಧಾನ ಓದು ಕಾರ್ಯಕ್ರಮದಲ್ಲಿ ಅಂಬೇಡ್ಕರ್​ ಕುರಿತು ಹಾಡುವಾಗ ಭಾವುಕರಾದ ಸಂಸದ ವಿ.ಶ್ರೀನಿವಾಸ ಪ್ರಸಾದ್

ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಡಾ.ಅಂಬೇಡ್ಕರ್ ಕುರಿತ ಹಾಡು ಹೇಳುವ ವೇಳೆ ಮಾಜಿ ಸಚಿವ ಹಾಗೂ ಚಾಮರಾಜನಗರದ ಹಾಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಭಾವುಕರಾಗಿದ್ದು ಕಂಡುಬಂದಿದೆ.

ಸಂವಿಧಾನ ಓದು ಕಾರ್ಯಕ್ರಮದಲ್ಲಿ ಅಂಬೇಡ್ಕರ್​ ಕುರಿತು ಹಾಡುವಾಗ ಭಾವುಕರಾದ ಸಂಸದ ವಿ.ಶ್ರೀನಿವಾಸ ಪ್ರಸಾದ್
ಸಂವಿಧಾನ ಓದು ಪುಸ್ತಕ ಮತ್ತು ಸಂಸದ ವಿ.ಶ್ರೀನಿವಾಸ ಪ್ರಸಾದ್​
Follow us
Skanda
|

Updated on: Mar 13, 2021 | 1:58 PM

ಮೈಸೂರು: ಚಾಮರಾಜನಗರದ ಅಂಬೇಡ್ಕರ್ ಭವನದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದ್ದ, ಸಂವಿಧಾನ ಓದು ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಭಾವುಕರಾದ ಘಟನೆ ನಡೆದಿದೆ. ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಡಾ.ಅಂಬೇಡ್ಕರ್ ಕುರಿತ ಹಾಡು ಹೇಳುವ ವೇಳೆ ಮಾಜಿ ಸಚಿವ ಹಾಗೂ ಚಾಮರಾಜನಗರದ ಹಾಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಭಾವುಕರಾಗಿದ್ದು ಕಂಡುಬಂದಿದೆ.

ಚಾಮರಾಜನಗರ ಕ್ಷೇತ್ರದಲ್ಲಿನ ಪದವಿ ಪೂರ್ವ ಕಾಲೇಜಿನ ಸುಮಾರು ಸುಮಾರು 30 ಸಾವಿರ ವಿದ್ಯಾರ್ಥಿಗಳಿಗೆ ‘ಸಂವಿಧಾನ ಓದು’ ಪುಸ್ತಕವನ್ನು ವಿತರಿಸಲು ನಿರ್ಧರಿಸಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಂವಿಧಾನ ಓದಿ ಪುಸ್ತಕದಿಂದ ಪ್ರಭಾವಿತರಾಗಿ ತಮ್ಮ ಸಂಸದ ನಿಧಿಯ ಮೂಲಕವೇ ಪುಸ್ತಕಗಳನ್ನು ವಿತರಿಸಲು ನಿರ್ಧರಿಸಿದ ಶ್ರೀನಿವಾಸ ಪ್ರಸಾದ್, ಅತ್ಯಂತ ಸರಳ ಹಾಗೂ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಸಂವಿಧಾನ ತಲುಪಲಿ ಎಂಬ ಆಶಯದೊಂದಿಗೆ ಪುಸ್ತಕವನ್ನು ಮಕ್ಕಳಿಗೆ ವಿತರಿಸಲು ತೀರ್ಮಾನಿಸಿದ್ದಾಗಿ ಹೇಳಿಕೊಂಡಿದ್ದರು. ಅದರಂತೆ ಇಂದು ನಡೆದ ಕಾರ್ಯಕ್ರಮದಲ್ಲಿ ವಿ.ಶ್ರೀನಿವಾಸ ಪ್ರಸಾದ್ ಭಾಗವಹಿಸಿದ್ದು, ಈ ವೇಳೆ ಭಾವುಕರಾಗಿದ್ದಾರೆ.

ಸಮಾನತೆ ಪ್ರಕಾಶನದ ಭರತ್​ ರಾಮಸ್ವಾಮಿ ಈ ಪುಸ್ತಕಗಳನ್ನು ಪ್ರಕಟಿಸಿದ್ದು, ಚಾಮರಾಜನಾಗರ ಲೋಕಸಭಾ ಕ್ಷೇತ್ರದ ಸುಮಾರು 8 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವುದಾಗಿ ತಿಳಿಸಿದ್ದಾರೆ. ಇನ್ನು ಈಗಾಗಲೇ ಯೂಟ್ಯೂಬ್​ ಸೇರಿ ಹಲವು ವೇದಿಕೆಗಳಲ್ಲಿ ಅಂಬೇಡ್ಕರ್​ ಓದು, ಸಂವಿಧಾನ ಓದು ರೀತಿಯ ಕಾರ್ಯಕ್ರಮಗಳು ಜನರನ್ನು ತಲುಪುತ್ತಿದ್ದು, ಅಂಬೇಡ್ಕರ್​ ಅವರ ಆಲೋಚನೆಯನ್ನು ಇಂದಿನ ಪೀಳಿಗೆಯಲ್ಲಿ ಬಿತ್ತಲು ಅನೇಕ ಚಿಂತಕರು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಅಂಬೇಡ್ಕರ್ ಓದು ಸರಣಿ: ಕನ್ನಡಿಗರ ಮನೆಮನಕ್ಕೆ ಅಂಬೇಡ್ಕರ್ ವಿಚಾರ ತಲುಪಿಸುವ ಸಾಹಸ 

ಬಿ.ಎಲ್.ಶಂಕರ್ ಬರಹ | ಸರ್ಕಾರ ಸಂವಿಧಾನದ ಆಶಯ ಉಲ್ಲಂಘಿಸಿದಾಗ ನ್ಯಾಯಾಂಗ ನಮ್ಮ ನೆರವಿಗೆ ಬರಬೇಕಿತ್ತು