AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬೇಡ್ಕರ್ ಓದು ಸರಣಿ: ಕನ್ನಡಿಗರ ಮನೆಮನಕ್ಕೆ ಅಂಬೇಡ್ಕರ್ ವಿಚಾರ ತಲುಪಿಸುವ ಸಾಹಸ

ಅಂಬೇಡ್ಕರ್ ಅವರನ್ನು ದೈವಿಕ ಸ್ಥಾನಕ್ಕೇರಿಸಿ ಪೂಜೆಗೆ ಸೀಮಿತಗೊಳಿಸುವುದಕ್ಕಿಂತ ಅವರ ಚಿಂತನೆ ತಿಳಿಯುವುದು ಮುಖ್ಯ. ಈ ಉದ್ದೇಶ ಮತ್ತು ಅದನ್ನು ಸಾಕಾರಗೊಳಿಸಿಕೊಳ್ಳುವ ಓರ್ವ ತರುಣನ ಇಚ್ಛಾಶಕ್ತಿಯ ಫಲವೇ ಅಂಬೇಡ್ಕರ್ ಓದು ಸರಣಿ.

ಅಂಬೇಡ್ಕರ್ ಓದು ಸರಣಿ: ಕನ್ನಡಿಗರ ಮನೆಮನಕ್ಕೆ ಅಂಬೇಡ್ಕರ್ ವಿಚಾರ ತಲುಪಿಸುವ ಸಾಹಸ
ಅಂಬೇಡ್ಕರ್ ಓದು ಸರಣಿ ರೂಪಿಸಿರುವ ಅರುಣ್ ಜೋಳದಕುಡ್ಲಿಗಿ
guruganesh bhat
| Edited By: |

Updated on:Jan 24, 2021 | 10:15 PM

Share

ಅಂಬೇಡ್ಕರ್ ಕೇವಲ ಪೂಜನೀಯ ವ್ಯಕ್ತಿಯಾಗಬಾರದು. ಆಟೋ ಡ್ರೈವರ್, ಕೃಷಿ ಕಾರ್ಮಿಕ, ದಿನಪತ್ರಿಕೆ ಹಂಚುವವ.. ಹೀಗೆ ಪ್ರತಿಯೊಬ್ಬ ಸಾಮಾನ್ಯರಲ್ಲೂ ಅಂಬೇಡ್ಕರ್ ಚಿಂತನೆ ಪ್ರವಹಿಸಬೇಕು. ಅವರನ್ನು ದೈವಿಕ ಸ್ಥಾನಕ್ಕೇರಿಸಿ ಪೂಜೆಗೆ ಸೀಮಿತಗೊಳಿಸುವುದಕ್ಕಿಂತ ಅವರ ಚಿಂತನೆ ತಿಳಿಯುವುದು ಮುಖ್ಯ. ಈ ಉದ್ದೇಶ ಮತ್ತು ಅದನ್ನು ಸಾಕಾರಗೊಳಿಸಿಕೊಳ್ಳುವ ಓರ್ವ ತರುಣನ ಇಚ್ಛಾಶಕ್ತಿಯ ಫಲವೇ ಅಂಬೇಡ್ಕರ್ ಓದು ಸರಣಿ. ಯೂಟ್ಯೂಬ್​ನಲ್ಲಿ ‌Arun Jolad Kudligi ಚಾನಲ್ ಸಬ್​ಸ್ಕ್ರೈಬ್ ಮಾಡಿದರೆ ಪ್ರತಿದಿನ ಬೆಳಗು 6 ಘಂಟೆಗೆ ಫಟ್ ಅಂತ ನಿಮ್ಮ ನಿಮ್ಮ ಮೊಬೈಲ್​ಗಳಲ್ಲಿ ಅಂಬೇಡ್ಕರ್ ಸುಪ್ರಭಾತ ಕೇಳಿಸುತ್ತದೆ.

ಡಾ.ಬಿ.ಆರ್.ಅಂಬೇಡ್ಕರ್​ರ ಚಿಂತನೆಗಳು ಎಲ್ಲ ಕಾಲಕ್ಕೂ ಸಲ್ಲುತ್ತವೆ. ಆದರೆ, ಇದನ್ನು ಭಾಷಣದಲ್ಲಿ ಘೋಷಿಸುತ್ತ, ಜೈಕಾರ ಕೂಗಿದರೆ ಏನು ಪಡೆದಂತಾಯಿತು? ಅವರ ಚಿಂತನೆ, ಯೋಚನೆಗಳನ್ನು ಅರಿಯಬೇಕು. ಅರಿತು ಬಾಳಬೇಕು. ಬೃಹತ್ ಗ್ರಂಥಗಳಿಂದ ಅವರ ವಿಚಾರಗಳು ನಮ್ಮ ಪ್ರತಿದಿನಗಳಿಗೆ ಇಳಿಯುವುದು ಇಂದಿನ ಅವಶ್ಯಕ.‌ ಸಾಹಿತ್ಯ – ಅಕಾಡೆಮಿಕ್ ವಲಯದಿಂದ ಮಹಾನ್ ಮಾನವೀಯತಾವಾದಿಯನ್ನು ಶ್ರೀಸಾಮಾನ್ಯರಿಗೆ ಪರಿಚಯಿಸಲು ವೃತ್ತಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಅರುಣ್ ಜೋಳದಕೂಡ್ಲಿಗಿ ಅಂಬೇಡ್ಕರ್ ಓದು ಸರಣಿ ರೂಪಿಸಿದರು.

ಶುರುವಾದ ಕಾರಣ ಕೇಳಿ ಖಾಸಗಿ ವಾಹಿನಿಯಲ್ಲಿ ಅಂಬೇಡ್ಕರರ ಜೀವನ ಆಧರಿಸಿ ಮಹಾನಾಯಕ ಧಾರಾವಾಹಿ ಪ್ರಸಾರವಾಯಿತು.‌ ಆಗಲೇ, ಸುಮ್ಮನೆ ಕುತೂಹಲಕ್ಕೆಂದು ಅಂತರ್ಜಾಲದಲ್ಲಿ ‘ಅಂಬೇಡ್ಕರ್’ ಎಂದು ಹುಡುಕಿದರು. ಅವರ ಕುರಿತು ಪ್ರಾಥಮಿಕ ಮಾಹಿತಿಗಳು ದೊರೆತವಷ್ಟೇ. ಅಂಬೇಡ್ಕರ್ ಅವರ ಚಿಂತನೆಗಳು ಸಿಕ್ಕಿದ್ದು ತೀರಾ ಕಡಿಮೆ. ಅಂಬೇಡ್ಕರ್ ಕುರಿತು ರಾಜಕೀಯ ಮುಖಂಡರ ಮಾತುಗಳು, ಪರಿನಿರ್ವಾಣ ದಿನ ಉದ್ಘಾಟನೆ, ಅಂಬೇಡ್ಕರ್ ಜಾತಿ.. ಇಂತಹ ವಿಷಯಗಳೇ ಕಾಣಿಸುತ್ತಿದ್ದವು. ಆಗಲೇ ಅರುಣ್ ಜೋಳದಕುಡ್ಲಿಗಿ ಅಂಬೇಡ್ಕರ್ ಅವರ ಮಾತು, ಬರಹಗಳನ್ನು ಕನ್ನಡದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಮುನ್ನೆಲೆಗೆ ತರಲು ನಿರ್ಧರಿಸಿದರು.

ಹಾವೇರಿ ಜಿಲ್ಲೆ ಶಿಗ್ಗಾಂವ್​ದ ಜಾನಪದ ವಿಶ್ವವಿದ್ಯಾಲಯದಲ್ಲಿ ಅರುಣ್ ಜೋಳದಕುಡ್ಲಿಗಿ ಅವರು ಸಹಾಯಕ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸೆಪ್ಟೆಂಬರ್ 2020ರಲ್ಲಿ ಆರಂಭವಾದ ಅಂಬೇಡ್ಕರ್ ಓದು ಸರಣಿಯಲ್ಲಿ ಈವರೆಗೆ 145 ವಿಡಿಯೋ ನಿರ್ಮಾಣವಾಗಿದೆ. ಸದ್ಯ 35 ಗಂಟೆಗಳಷ್ಟು ಅಂಬೇಡ್ಕರ್ ಚಿಂತನೆಗಳು ದಾಖಲೀಕರಣವಾಗಿದ್ದು, 100 ಗಂಟೆಯನ್ನು ತಲುಪುವ ಗುರಿ ಅರುಣ್ ಅವರದ್ದು.

ಮೊದಮೊದಲು ಹಿಂಜರಿಕೆ..ಈಗ ಅವಕಾಶಕ್ಕಾಗಿ ಬೇಡಿಕೆ ಅರುಣ್ ಜೋಳದಕೂಡ್ಲಿಗಿ ಅವರು ಈ ಸರಣಿಯನ್ನು ರೂಪಿಸಿದಾಗ ಹೆಚ್ಚು ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ. ಗೆಳೆಯರು, ಪರಿಚಯಸ್ಥರ ಬಳಿ ಓದಿಸಿದರು. ಅಂಬೇಡ್ಕರ್ ಕುರಿತು ‘ಓದಿಕೊಂಡ ಸಾಹಿತ್ಯ-ಅಕಾಡೆಮಿಕ್ ಬಳಗದ ಬಳಿ ಕೇಳಿಕೊಂಡರು. ಆದರೆ, ಹೇಳಿಕೊಳ್ಳುವಂಥ ಪ್ರತಿಕ್ರಿಯೆ ಬರಲಿಲ್ಲ. ಆದರೆ, ಯೋಜನೆ ಶುರುವಾಗಲೇಬೇಕು, ಮಧ್ಯೆ ನಿಲ್ಲಬಾರದು. ಪಟ್ಟು ಬಿಡದೇ ಒಮ್ಮೊಮ್ಮೆ ತಾವೇ ಓದಿದರು. ಜನಸಾಮಾನ್ಯರ ಬಳಿ ಓದಿಸಿದರು. ಅವರ ಅಂಬೇಡ್ಕರ್ ಓದು ಸರಣಿಗೆ ಪ್ರಚಾರದ ಹಂಗಿರಲಿಲ್ಲ.‌ ಅರುಣ್ ಅವರ ಯೂಟ್ಯೂಬ್ ಚಾನಲ್ ಮೂಲಕ ಅಂಬೇಡ್ಕರ್ ಗೃಹಿಣಿ, ಆಟೋ ಡ್ರೈವರ್, ದಿನಗೂಲಿ ಕಾರ್ಮಿಕ.. ಕ್ಯಾಬ್ ಡ್ರೈವರ್ ಮುಂತಾದ ಜನಸಾಮಾನ್ಯರ ಕೆಲಸಗಳ ಮಧ್ಯೆಯೇ ನಿಧಾನವಾಗಿ ಝರಿಯಂತೆ ಹರಿದರು.

ಓದಿದ್ದು ಯಾರು? ಈವರೆಗೆ ಅಂಬೇಡ್ಕರ್ ಓದು ಸರಣಿಯಲ್ಲಿ‌ ಓದಲು ಹೆಚ್ಚು ಆಸಕ್ತಿ ವಹಿಸಿದ್ದು ಮಹಿಳೆಯರು.. ಅಂಬೇಡ್ಕರ್ ಕುರಿತು ತೋರಿಕೆಯ ಅಭಿಮಾನ ಹೊಂದಿಲ್ಲದ ಇವರು ದಿನದ ಸಾವಿರ ಜವಾಬ್ದಾರಿಗಳ ನಡುವೆಯೇ ಈ ಸರಣಿಗಾಗಿ ಅಂಬೇಡ್ಕರ್​ರನ್ನು ಓದಿದರು. ಒಂದು ವಿಡಿಯೋಗಾಗಿ ಹತ್ತು ಚಿಂತನೆ ಓದಿದರು. ಅಂಬೇಡ್ಕರ್ ವಿಚಾರ ಅರಿತರು.

ಪ್ರಚಲಿತ ಘಟನೆಗಳಿಗೆ ಹೊಂದಿಕೆಯಾಗುವ ಚಿಂತನೆಗಳನ್ನು ಓದಿಸಲು ಆದ್ಯತೆ ನೀಡಿದ್ದಾರೆ ಅರುಣ್ ಜೋಳದಕೂಡ್ಲಿಗಿ.‌ ಗೋಹತ್ಯೆ ನಿಷೇಧ ಕಾಯ್ದೆ ಚರ್ಚೆಯಾದಾಗ ಅಂಬೇಡ್ಕರ್​ರ ಗೋವಿನ ಕುರಿತ ಚಿಂತನೆಗಳು, ರೈತರ ಹೋರಾಟ ಆರಂಭವಾದಾಗ ರೈತರ ಕುರಿತು ಅಂಬೇಡ್ಕರ್ ಏನಂದಿದ್ದರು.. ಹೀಗೆ ಆದಷ್ಟು ಪ್ರಸ್ತುತಕ್ಕೆ ಹೊಂದುವ ಚಿಂತನೆಗಳನ್ನು ಈ ಸರಣಿಯಲ್ಲಿ ಓದಲಾಗಿದೆ.

1.60 ಲಕ್ಷಕ್ಕೂ ಹೆಚ್ಚು ವೀಕ್ಷಣೆ, 2750 ಚಂದಾದಾರರು ಅರುಣ್ ಅವರ ಯೂಟ್ಯೂಬ್ ಚಾನಲ್​ಗಿದೆ. ತಮ್ಮ ಪ್ರಯತ್ನದಿಂದ ಸಾಮಾಜಿಕ ತಾಣಗಳಲ್ಲಿ ಧನಾತ್ಮಕ ವಿಷಯಗಳ ಪ್ರಮಾಣ ಹೆಚ್ಚಲಿದೆ ಎಂಬ ಖುಷಿಯೂ ಅವರಿಗಿದೆ. ನಿಮ್ಮ ಮನೆಗೂ ಅಂಬೇಡ್ಕರ್ ಬರಬೇಕೇ.. ಅರುಣ್ ಜೋಳದಕುಡ್ಲಿಗಿ ಅವರ ಯೂಟ್ಯೂಬ್ ಚಾನಲ್​ಗೆ ಭೇಟಿಕೊಡಿ..

ಜನ ಸಾಮಾನ್ಯರಿಂದಲೂ ಸಂವಿಧಾನ ಕರ್ತೃವಿನ ಸ್ಮರಣೆ: #BharathRatna ಟ್ರೆಂಡಿಂಗ್

Published On - 6:29 pm, Sun, 24 January 21

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್