ಕೊಟ್ಟ ಮಾತಿನಂತೆ ಸಾರಿಗೆ ನೌಕರರ ಏಳು ಬೇಡಿಕೆಗಳ ಈಡೇರಿಸಿದ ಸರ್ಕಾರ: ಸಾರಿಗೆ ನೌಕರರ ತಕರಾರೇನು?

ಮುಷ್ಕರ ಮುಗಿದು ಸುಮಾರು 85 ದಿನಗಳು ಕಳೆದಿದೆ. ಸಾರಿಗೆ ಸಚಿವರು ಮತ್ತು ಆಡಳಿತ ಮಂಡಳಿ ಏಳು ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದೆ. ತಾವು ಈಡೇರಿಸಿರುವುದಾಗಿ ಹೇಳುತ್ತಿರುವ ಏಳು ಭರವಸೆಗಳು ನಮ್ಮೊಂದಿಗೆ ಚರ್ಚೆ ಮಾಡದೆ ಏಕಾಏಕಿ ನಿರ್ಧಾರ ಮಾಡಿ ಸರ್ಕಾರ ಜಾರಿಗೆ ತಂದಿದೆ.

ಕೊಟ್ಟ ಮಾತಿನಂತೆ ಸಾರಿಗೆ ನೌಕರರ ಏಳು ಬೇಡಿಕೆಗಳ ಈಡೇರಿಸಿದ ಸರ್ಕಾರ: ಸಾರಿಗೆ ನೌಕರರ ತಕರಾರೇನು?
ಬಿಎಂಟಿಸಿ ಬಸ್ (ಸಾಂದರ್ಭಿಕ ಚಿತ್ರ)
Follow us
sandhya thejappa
| Updated By: ಸಾಧು ಶ್ರೀನಾಥ್​

Updated on: Mar 13, 2021 | 1:42 PM

ಬೆಂಗಳೂರು: ಸಾರಿಗೆ ನೌಕರರು ತಮ್ಮ ಒಂಬತ್ತು ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಸ್ಪಂದಿಸಿದ್ದ ರಾಜ್ಯ ಸರ್ಕಾರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು. ಮಾತಿನಂತೆ ಇದೀಗ 7 ಬೇಡಿಕೆಯನ್ನು ಸರ್ಕಾರ ಈಡೇರಿಸಿದ್ದರೂ ಸಾರಿಗೆ ಸಿಬ್ಬಂದಿ ಚಕಾರವೆತ್ತಿದ್ದಾರೆ. ಸರ್ಕಾರ ಬೇಡಿಕೆಗಳನ್ನು ಈಡೇರಿಸುವ ಮುನ್ನ ಸಾರಿಗೆ ನೌಕರರ ಜೊತೆ ಚರ್ಚಿಸಬೇಕು ಎಂದೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಸರ್ಕಾರಕ್ಕೆ ಮನವಿ ಪತ್ರ ನೀಡಿದೆ.

ಪತ್ರದಲ್ಲಿ ಏನಿದೆ? ಮುಷ್ಕರ ಮುಗಿದು ಸುಮಾರು 85 ದಿನಗಳು ಕಳೆದಿವೆ. ಸಾರಿಗೆ ಸಚಿವರು ಮತ್ತು ಆಡಳಿತ ಮಂಡಳಿ ಏಳು ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದೆ. ತಾವು ಈಡೇರಿಸಿರುವುದಾಗಿ ಹೇಳುತ್ತಿರುವ ಏಳು ಭರವಸೆಗಳ ಬಗ್ಗೆ ನಮ್ಮೊಂದಿಗೆ ಚರ್ಚೆ ಮಾಡದೆ ಏಕಾಏಕಿ ನಿರ್ಧಾರ ಮಾಡಿ ಸರ್ಕಾರ ಜಾರಿಗೆ ತಂದಿದೆ. ಆ ಏಳು ಭರವಸೆಗಳು ನಾವು ಕೇಳಿದ ರೀತಿಯಲ್ಲಿ ಇಲ್ಲದೇ ಕೇವಲ ಹಳೆಯ ಸುತ್ತೋಲೆ ಮತ್ತು ಹಳೆಯ ಪದ್ಧತಿಗಳಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿ ಹೊಸ ಪದ್ಧತಿಯೆಂದು ಬಿಂಬಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ತಿಳಿಯುತ್ತಿಲ್ಲ. ಹೀಗಾಗಿ ಸರ್ಕಾರ ಬೇಡಿಕೆ ಈಡೇರಿಕೆಗೂ ಮುನ್ನ ಸಾರಿಗೆ ನೌಕರರ ಜೊತೆ ಚರ್ಚೆ ನಡೆಸಲಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

ಸರ್ಕಾರ ಡಿಸೆಂಬರ್​ನಲ್ಲಿ ನಮ್ಮ 9 ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು. 9 ರಲ್ಲಿ 7 ಬೇಡಿಕೆಗಳನ್ನ ಈಡೇರಿಸಿದ್ದೇವೆ ಅಂತ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆರನೇ ವೇತನ ಆಯೋಗ ಜಾರಿಗೆ ತರುವುದು ಮತ್ತು ತರಬೇತಿಯನ್ನ 2 ವರ್ಷದಿಂದ 1 ವರ್ಷಕ್ಕೆ ಇಳಿಸುವುದು ಸೇರಿದಂತೆ ಒಟ್ಟು ಎರಡು ಬೇಡಿಕೆಗಳನ್ನ ಬಿಟ್ಟು ಇನ್ನೆಲ್ಲ ಬೇಡಿಕೆ ಈಡೇರಿಸಿದ್ದೇವೆ ಅಂತಿದ್ದಾರೆ. ಆದರೆ ಆ ಏಳು ಬೇಡಿಕೆ ಈಡೇರಿಕೆಯಲ್ಲೂ ನ್ಯೂನ್ಯತೆ ಇದೆ. ಎನ್ಎಎಂಸಿ ಪೂರ್ಣ ರದ್ದು ಮಾಡಬೇಕು. ಹೊರ ರಾಜ್ಯಗಳಲ್ಲಿ ಇರುವಂತೆ ಟಿಕೆಟ್ ಪಡೆಯದೆ ಇದ್ದರೆ ಗ್ರಾಹಕರನ್ನೆ ನೇರ ಹೊಣೆಗಾರರನ್ನಾಗಿ ಮಾಡಬೇಕು. ಆರನೇ ವೇತನ ಆಯೊಗವನ್ನ ಕೂಡಲೇ ಜಾರಿಗೆ ತರಬೇಕು ಎಂದು ಸಾರಿಗೆ ಇಲಾಖೆಗೆ 5 ಪುಟದ ಮನವಿಯನ್ನ ಸಲ್ಲಿಸುತ್ತಿದ್ದೇವೆ. ಅದರಂತೆ ಸರ್ಕಾರ ಬೇಡಿಕೆಗಳನ್ನ ಈಡೇರಿಸಿದರೆ ನೌಕರರಿಗೆ ಅನುಕೂಲವಾಗುತ್ತದೆ ಎಂದು ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆನಂದ್ ತಿಳಿಸಿದ್ದಾರೆ.

ಇದನ್ನೂ ಓದಿ

ಬಜೆಟ್​ನಲ್ಲಿ ಸಾರಿಗೆ ನೌಕರರ ಬೇಡಿಕೆಗಳಿಗೆ ಎಳ್ಳು ನೀರು ಹಿನ್ನೆಲೆ; ಮತ್ತೆ ಮುಷ್ಕರಕ್ಕೆ ಮುಂದಾಗ್ತಾರಾ ಸಾರಿಗೆ ನೌಕರರು?

ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಫೆಬ್ರವರಿಯಲ್ಲಿ ಮತ್ತೆ ಇಳಿಕೆ; 2020ರ ಸೆಪ್ಟೆಂಬರ್ ನಂತರ ಕನಿಷ್ಠ ಪ್ರಮಾಣಕ್ಕೆ

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ