ಕೆಸರುಮಯ ರಸ್ತೆಯಲ್ಲಿ ಪುಟ್ಟ ಬಾಲಕ ಟ್ರ್ಯಾಕ್ಟರ್ ಓಡಿಸುವ ವಿಡಿಯೋವನ್ನು ಹಂಚಿಕೊಂಡ ಆನಂದ್ ಮಹೀಂದ್ರಾ; ವಿಡಿಯೋ ವೈರಲ್

ನಿಮ್ಮ ಮಗುವಿನ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ. ಆದರೆ ಟ್ರಾಕ್ಟರ್​ನೊಂದಿಗೆ ಆಟವಾಡುವಾಗ ಮಕ್ಕಳ ಬಗ್ಗೆ ಜಾಗರೂಕರಾಗಿರಬೇಕು ಅಂತ ಕ್ಯಾಪ್ಶನ್ ಬರೆದು ಟ್ರಾಕ್ಟರ್​ನೊಂದಿಗೆ ಆಟವಾಡುವ ಮಗುವಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಕೆಸರುಮಯ ರಸ್ತೆಯಲ್ಲಿ ಪುಟ್ಟ ಬಾಲಕ ಟ್ರ್ಯಾಕ್ಟರ್ ಓಡಿಸುವ ವಿಡಿಯೋವನ್ನು ಹಂಚಿಕೊಂಡ ಆನಂದ್ ಮಹೀಂದ್ರಾ; ವಿಡಿಯೋ ವೈರಲ್
ಟ್ರ್ಯಾಕ್ಟರ್ ಓಡಿಸುತ್ತಿರುವ ಪುಟ್ಟ ಬಾಲಕ
Follow us
TV9 Web
| Updated By: sandhya thejappa

Updated on:Dec 15, 2021 | 12:24 PM

ಮಹೀಂದ್ರಾ ಗ್ರೂಪ್ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರು ಟ್ವಿಟರ್​ನಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ಅವರ ಕೆಲವೊಂದು ಹಾಸ್ಯಮಯ ಟ್ವೀಟ್​ಗಳು ಹೆಚ್ಚು ಜನಪ್ರಿಯತೆ ಗಳಿಸಿವೆ. ಜೊತೆಗೆ ವೈರಲ್ ಕೂಡಾ ಆಗಿವೆ. ಅದರಂತೆ ಭಾನುವಾರ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪುಟ್ಟ ಬಾಲಕನೊಬ್ಬ ಕೆಸರುಮಯ ರಸ್ತೆಯಲ್ಲಿ ತನ್ನ ಪುಟ್ಟ ಟ್ರ್ಯಾಕ್ಟರ್​ನ ಓಡಿಸುವ ವಿಡಿಯೋವನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ.

ನಿಮ್ಮ ಮಗುವಿನ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ. ಆದರೆ ಟ್ರಾಕ್ಟರ್​ನೊಂದಿಗೆ ಆಟವಾಡುವಾಗ ಮಕ್ಕಳ ಬಗ್ಗೆ ಜಾಗರೂಕರಾಗಿರಬೇಕು ಅಂತ ಕ್ಯಾಪ್ಶನ್ ಬರೆದು ಟ್ರಾಕ್ಟರ್​ನೊಂದಿಗೆ ಆಟವಾಡುವ ಮಗುವಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಮಹೀಂದ್ರಾ ಅವರು ಪೋಸ್ಟ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆನಂದ್ ಮಹೀಂದ್ರಾ ಅವರು ಇದೀಗೆ ಕೇವಲ ಉದ್ಯಮಿಯಾಗಿಲ್ಲ. ಯಶಸ್ವಿ ಉದ್ಯಮಿ ಜೊತೆಗೆ ಟ್ವಿಟರ್​ನಲ್ಲಿ ರಾಕ್ ಸ್ಟಾರ್ ಆಗಿದ್ದಾರೆ. ಬಾಲಕ ತನ್ನ ಪುಟ್ಟ ಆಟಿಕೆ ಟ್ರಾಕ್ಟರ್ ಸಹಾಯದಿಂದ ಮಣ್ಣಿನ ರಸ್ತೆಯಲ್ಲಿ ಸಿಲುಕಿರುವ ಅಗೆಯುವ ಯಂತ್ರವನ್ನು ಹೊರತೆಗೆಯಲು ಪ್ರಯತ್ನಿಸುತ್ತಿರುವ ಮುದ್ದಾದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಬಾಲಕ ತನ್ನ ಆಟಿಕೆ ಟ್ರ್ಯಾಕ್ಟರ್​ಗೆ ಅಗೆಯುವ ಯಂತ್ರವನ್ನು ಹಗ್ಗದಿಂದ ಕಟ್ಟಿ ಎಳೆಯಲು ಪ್ರಯತ್ನಿಸುತ್ತಿದ್ದಾನೆ. ಈ ವೇಳೆ ಅಗೆಯುವ ಯಂತ್ರದ ಚಾಲಕನೂ ಕೂಡಾ ಬಾಲಕನಿಗೆ ಪ್ರೋತ್ಸಾಹಿಸಲು ನಿಧಾನವಾಗಿ ಚಲಿಸುತ್ತಾನೆ.

ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ಸುಮಾರು 4.2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನ ಪಡೆದುಕೊಂಡಿದ್ದು, 30,000 ಲೈಕ್​ಗಳನ್ನು ಗಳಿಸಿದೆ.

ಇದನ್ನೂ ಓದಿ

Ola electric scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್​ಗಳ ಡೆಲಿವರಿ ಇಂದಿನಿಂದ ಶುರು

ವರನಿದ್ದ ಕುದುರೆ ಗಾಡಿಗೆ ಬೆಂಕಿ! ತಪ್ಪಿತು ಬಾರಿ ದೊಡ್ಡ ಅನಾಹುತ; ವಿಡಿಯೋ ವೈರಲ್

Published On - 12:23 pm, Wed, 15 December 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ