AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: 3 ಲಕ್ಷ ರೂ. ಟಿಪ್​​ ಪಡೆದ ಮಹಿಳಾ ಸರ್ವರ್ ರೆಸ್ಟೋರೆಂಟ್​ ಕೆಲಸದಿಂದ ಅಮಾನತು!

Viral Video: ಓವನ್ ಮತ್ತು ಟ್ಯಾಪ್ ಎಂಬ ಹೆಸರಿನ ರೆಸ್ಟೋರೆಂಟ್‌ಗೆ ಊಟ ಮಾಡಲು ಬಂದಿದ್ದ 40ಕ್ಕೂ ಹೆಚ್ಚು ಜನರು ವೇಟರ್​ಗೆ ಸುಮಾರು 3,34,786 ರೂ.ಗಳ (4,400 ಯುಎಸ್​ಡಿ) ಟಿಪ್ಸ್​ ನೀಡಿದ್ದರು. ಅದಾದ ನಂತರ ಬರೋಬ್ಬರಿ 3 ಲಕ್ಷ ರೂ. ಟಿಪ್ಸ್​ ಪಡೆದ ಆ ವೇಟರ್​ಳನ್ನು ರೆಸ್ಟೋರೆಂಟ್ ಕೆಲಸದಿಂದ ವಜಾಗೊಳಿಸಿದೆ.

Shocking News: 3 ಲಕ್ಷ ರೂ. ಟಿಪ್​​ ಪಡೆದ ಮಹಿಳಾ ಸರ್ವರ್ ರೆಸ್ಟೋರೆಂಟ್​ ಕೆಲಸದಿಂದ ಅಮಾನತು!
ವಜಾ ಆದ ವೇಟರ್
TV9 Web
| Edited By: |

Updated on:Dec 15, 2021 | 4:40 PM

Share

ರೆಸ್ಟೋರೆಂಟ್​, ಹೋಟೆಲ್​ಗೆ ಹೋದಾಗ ಅಲ್ಲಿನ ಸಪ್ಲೈಯರ್ ಅಥವಾ ವೇಟರ್​ಗೆ ಟಿಪ್​ ಕೊಡುವ ಪದ್ಧತಿಯಿದೆ. ಆದರೆ, ಈ ಟಿಪ್​​ನಿಂದಲೇ ವೇಟರ್ ಒಬ್ಬಳು ಕೆಲಸ ಕಳೆದುಕೊಂಡು ಘಟನೆ ಅಮೆರಿಕದ ಅರ್ಕಾನ್ಸಾಸ್‌ನಲ್ಲಿ ನಡೆದಿದೆ. ಓವನ್ ಮತ್ತು ಟ್ಯಾಪ್ ಎಂಬ ಹೆಸರಿನ ರೆಸ್ಟೋರೆಂಟ್‌ಗೆ ಊಟ ಮಾಡಲು ಬಂದಿದ್ದ 40ಕ್ಕೂ ಹೆಚ್ಚು ಜನರು ವೇಟರ್​ಗೆ ಸುಮಾರು 3,34,786 ರೂ.ಗಳ (4,400 ಯುಎಸ್​ಡಿ) ಟಿಪ್ಸ್​ ನೀಡಿದ್ದರು. ಅದಾದ ನಂತರ ಬರೋಬ್ಬರಿ 3 ಲಕ್ಷ ರೂ. ಟಿಪ್ಸ್​ ಪಡೆದ ಆ ವೇಟರ್​ಳನ್ನು ರೆಸ್ಟೋರೆಂಟ್ ಕೆಲಸದಿಂದ ವಜಾಗೊಳಿಸಿದೆ.

ರಿಯಾನ್ ಬ್ರಾಂಡ್ಟ್ ಎಂಬ ಹೆಸರಿನ ಸರ್ವರ್ ಹಾಗೂ ಇನ್ನೊಬ್ಬಳು ಸರ್ವರ್ ಗ್ರಾಹಕರಿಂದ ಟಿಪ್ಸ್​ ಪಡೆದಿದ್ದರು. ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ ನಂತರ ಪ್ರತಿಯೊಬ್ಬರಿಗೂ ಗ್ರಾಹಕರು 100 USD (ತಲಾ 7,600 ರೂ.) ಟಿಪ್ಸ್​ ನೀಡಿದ್ದರು. ವೈರಲ್ ಆಗಿರುವ ಈ ಘಟನೆಯ ವೀಡಿಯೊದಲ್ಲಿ ಗ್ರಾಂಟ್ ವೈಸ್ ಎಂಬ ಅತಿಥಿಯು ರಿಯಾನ್‌ನೊಂದಿಗೆ ನಿಂತುಕೊಂಡು ಅವರ ಟೇಬಲ್‌ನಲ್ಲಿರುವ ಪ್ರತಿಯೊಬ್ಬರೂ ಸರ್ವರ್‌ಗಳಿಗೆ ಟಿಪ್ ಮಾಡಲು ಭಾರಿ ಮೊತ್ತವನ್ನು ಹೇಗೆ ನೀಡಿದ್ದಾರೆ ಎಂಬುದರ ಕುರಿತು ಮಾತನಾಡುವುದನ್ನು ಕಾಣಬಹುದು. ಅದನ್ನು ಕೇಳಿ ರಿಯಾನ್ ಕಣ್ತುಂಬಿಕೊಂಡು ಧನ್ಯವಾದ ತಿಳಿಸಿದ್ದಾರೆ.

ಆದರೆ, ಫಾಕ್ಸ್ 59ರ ವರದಿಯ ಪ್ರಕಾರ, ಅದರ ನಂತರ ರಿಯಾನ್​ಳನ್ನು ತನ್ನ ಕೆಲಸದಿಂದ ವಜಾ ಮಾಡಲಾಯಿತು. ರಿಯಾನ್​ಗೆ ಸಿಕ್ಕಿದ ಟಿಪ್ಸ್​ ಅನ್ನು ಎಲ್ಲ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲು ರೆಸ್ಟೋರೆಂಟ್ ಹೇಳಿತ್ತು. ಆದರೆ, ರಿಯಾನ್ ಅದಕ್ಕೆ ಒಪ್ಪಿರಲಿಲ್ಲ. ಅದು ತನಗೆ ನೀಡಿದ ಟಿಪ್ಸ್​ ಆದ್ದರಿಂದ ಯಾರಿಗೂ ಕೊಡುವುದಿಲ್ಲ ಎಂದು ಬ್ರಾಂಡ್ಟ್ ಹೇಳಿದ್ದರು. ಅವರು ಓವನ್ ಮತ್ತು ಟ್ಯಾಪ್‌ನಲ್ಲಿ ಕೆಲಸ ಮಾಡಿದ ಮೂರೂವರೆ ವರ್ಷಗಳಲ್ಲಿ ಇಷ್ಟು ದೊಡ್ಡ ಮಟ್ಟದ ಟಿಪ್ಸ್​ ಅನ್ನು ಯಾರೂ ನೀಡಿರಲಿಸಿಲ್ಲ.

ಆದರೆ, ಆ ಟಿಪ್ಸ್​ ಪಡೆದ ನಂತರ ಆಕೆಯನ್ನು ವಜಾಗೊಳಿಸಲಾಯಿತು. ಟಿಪ್ಸ್​ ಅನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಸಿದ್ಧವಿಲ್ಲದ ಕಾರಣ ರಿಯಾನ್​ಳನ್ನು ವಜಾಗೊಳಿಸಲಾಗಿದೆ. ನನಗೆ ಜೀವನ ಮಾಡಲು ಯಾವುದೇ ಮಾರ್ಗವಿಲ್ಲ . ವಿದ್ಯಾರ್ಥಿ ಲೋನ್​ಗಾಗಿ ನಾನು ಭಾರೀ ಹಣವನ್ನು ಸಾಲ ಪಡೆದಿದ್ದೇನೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಸದ್ಯಕ್ಕೆ ಆ ಸಾಲವನ್ನು ಕಟ್ಟುತ್ತಿಲ್ಲ. ಆದರೆ, ಜನವರಿಯಿಂದ ಮತ್ತೆ ಸಾಲ ಕಟ್ಟಬೇಕಾಗುತ್ತದೆ. ಇನ್ನು ಹಣವನ್ನು ಎಲ್ಲಿಂದ ತರುವುದು ಎಂಬುದೇ ಗೊತ್ತಾಗುತ್ತಿಲ್ಲ ಎಂದು ರಿಯಾನ್ ಹೇಳಿದ್ದಾರೆ.

ಇದನ್ನೂ ಓದಿ: Shocking Video: ತನಗೆ ಮತ ಹಾಕದ ಯುವಕರಿಗೆ ಬಸ್ಕಿ ಹೊಡೆಸಿ, ಎಂಜಲು ನೆಕ್ಕಿಸಿದ ರಾಜಕಾರಣಿ; ಶಾಕಿಂಗ್ ವಿಡಿಯೋ ಇಲ್ಲಿದೆ

Shocking Video: ಪಟಾಕಿಯಿದ್ದ ಸ್ಕೂಟರ್ ಸ್ಫೋಟಗೊಂಡು ಅಪ್ಪ-ಮಗನ ದೇಹ ಛಿದ್ರ; ಶಾಕಿಂಗ್ ವಿಡಿಯೋ ವೈರಲ್

Published On - 4:40 pm, Wed, 15 December 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ