AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರನಿದ್ದ ಕುದುರೆ ಗಾಡಿಗೆ ಬೆಂಕಿ! ತಪ್ಪಿತು ಬಾರಿ ದೊಡ್ಡ ಅನಾಹುತ; ವಿಡಿಯೋ ವೈರಲ್

ಗುಜರಾತ್​ನ ಪಂಚಮಹಲ್ ಜಿಲ್ಲೆಯಲ್ಲಿ ಮದುವೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿತ್ತು. ಈ ವೇಳೆ ವರ ಕುದುರೆ ಗಾಡಿ ಏರಿ ಮೆರವಣಿಗೆ ಮೂಲಕ ಆಗಮಿಸುತ್ತಿದ್ದ. ಮೆರವಣಿಗೆಯಲ್ಲಿ ಜನರು ಪಟಾಕಿ ಸಿಡಿಸುತ್ತಾ ಸಂಭ್ರಮಿಸುತ್ತಿದ್ದರು.

ವರನಿದ್ದ ಕುದುರೆ ಗಾಡಿಗೆ ಬೆಂಕಿ! ತಪ್ಪಿತು ಬಾರಿ ದೊಡ್ಡ ಅನಾಹುತ; ವಿಡಿಯೋ ವೈರಲ್
ವರನಿದ್ದ ಕುದುರೆ ಗಾಡಿಗೆ ಬೆಂಕಿ ತಗುಲಿದೆ
TV9 Web
| Edited By: |

Updated on: Dec 15, 2021 | 11:35 AM

Share

ಮದುವೆ ಅಂದರೆ ಸಂಭ್ರಮ, ಸಡಗರ. ಆದರೆ ಈ ಸಂಭ್ರಮದಲ್ಲಿ ಆಗುವ ಅನಾಹುತಗಳ ಬಗ್ಗೆ ಮುನ್ನೆಚ್ಚರಿಕೆ ಇರಲ್ಲ. ಸಂತೋಷದ ಗಳಿಗೆಯಲ್ಲಿ ತೇಲುತ್ತಿರುವಾಗ ಅನಾಹುತಗಳ ಬಗ್ಗೆ ಯೋಚನೆಯೂ ಮಾಡಲ್ಲ. ಇದಕ್ಕೆ ಗುಜರಾತ್​ನ ಪಂಚಮಹಲ್ ಜಿಲ್ಲೆಯಲ್ಲಿ ನಡೆದ ಮದುವೆ ಮನೆಯೊಂದು ಸಾಕ್ಷಿಯಾಗಿದೆ. ಮದುವೆ ಮೆರವಣಿಗೆಯಲ್ಲಿ ಜನರು ಪಟಾಕಿ ಸಿಡಿಸುತ್ತಾ ಕುಣಿದು ಕುಪ್ಪಳಿಸಿದರು. ಈ ವೇಳೆ ಮೆರವಣಿಗೆಯಲ್ಲಿ ವರನಿದ್ದ ಕುದುರೆ ಗಾಡಿಗೆ ಬೆಂಕಿ ಹೊತ್ತಿಕೊಂಡಿದೆ. ಕುದುರೆ ಗಾಡಿಗೆ ಬೆಂಕಿ ಹೊತ್ತಿ ಉರಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗುಜರಾತ್​ನ ಪಂಚಮಹಲ್ ಜಿಲ್ಲೆಯಲ್ಲಿ ಮದುವೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿತ್ತು. ಈ ವೇಳೆ ವರ ಕುದುರೆ ಗಾಡಿ ಏರಿ ಮೆರವಣಿಗೆ ಮೂಲಕ ಆಗಮಿಸುತ್ತಿದ್ದ. ಮೆರವಣಿಗೆಯಲ್ಲಿ ಜನರು ಪಟಾಕಿ ಸಿಡಿಸುತ್ತಾ ಸಂಭ್ರಮಿಸುತ್ತಿದ್ದರು. ಆಗ ಕುದುರೆ ಗಾಡಿಯಲ್ಲಿ ಇರಿಸಿದ ಪಟಾಕಿಗೆ ಬೆಂಕಿ ಕಿಡಿ ತಗುಲಿದೆ. ವರ ಸ್ವಲ್ಪದರಲ್ಲೇ ಪಾರಾಗಿದ್ದು, ಬೆಂಕಿ ಹೊತ್ತಿಕೊಂಡಾಗ ವರ ಗಾಡಿಯಿಂದ ಜಿಗಿಯುತ್ತಿರುವ ದೃಶ್ಯ ವೈರಲ್ ಆದ ವಿಡಿಯೋದಲ್ಲಿ ಕಾಣಬಹುದು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಮದುವೆಯ ಮೆರವಣಿಗೆಯಲ್ಲಿ ನೆರೆದಿದ್ದವರು ಮತ್ತು ಜನರು ಬೆಂಕಿಯ ಮೇಲೆ ನೀರು ಸುರಿಯುವ ಮೂಲಕ ಬೆಂಕಿಯನ್ನು ನಂದಿಸುವ ಕೆಲಸ ಮಾಡಿದ್ದಾರೆ. ಬಳಿಕ ಸಮೀಪದ ಅಂಗಡಿಗಳಿಂದ ಅಗ್ನಿಶಾಮಕ ಯಂತ್ರಗಳನ್ನು ತಂದು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಈ ಎಲ್ಲ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗುತ್ತಿದೆ.

ಇದನ್ನೂ ಓದಿ

ಕ್ರೀಡಾ ಚಟುವಟಿಕೆ ನಡೆಸದೆ ಕ್ರೀಡಾ ನಿಧಿ ಶುಲ್ಕ ಸಂಗ್ರಹಕ್ಕೆ ಮುಂದಾದ ಸಾರ್ವಜನಿಕ ಶಿಕ್ಷಣ ಇಲಾಖೆ, ಪೋಷಕರ ಆಕ್ರೋಶ

2022ರ IIFA​ ಉತ್ಸವವನ್ನು ನಿರೂಪಣೆ ಮಾಡಲಿದ್ದಾರೆ ಬಾಲಿವುಡ್​ ನಟ ಸಲ್ಮಾನ್​ ಖಾನ್