AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

viral video: ಮಹಾರಾಷ್ಟ್ರದಲ್ಲಿ ಮಿಸಲ್ ಪಾವ್​ ಸವಿದ ಸಚಿನ್​ ತೆಂಡೂಲ್ಕರ್: ವೀಡಿಯೋ ವೈರಲ್​

ಭಾರತೀಯ ಕ್ರಿಕೆಟ್​ ತಂಡದ ಮಾಜಿ ನಾಯಕ ಸಚಿನ್​ ತೆಂಡೂಲ್ಕರ್​ ಮಹಾರಾಷ್ಟ್ರದ ಮಿಸಲ್​ ಪಾವ್​ ಅನ್ನು ತಿಂದ ವೀಡಿಯೋ ಹಂಚಿಕೊಂಡಿದ್ದಾರೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

viral video: ಮಹಾರಾಷ್ಟ್ರದಲ್ಲಿ ಮಿಸಲ್ ಪಾವ್​ ಸವಿದ ಸಚಿನ್​ ತೆಂಡೂಲ್ಕರ್: ವೀಡಿಯೋ ವೈರಲ್​
ಸಚಿನ್​ ತೆಂಡೂಲ್ಕರ್
TV9 Web
| Updated By: Pavitra Bhat Jigalemane|

Updated on: Dec 14, 2021 | 2:48 PM

Share

ಮಹಾರಾಷ್ಟ್ರ: ಭಾರತೀಯ ಕ್ರಿಕೆಟ್​ ತಂಡದ ಮಾಜಿ ನಾಯಕ ಸಚಿನ್​ ತೆಂಡೂಲ್ಕರ್​ ಮಹಾರಾಷ್ಟ್ರದ ಮಿಸಲ್​ ಪಾವ್​ ಅನ್ನು ತಿಂದ ವೀಡಿಯೋ ಹಂಚಿಕೊಂಡಿದ್ದಾರೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಹಾರಾಷ್ಟ್ರದ ಪ್ರಸಿದ್ಧ ತಿನಿಸುಗಳಲ್ಲಿ ಮಿಸಲ್​ ಪಾವ್ ಕೂಡ ಒಂದು. ಅದನ್ನು ಬಾಯಿಚಪ್ಪರಿಸಿ ತಿನ್ನುವ ವೀಡಿಯೋವನ್ನು ಸಚಿನ್​ ಶೇರ್​ ಮಾಡಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್​ ಹಾಗೂ ಟ್ವಿಟರ್​ ಎರಡರಲ್ಲೂ ವಿಡಿಯೋ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ 25 ಸೆಕೆಂಡ್​ಗಳ ಸಚಿನ್​ ಮಿಸಲ್​​ ಪಾವ್​ ಸವಿಯುತ್ತಿರುವ ವೀಡಿಯೋ 5.5 ಮಿಲಿಯನ್​ ವೀಕ್ಷಣೆ ಪಡೆದುಕೊಂಡಿದೆ. ಅದೇ ರೀತಿ ಟ್ವಿಟರ್​ನಲ್ಲಿ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.

ವೈರಲ್​ ಆಗಿರುವ ವೀಡಿಯೋದಲ್ಲಿ ಸಚಿನ್​ ಮೊದಲು ಮಿಸಲ್​ ಗೆ ನಂಬೆ ರಸವನ್ನು ಹಾಕಿಕೊಳ್ಳುತ್ತಾರೆ ಬಳಿಕ ಪಾವ್​ ಅಥವಾ ಬ್ರೆಡ್​ನ ತುಂಡನ್ನು ಹಾಕಿಕೊಂಡು ತಿನ್ನುತ್ತಾರೆ. ಸಚಿನ್ ಮಿಸಲ್​ ಪಾವ್​ ಅನ್ನು ಖುಷಿಯಿಂದ ತಿನ್ನುತ್ತಿರುವುದನ್ನು ಕಾಣಬಹುದು. ಈ ಬಗ್ಗೆ ಸಚಿನ್​ ಮಿಸಲ್​​ ಪಾವ್​ ತನಗೆ ಬರ್ಮೀಸ್​ ಖಾವೋ ಸೂಯಿಯನ್ನು (ಬರ್ಮೀಸ್​ ಖಾವೋ ಸೂಯಿ ಎಂದರೆ ನೂಡಲ್ಸ್ ಸೂಪ್​. ಇದನ್ನು ಮೊಟ್ಟೆ ಮತ್ತು ಚಿಕನ್​ನಿಂದಲೂ ಮಾಡುತ್ತಾರೆ)ನೆನಪಿಸುತ್ತದೆ ಎಂದಿದ್ದಾರೆ. ಅದೇ ರೀತಿ ಮಿಸಲ್​ ಪಾವ್​ ಕಿ ಕುಚ್​ ಬಾತ್ ಹೈ ಅಲಗ್ ಹೈ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಸಚಿನ್ ಭಾನುವಾರ ಮಹಾರಾಷ್ಟ್ರಕ್ಕೆ ತೆರಳಿದ್ದ ವೇಳೆ ಮಿಸಲ್​ ಪಾವ್​ ಅನ್ನು ಸವಿದಿದ್ದಾರೆ ಅದರ ಮಿಸಲ್​​ ಪಾವ್​ರುಚಿಯನ್ನು ವಿವರಿಸುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಮದುವೆ ಮಂಟಪದಲ್ಲಿ ತಮಾಷೆ ಮಾಡಿದ ವರನ ಸ್ನೇಹಿತರಿಗೆ ಸರಿಯಾದ ಉತ್ತರ ಕೊಟ್ಟ ವಧು; ವಿಡಿಯೋ ನೋಡಿ

Viral video: ಗಂಭೀರ ಸ್ಥಿತಿಯಲ್ಲಿದ್ದ ಕೋತಿಗೆ ಉಸಿರು ನೀಡಿ ಪ್ರಾಣ ಉಳಿಸಿದ ಕಾರು ಚಾಲಕ; ವಿಡಿಯೋ ವೈರಲ್

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ