ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವೇದಿಕೆ ಮೇಲೆ ವಧು-ವರರು ಪರಸ್ಪರ ಹೂ ಮಾಲೆಯನ್ನು ಬದಲಾಯಿಸಿಕೊಳ್ಳಲು ನಿಂತಿರುವುದನ್ನು ಗಮನಿಸಬಹುದು. ಈ ಸಂದರ್ಭದಲ್ಲಿ ವರನ ಸ್ನೇಹಿತರು ವರನನ್ನು ಮೇಲೆ ಎತ್ತಲು ಪ್ರಯತ್ನಿಸಿ ವಧುವನ್ನು ಕಾಡಿಸಲು ಮುಂದಾಗಿದ್ದಾರೆ. ಆದರೆ ಇದನ್ನು ಕಂಡ ವಧು ಮಂಟಪದಲ್ಲಿನ ಆಸನದಲ್ಲಿ ಕುಳಿತಿಕೊಳ್ಳುತ್ತಾಳೆ. ಹೀಗಾಗಿ ಸೋತ ಸ್ನೇಹಿತರು ವರನನ್ನು ಕೆಳಗಿಳಿಸಿದ್ದಾರೆ. ಚಾಣಾಕ್ಷತೆಯಿಂದ ವಧು ಹೂ ಮಾಲೆ ಹಾಕಿದ್ದಾಳೆ. ಸದ್ಯ ಈ ತಮಾಷೆಯ ವಿಡಿಯೋ ವೈರಲ್ ಆಗಿದೆ.
ಯುಟ್ಯೂಬ್ನಲ್ಲಿ ಈ ತಮಾಷೆಯ ವಿಡಿಯೋ ಹಂಚಿಕೊಳ್ಳಾಗಿದ್ದು, ನೆಟ್ಟಿಗರು ಈ ವಿಡಿಯೋವನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಕಮೆಂಟ್ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ದೃಶ್ಯ ನಿಜಕ್ಕೂ ತಮಾಷೆಯಾಗಿದೆ. ಇದನ್ನು ನೋಡಿದ ನಂತರ ನನ್ನ ನಗು ತಡೆಯಲಾಗುತ್ತಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಇದು ಅತ್ಯಂತ ತಮಾಷೆಯ ವಿಡಿಯೋ ಎಂದು ಹೇಳಿದ್ದಾರೆ. ಇನ್ನು ಅನೇಕರು ವಧುವನ್ನು ವಿಭಿನ್ನ ರೀತಿಯಲ್ಲಿ ಹೊಗಳಿದ್ದಾರೆ.
ಇದನ್ನೂ ಓದಿ:
Viral Video: ಮದುವೆಗೆ ತಂದ ಕೇಕ್ ಕಣ್ಣ ಮುಂದೆಯೇ ನೆಲದ ಪಾಲಾಯ್ತು; ವಧು-ವರರ ರಿಯಾಕ್ಷನ್ ಹೇಗಿತ್ತು ಗೊತ್ತಾ?
Viral Video: ನವಜೋಡಿಗೆ ಸ್ನೇಹಿತರು ನೀಡಿದ ಉಡುಗೊರೆ ಹೇಗಿತ್ತು ಗೊತ್ತಾ? ವೈರಲ್ ಆದ ವಿಡಿಯೋ ನೋಡಿ