Viral Video: ಮ್ಯೂಸಿಕಲ್ ಚೇರ್ ಆಟದ ಕೊನೆಯಲ್ಲಿ ದೊಪ್ಪನೆ ಬಿದ್ದ ಯುವತಿ; ಕುರ್ಚಿ ಸತ್ತಿದೆ ಎಂದ ನೆಟ್ಟಿಗರು

ಕುರ್ಚಿಯ ಸುತ್ತಲೂ ಓಡಿ ಅದನ್ನು ಎಳೆದ ಯುವತಿಯೊಬ್ಬಳು ಹಾರಿ ಕೂರಲು ಪ್ರಯತ್ನಿಸುತ್ತಾಳೆ. ಇದರಿಂದಾಗಿ ಆ ಕುರ್ಚಿ ಮುರಿದಿದ್ದು, ಕುರ್ಚಿ ಸಮೇತ ಆಕೆ ನೆಲಕ್ಕೆ ಬೀಳುತ್ತಾಳೆ. ಈ ತಮಾಷೆಯ ವಿಡಿಯೋವನ್ನು ಕಂಡ ನೆಟ್ಟಿಗರು ಹಾಸ್ಯಲೋಕದಲ್ಲಿ ತೇಲಾಡಿದ್ದಾರೆ.

Viral Video: ಮ್ಯೂಸಿಕಲ್ ಚೇರ್ ಆಟದ ಕೊನೆಯಲ್ಲಿ ದೊಪ್ಪನೆ ಬಿದ್ದ ಯುವತಿ; ಕುರ್ಚಿ ಸತ್ತಿದೆ ಎಂದ ನೆಟ್ಟಿಗರು
ಮ್ಯೂಸಿಕಲ್ ಚೇರ್ ಆಟ
Follow us
TV9 Web
| Updated By: preethi shettigar

Updated on: Dec 13, 2021 | 3:25 PM

ಮ್ಯೂಸಿಕಲ್ ಚೇರ್ ಆಟವನ್ನು (Musical chair) ಶಾಲಾ-ಕಾಲೇಜು ದಿನಗಳಲ್ಲಿ ಅಥವಾ ಇನ್ನಿತರ ಸಮಾರಂಭಗಳಲ್ಲಿ ಖುಷಿಗಾಗಿ ಅಥವಾ ಮನರಂಜನೆಯ ಭಾಗವಾಗಿ ಸ್ನೇಹಿತರ ಜತೆ ಆಡಿರುತ್ತೇವೆ. ವಾಸ್ತವವಾಗಿ ಈ ಆಟದ ವಿಶೇಷತೆಯೆಂದರೆ ಇದು ಸಂಗೀತದೊಂದಿಗೆ ಹೊಂದಿಕೊಂಡಿರುತ್ತದೆ. ಇತ್ತೀಚೆಗೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೂಡ ತಮ್ಮ ಮೆಹಂದಿ ಕಾರ್ಯಕ್ರಮದಲ್ಲಿ ಈ ಆಟವನ್ನು ಕುಟುಂಬದವರೊಂದಿಗೆ ಆಡಿ ಖುಷಿಪಟ್ಟಿದ್ದಾರೆ. ಸದ್ಯ ಇದೇ ಆಟಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ. ಇದನ್ನು ನೋಡಿದ ಜನ ಮುಗಿಬಿದ್ದು ನಗುತ್ತಿದ್ದಾರೆ.

ವೈರಲ್ ಆಗುತ್ತಿರುವ ಈ ವಿಡಿಯೋ ಒಂದು ಕಾರ್ಯಕ್ರಮದಲ್ಲಿ ಮ್ಯೂಸಿಕಲ್ ಚೇರ್ ಆಟ ಆಡುತ್ತಿರುವುದನ್ನು ತೋರಿಸುತ್ತದೆ. ಈ ವಿಡಿಯೋ ಆಟದ ಕೊನೆಯ ಹಂತದ್ದಾಗಿದ್ದು, ಇಬ್ಬರು ಮ್ಯೂಸಿಕಲ್ ಚೇರ್ ಆಟ ಆಡುತ್ತಿರುವುದಾಗಿದೆ. ಈ ಆಟದಲ್ಲಿ ಜಯ ಗಳಿಸಲು ಇಬ್ಬರು ಯುವತಿಯರು ಓಡುತ್ತಿದ್ದು, ಮ್ಯೂಸಿಕ್​ ನಿಂತ ಕೂಡಲೇ ಇಬ್ಬರಲ್ಲಿ ಒಬ್ಬಳು ಚೇರ್ ಎಳೆದು ಕೂರುತ್ತಾಳೆ. ಕೂತ ನಂತರದಲ್ಲಿ ನಡೆದ ಘಟನೆ ಸದ್ಯ ಎಲ್ಲೆಡೆ ವೈರಲ್ ಆಗಿದೆ.

ಕುರ್ಚಿಯ ಸುತ್ತಲೂ ಓಡಿ ಅದನ್ನು ಎಳೆದ ಯುವತಿಯೊಬ್ಬಳು ಹಾರಿ ಕೂರಲು ಪ್ರಯತ್ನಿಸುತ್ತಾಳೆ. ಇದರಿಂದಾಗಿ ಆ ಕುರ್ಚಿ ಮುರಿದಿದ್ದು, ಕುರ್ಚಿ ಸಮೇತ ಆಕೆ ನೆಲಕ್ಕೆ ಬೀಳುತ್ತಾಳೆ. ಈ ತಮಾಷೆಯ ವಿಡಿಯೋವನ್ನು ಕಂಡ ನೆಟ್ಟಿಗರು ಹಾಸ್ಯಲೋಕದಲ್ಲಿ ತೇಲಾಡಿದ್ದಾರೆ.

View this post on Instagram

A post shared by hepgul5 (@hepgul5)

ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ ಕಮೆಂಟ್ ಮೂಲಕ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಹಿರಿಯರು ಮ್ಯೂಸಿಕಲ್ ಚೇರ್ ಆಡದಿರಲು ಇದೇ ಕಾರಣ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಕುರ್ಚಿ ಕೂಡ ಈ ಆಟ ಬೇಡ ಎನ್ನುತ್ತಿರಬಹುದು ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ. ಇನ್ನು ಕೆಲವರು ಕುರ್ಚಿ ಸತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಒಂದು ದಿನದ ಹಿಂದೆ ಶೇರ್ ಮಾಡಿರುವ ಈ ವಿಡಿಯೋಗೆ 20 ಸಾವಿಕ್ಕೂ ಹೆಚ್ಚು ಲೈಕ್ಸ್ ಬಂದಿದೆ ಮತ್ತು ಅನೇಕರು ಈ ವಿಡಿಯೋವನ್ನು ರಿಪೋಸ್ಟ್​ ಕೂಡ ಮಾಡಿದ್ದಾರೆ.

ಇದನ್ನೂ ಓದಿ: ವೇದಿಕೆಯ ಮೇಲೆ ಬೆಕ್ಕಿನಂತೆ ಮ್ಯಾಂವ್​ ಎಂದು ಕೂಗಿದ ಭುವನ ಸುಂದರಿ ಹರ್ನಾಜ್​ ಕೌರ್​ ಸಂಧು-ವೀಡಿಯೋ ವೈರಲ್​

Viral Video: ಬೆಟ್ಟದಿಂದ ಬೈಕ್ ಸಮೇತ ಜಂಪ್ ಮಾಡಿದ ಸವಾರ; ಡೇಂಜರಸ್ ವಿಡಿಯೋ ಹೇಗಿತ್ತು ನೀವೇ ನೋಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ