AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಗುಜರಿ ಕಾರಿನ ಭಾಗಗಳಿಂದ ತಯಾರಾಯ್ತು ಹೆಲಿಕಾಪ್ಟರ್; ಟೇಕಾಫ್ ಆದ ಚಾಪರ್ ವಿಡಿಯೋ ವೈರಲ್

Trending News: ಮೋಟಾರು ಸೈಕಲ್‌ಗಳು, ಟ್ರಕ್‌ಗಳು, ಕಾರುಗಳು ಮತ್ತು ಬೈಸಿಕಲ್‌ಗಳ ಭಾಗಗಳನ್ನು ಚಾಪರ್‌ನ ನಿರ್ಮಾಣದಲ್ಲಿ ಬಳಸಲಾಗಿದೆ. ಈ ವಿಚಿತ್ರವಾದ ಆವಿಷ್ಕಾರವನ್ನು ನೋಡಿ ಜನರು ಅಚ್ಚರಿಗೊಂಡಿದ್ದಾರೆ.

Viral Video: ಗುಜರಿ ಕಾರಿನ ಭಾಗಗಳಿಂದ ತಯಾರಾಯ್ತು ಹೆಲಿಕಾಪ್ಟರ್; ಟೇಕಾಫ್ ಆದ ಚಾಪರ್ ವಿಡಿಯೋ ವೈರಲ್
ಕಾರಿನ ಹಳೆಯ ಭಾಗಗಳಿಂದ ಸಿದ್ಧಪಡಿಸಲಾದ ಹೆಲಿಕಾಪ್ಟರ್
TV9 Web
| Edited By: |

Updated on:Dec 13, 2021 | 1:10 PM

Share

ಕಸದಿಂದ ರಸ ಎಂಬ ಮಾತಿದೆ. ಬೇಡವಾದ ವಸ್ತುಗಳಿಂದ ಹೇಗೆ ಉಪಯೋಗಕ್ಕೆ ಬರುವ ವಸ್ತುಗಳನ್ನು ತಯಾರಿಸಬಹುದು ಎಂಬುದು ಕೂಡ ಒಂದು ಕಲೆ. ಅದೇ ರೀತಿ ಬ್ರೆಜಿಲ್‌ನ ವ್ಯಕ್ತಿಯೊಬ್ಬರು ಸ್ಕ್ರ್ಯಾಪ್ ಮಾಡಿದ ಕಾರುಗಳ (Scrapped Cars) ಭಾಗಗಳಿಂದ ಹೆಲಿಕಾಪ್ಟರ್ (Helicopter) ಅನ್ನು ನಿರ್ಮಿಸಿದ್ದು, ಗುಜರಿ ವಸ್ತುಗಳಿಂದ ತಯಾರಿಸಿದ ಹೆಲಿಕಾಪ್ಟರ್ ಆಗಸದಲ್ಲಿ ಹಾರಾಡುತ್ತಿರುವ ವಿಡಿಯೋ ವೈರಲ್ (Video Viral) ಆಗಿದೆ.

ರಿಯೊ ಗ್ರಾಂಡೆ ಡೊ ನಾರ್ಟೆಯಲ್ಲಿ ಚಿತ್ರೀಕರಿಸಿದ ಈ ವಿಡಿಯೋದಲ್ಲಿ, ಸ್ಥಳೀಯ ಜನರು ಭಯಭೀತರಾಗಿ, ಆತಂಕದಲ್ಲಿ ನೋಡ ನೋಡುತ್ತಿದ್ದಂತೆ ಈ ಹೆಲಿಕಾಪ್ಟರ್​ನ ನಿರ್ಮಾತೃ ತನ್ನ ‘ಜುಗಾದ್’ ಚಾಪರ್ ಅನ್ನು ಆಗಸಕ್ಕೆ ಹಾರಿಸಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ, ಈ ಚಾಪರ್ ಅನ್ನು ಉಪಯೋಗಕ್ಕೆ ಬಾರದೆ ಗುಜರಿಗೆ ಹಾಕಲಾಗಿದ್ದ ಕಾರಿನ ಭಾಗಗಳಿಂದ ತಯಾರಿಸಲಾಗಿದೆ. ಫೋಕ್ಸ್‌ವ್ಯಾಗನ್ ಬೀಟಲ್‌ನ ಎಂಜಿನ್‌ನಿಂದ ಈ ಹೆಲಿಕಾಪ್ಟರ್​ ಹಾರಾಡುತ್ತದೆ. ಈ ವಿಚಿತ್ರವಾದ ಆವಿಷ್ಕಾರವನ್ನು ನೋಡಿ ಜನರು ಅಚ್ಚರಿಗೊಂಡಿದ್ದಾರೆ. ಮೋಟಾರು ಸೈಕಲ್‌ಗಳು, ಟ್ರಕ್‌ಗಳು, ಕಾರುಗಳು ಮತ್ತು ಬೈಸಿಕಲ್‌ಗಳ ಭಾಗಗಳನ್ನು ಚಾಪರ್‌ನ ನಿರ್ಮಾಣದಲ್ಲಿ ಬಳಸಲಾಗಿದೆ.

ವೈರಲ್ ಅಗಿರುವ ವಿಡಿಯೋದಲ್ಲಿ, ಜೊವೊ ಡಯಾಸ್ ನಗರದ ನಿವಾಸಿ ಜೆನೆಸಿಸ್ ಗೋಮ್ಸ್ ಅವರು ರನ್‌ವೇಯಾಗಿ ಬಳಸುವ ರಸ್ತೆಯಲ್ಲಿ ವಿಮಾನವನ್ನು ಸರಾಗವಾಗಿ ಓಡಿಸುತ್ತಿರುವುದನ್ನು ಕಾಣಬಹುದು. ಹೆಲಿಕಾಪ್ಟರ್ ಅನ್ನು ಸ್ವಲ್ಪ ದೂರಕ್ಕೆ ತೆಗೆದುಕೊಂಡು ಹೋದ ನಂತರ, ಜನರು ಆಶ್ಚರ್ಯದಿಂದ ನೋಡುತ್ತಿರುವಾಗ ಗೋಮ್ಸ್ ತನ್ನ ಹೆಲಿಕಾಪ್ಟರ್​ ಅನ್ನು ಹಾರಿಸಿದ್ದಾರೆ. ಗೋಮ್ಸ್ ಬಾಲ್ಯದಿಂದಲೂ ವಾಯುಯಾನದಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಯಾವಾಗಲೂ ಹೆಲಿಕಾಪ್ಟರ್ ಹಾರಿಸಬೇಕೆಂದು ಬಯಸಿದ್ದರು ಎಂದು ಸ್ಥಳೀಯ ಸುದ್ದಿ ಔಟ್ಲೆಟ್ ಕೈಕೊ ವರದಿ ಮಾಡಿದೆ.

ಆದರೆ, ಅವರಿಗೆ ಹೆಲಿಕಾಪ್ಟರ್​ ಹಾರಿಸಲು ಅವಕಾಶ ಸಿಗದಿದ್ದಾಗ, ತಮ್ಮದೇ ಆದ ಹೆಲಿಕಾಪ್ಟರ್ ನಿರ್ಮಿಸಲು ನಿರ್ಧರಿಸಿದರು. ಈ ವೀಡಿಯೊದಲ್ಲಿರುವ ಹೆಲಿಕಾಪ್ಟರ್ ನನ್ನ ಸ್ನೇಹಿತನದು ಎಂದು ಗೋಮ್ಸ್ ಸ್ಪಷ್ಟನೆ ನೀಡಿದ್ದು, ಮುಂದೊಂದು ದಿನ ನಾನೇ ಪ್ರೈವೇಟ್ ಹೆಲಿಕಾಪ್ಟರ್ ಅನ್ನು ನಿರ್ಮಿಸುತ್ತೇನೆ. ಇದು ಗೆಳೆಯನಿಗಾಗಿ ನಾನು ನಿರ್ಮಿಸಿಕೊಟ್ಟ ಚಾಪರ್ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಬಾಯಾರಿದ ನಾಯಿಮರಿಗೆ ಬೋರ್​ವೆಲ್​ ಪಂಪ್ ಹೊಡೆದು ನೀರು ಕುಡಿಸಿದ ಬಾಲಕ; ವಿಡಿಯೋ ವೈರಲ್

Shocking News: ಯುವತಿಯಿಂದಲೇ ಸಮಾಧಿ ತೋಡಿಸಿ, ಆಕೆಯನ್ನು ಕೊಂದು ಹೂತು ಹಾಕಿದ ಕಿರಾತಕರು!

Published On - 1:09 pm, Mon, 13 December 21