AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೇದಿಕೆಯ ಮೇಲೆ ಬೆಕ್ಕಿನಂತೆ ಮ್ಯಾಂವ್​ ಎಂದು ಕೂಗಿದ ಭುವನ ಸುಂದರಿ ಹರ್ನಾಜ್​ ಕೌರ್​ ಸಂಧು-ವೀಡಿಯೋ ವೈರಲ್​

ಆ್ಯಂಕರ್​ ಹಾರ್ವೆ ಅವರು ಹರ್ನಾಜ್ ಬಳಿ ಇಷ್ಟದ ಪ್ರಾಣಿಯ ಬಗ್ಗೆ ಕೇಳಿದರು. ಮುಂದುವರೆದು ಅದರ ಅನುಕರಣೆ ಮಾಡುವಂತೆ ಕೇಳಿದಾಗ ಹರ್ನಾಜ್ ಬೆಕ್ಕಿನಂತೆ ಮ್ಯಾಂವ್​ ಎಂದಿದ್ದಾರೆ. ಇದರ ವೀಡಿಯೋ ವೈರಲ್​ ಆಗಿದೆ.

ವೇದಿಕೆಯ ಮೇಲೆ ಬೆಕ್ಕಿನಂತೆ ಮ್ಯಾಂವ್​ ಎಂದು ಕೂಗಿದ ಭುವನ ಸುಂದರಿ ಹರ್ನಾಜ್​ ಕೌರ್​ ಸಂಧು-ವೀಡಿಯೋ ವೈರಲ್​
ಆ್ಯಂಕರ್​ ಸ್ವೀವ್​ರೊಂದಿಗೆ ಹರ್ನಾಜ್​ ಸಂಧು
TV9 Web
| Edited By: |

Updated on: Dec 13, 2021 | 1:07 PM

Share

2021 ರ ಭುವನ ಸುಂದರಿಯಾಗಿ ಚಂಡೀಗಢ ಮೂಲದ ಹರ್ನಾಜ್​ ಕೌರ್​ ಸಂಧು ಆಯ್ಕೆಯಾಗಿದ್ದಾರೆ. ಇಸ್ರೇಲ್​ನ ಐಲಾಟ್​ನಲ್ಲಿ ನಡೆದ 70ನೇ ಮಿಸ್​ ಯುನಿವರ್ಸ್​ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 21 ವರ್ಷದ ಹರ್ನಾಜ್​ ಸಂಧು ಭುವನ ಸುಂದರಿಯಾಗಿ ಪಟ್ಟ ಮುಡಿಗೇರಿಸಿಕೊಂಡಿದ್ದಾರೆಈ ಮೂಲಕ 21 ವರ್ಷಗಳ ಬಳಿಕ ಭಾರತಕ್ಕೆ ಮಿಸ್​ ಯುನಿವರ್ಸ್​ ಪಟ್ಟ ದೊರಕಿದೆ. 2000ರಲ್ಲಿ ಲಾರಾದತ್ತ ಭುವನ ಸುಂದರಿಯಾಗಿ ಹೊರಹೊಮ್ಮಿದ್ದರು. ಅವರ ಬಳಿಕ ಈಗ ಹರ್ನಾಜ್​ ಸಂಧು 2021ರ ಮಿಸ್​ ಯುನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಗೆದ್ದ ಹರ್ನಾಜ್​ ಸಂಧು ಅವರಿಗೆ ಮೆಕ್ಸಿಕೊದ 2020ರಮಾಜಿ ವಿಶ್ವ ಸುಂದರಿ ಆಂಡ್ರಿಯಾ ಮೆಜಾ ಅವರು ಕಿರೀಟವನ್ನು ತೊಡಿಸಿದ್ದಾರೆ. ವಿವಿಧ ದೇಶಗಳಿಂದ ಆಗಮಿಸಿದ 79 ಮಂದಿ ಸ್ಪರ್ಧಿಗಳನ್ನು ಹಿಂದಿಕ್ಕಿ 21 ವರ್ಷದ ಹರ್ನಾಜ್​ ಮಿಸ್​ ಯುನಿವರ್ಸ್ ಆಗಿದ್ದಾರೆ. ಪ್ರಶಸ್ತಿ ಮುಡಿಗೇರಿಸಿಕೊಂಡ ಹರ್ನಾಜ್ ವೇದಿಕೆಯ ಮೇಲೆ ಹೆಜ್ಜೆ ಹಾಕಿ ಚಕ್ ದೇ ಪಟ್ಟೆ ಇಂಡಿಯಾ ಎಂದು ಕೂಗಿದ್ದಾರೆ.

ಭುವನ ಸುಂದರಿಯಾಗಿ ಹೊರಹೊಮ್ಮಿದ ಹರ್ನಾಜ್​ ಅವರ ವೇದಿಕೆಯಲ್ಲಿನ ವೀಡಿಯೋವೊಂದು ಈಗ ಇಂಟರ್​ನೆಟ್​ನಲ್ಲಿ ವೈರಲ್ ಆಗಿದೆ. ವಿನ್ನರ್​ ಘೋಷಣೆಗೂ ಮೊದಲು ವೇದಿಕೆಯ ಮೇಲೆ ಕಾರ್ಯಕ್ರಮದ ನಿರೂಪಕ ಸ್ಟೀವ್​ ಹಾರ್ವೆ ಬಳಿ ಮಾತನಾಡುವಾಗ ಹರ್ನಾಜ್ ಬೆಕ್ಕಿನ ಧ್ವನಿಯಲ್ಲಿ ಕೂಗಿದ ವೀಡಿಯೋ ವೈರಲ್​ ಆಗಿದೆ. ಆ್ಯಂಕರ್​ ಹಾರ್ವೆ ಅವರು ಹರ್ನಾಜ್ ಬಳಿ ನಿಮ್ಮ ಇಷ್ಟದ ಪ್ರಾಣಿಯ ಬಗ್ಗೆ ಹೇಳಿ ಕೇಳಿದರು. ಮುಂದುವರೆದು ಅದರ ಅನುಕರಣೆ ಮಾಡುವಂತೆ ಕೇಳಿದಾಗ ಹರ್ನಾಜ್ ನನ್ನಿಷ್ಟದ ಪ್ರಾಣಿಯ ಅನುಕರಣೆಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾಡುತ್ತೇನೆ ಎಂದು ಭಾವಿಸಿರಲಿಲ್ಲ ಎಂದು ನಕ್ಕಿದ್ದಾರೆ. ಬಳಿಕ ಹರ್ನಾಜ್ ಬೆಕ್ಕಿನಂತೆ ಮ್ಯಾಂವ್​ ಎಂದಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಹರ್ನಾಜ್ ಅವರ ಮುಗ್ಧತೆ ನೆಟ್ಟಿಗರ ಮನ ಸೆಳೆದಿದೆ. ಚಂಡೀಗಡ ಮೂಲದ ಹರ್ನಾಜ್ ಇಸ್ರೇಲ್​ನಲ್ಲಿ ನಡೆದ ಸ್ಪರ್ದೆಯಲ್ಲಿ ಗೆದ್ದು 21 ವರ್ಷಗಳ ಬಳಿಕ ಭಾರತಕ್ಕೆ ಮಿಸ್​ ಯುನಿವರ್ಸ್ ಪ್ರಶಸ್ತಿ ದೊರಕುವಂತೆ ಮಾಡಿದ್ದಾರೆ.

ಇದನ್ನೂ ಓದಿ:

2021ರ ವಿಶ್ವ ಸುಂದರಿ ಪಟ್ಟ ಗೆದ್ದ ಹರ್ನಾಜ್​ ಸಂಧು ಯಾರು ಗೊತ್ತಾ? ತೀರ್ಪುಗಾರರು ಮನಸೋತಿದ್ದು ಹರ್ನಾಜ್ ಅವರ ಈ ಉತ್ತರಕ್ಕೆ- ಇಲ್ಲಿದೆ ಸ್ಟೋರಿ

Miss Universe 2021: ಭುವನ ಸುಂದರಿಯಾಗಿ ಹೊರಹೊಮ್ಮಿದ ಭಾರತದ ಹರ್ನಾಜ್ ಸಂಧು

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ