AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆಗೆ ತಂದ ಕೇಕ್​ ಕಣ್ಣ ಮುಂದೆಯೇ ನೆಲದ ಪಾಲಾಯ್ತು; ವಧು-ವರರ ರಿಯಾಕ್ಷನ್​ ಹೇಗಿತ್ತು ಗೊತ್ತಾ?

ವೈರಲ್ ಆದ ಈ ವಿಡಿಯೋದಲ್ಲಿ ಮದುವೆಗಾಗಿ ಸಿದ್ಧಪಡಿಸಿದ ವಿಶೇಷ ಗಾತ್ರದ ಕೇಕ್ ಅನ್ನು ಸ್ಥಳಕ್ಕೆ ತರುವಾಗ ಹೋಟೆಲ್ ಸಿಬ್ಬಂದಿ ಆಕಸ್ಮಿಕವಾಗಿ ಇದನ್ನು ಕೆಳಕ್ಕೆ ಬಿಳಿಸಿದ್ದಾನೆ. ಇದನ್ನು ಕಂಡ ವಧು-ವರರು ಆಘಾತಕ್ಕೊಳಗಾಗಿದ್ದಾರೆ. ಆದರೆ ಅಂತಿಮವಾಗಿ ಇದರಲ್ಲೊಂದು ದೊಡ್ಡ ಟ್ವಿಸ್ಟ್ ಇತ್ತು.

Viral Video: ಮದುವೆಗೆ ತಂದ ಕೇಕ್​ ಕಣ್ಣ ಮುಂದೆಯೇ ನೆಲದ ಪಾಲಾಯ್ತು; ವಧು-ವರರ ರಿಯಾಕ್ಷನ್​ ಹೇಗಿತ್ತು ಗೊತ್ತಾ?
ಕೇಕ್​ ಕೆಳಗೆ ಬಿದ್ದ ಕ್ಷಣ
TV9 Web
| Updated By: preethi shettigar|

Updated on: Dec 07, 2021 | 12:29 PM

Share

ಮದುವೆಗಳನ್ನು ಭರ್ಜರಿಯಾಗಿ, ಅದ್ದೂರಿಯಾಗಿ ಆಚರಿಸುವವರಿದ್ದಾರೆ. ಅದರಲ್ಲೂ ವಿದೇಶಗಳಲ್ಲಿ ಮದುವೆ (Marriage) ಎಂದರೆ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಅಲ್ಲಿ ಕೆಲವು ವಿಚಿತ್ರ ಪದ್ಧತಿಗಳಿರುತ್ತದೆ. ಅದರಲ್ಲೂ ಪಾರ್ಟಿಗೆ ಹೆಚ್ಚು ಒತ್ತುಕೊಡುವ ಅಲ್ಲಿನ ಜನ ಕೇಕ್ (Cake) ಕತ್ತರಿಸಿಯೇ ಮದುವೆಯನ್ನು ಪೂರ್ಣಗೊಳಿಸುತ್ತಾರೆ. ಇತ್ತೀಚೆಗೆ ಎಲ್ಲಾ ಕಡೆಯ ಮದುವೆ ಸಮಾರಂಭಗಳಲ್ಲೂ ಕೇಕ್ ಕತ್ತರಿಸುವ ಪದ್ಧತಿ ಇದೆ. ಸದ್ಯ ಮದುವೆ ಸಮಾರಂಭದಲ್ಲಿ ನವಜೋಡಿ ಕೇಕ್​ನಿಂದಾಗಿ ಒಂದು ಕ್ಷಣ ಭಯಭೀತರಾಗಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆದ ಈ ವಿಡಿಯೋದಲ್ಲಿ ಮದುವೆಗಾಗಿ ಸಿದ್ಧಪಡಿಸಿದ ವಿಶೇಷ ಗಾತ್ರದ ಕೇಕ್ ಅನ್ನು ಸ್ಥಳಕ್ಕೆ ತರುವಾಗ ಹೋಟೆಲ್ ಸಿಬ್ಬಂದಿ ಆಕಸ್ಮಿಕವಾಗಿ ಇದನ್ನು ಕೆಳಕ್ಕೆ ಬಿಳಿಸಿದ್ದಾನೆ. ಇದನ್ನು ಕಂಡ ವಧು-ವರರು ಆಘಾತಕ್ಕೊಳಗಾಗಿದ್ದಾರೆ. ಆದರೆ ಅಂತಿಮವಾಗಿ ಇದರಲ್ಲೊಂದು ದೊಡ್ಡ ಟ್ವಿಸ್ಟ್ ಇತ್ತು. ಅದೆನೆಂದರೆ ಹೋಟೆಲ್ ಸಿಬ್ಬಂದಿ ಮೊದಲು ನೆಲಕ್ಕೆ ಬೀಳಿಸಿದ ಕೇಕ್ ನಕಲಿಯಾಗಿತ್ತು. ನವದಂಪತಿಯ ಕಾಲು ಎಳೆಯುವ ಉದ್ದೇಶದಿಂದ ಈ ರೀತಿ ಯೋಜನೆ ರೂಪಿಸಲಾಗಿತ್ತು. ಬಳಿಕ ಅಸಲಿ ಕೇಕ್ ತರಿಸಿದ್ದು, ನವಜೋಡಿ ಕೇಕ್ ಕತ್ತರಿಸಿದ್ದಾರೆ.

ಪ್ರಪೋಸಲ್, ವೆಡ್ಡಿಂಗ್, ಎಂಗೇಜ್‌ಮೆಂಟ್ ಎಂಬ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೈರಲ್ ಆದ ಈ ವಿಡಿಯೋ 2 ಮಿಲಿಯನ್ ವ್ಯೂವ್ಸ್ ಪಡೆದಿದೆ. ದೇವರಿಗೆ ಧನ್ಯವಾದಗಳು ಇದು ತಮಾಷೆಯಾಗಿತ್ತು!! ಆದರೆ ಬಹುತೇಕ ನಮಗೆ ಕಣ್ಣೀರು ಬಂತು. ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.

ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ವಧು-ವರರು ಶೃಂಗಾರಗೊಂಡು ಆಗಮಿಸಿದ್ದರು. ಸಿಬ್ಬಂದಿ ತಮ್ಮ ಕೇಕ್ ಅನ್ನು ಬೀಳಿಸಿದುದ್ದನ್ನು ನೋಡಿದ ದಂಪತಿ ಆಘಾತಕ್ಕೊಳಗಾದರು. ಆದಾಗ್ಯೂ, ಕೆಲವು ನಿಮಿಷಗಳ ನಂತರ ಸತ್ಯ ಬಯಲಾಗಿದ್ದು, ಇಬ್ಬರು ನಿರಾಳ ಭಾವ ತೋರಿದ್ದಾರೆ. ನೆಟ್ಟಿಗರು ಕೂಡ ಈ ವಿಡಿಯೋ ಕಂಡು ಆಘಾತಕ್ಕೊಳಗಾಗಿದ್ದು, ಅಂತಿಮವಾಗಿ ಇದು ಕುಚೆಷ್ಟೇ ಎಂದು ಸುಮ್ಮನಾಗಿದ್ದಾರೆ.

ಇದನ್ನೂ ಓದಿ: Viral Video: ಕಾಡು ಬೆಕ್ಕನ್ನು ಬೆದರಿಸಿದ ಪುಟ್ಟ ನಾಯಿ ಮರಿ; ವಿಡಿಯೋ ಆಯ್ತು ವೈರಲ್​

ನೀಳವಾದ ಕೂದಲು ಹೊಂದಿದ್ದ ಮಾಡೆಲ್​ಗೆ ಕೆಟ್ಟ ಹೇರ್ ಸ್ಟೈಲ್ ಮಾಡಿ 2 ಕೋಟಿ ರೂ. ದಂಡ ಕಟ್ಟಿದ ಹೊಟೆಲ್; ನಿಜವಾಗ್ಯೂ ನಡೆದದ್ದೇನು?

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ