AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಾಡು ಬೆಕ್ಕನ್ನು ಬೆದರಿಸಿದ ಪುಟ್ಟ ನಾಯಿ ಮರಿ; ವಿಡಿಯೋ ಆಯ್ತು ವೈರಲ್​

ಮನೆಯ ಗಾಜಿನ ಬಾಗಿಲಿನ ಆ ಕಡೆ ಕಾಡು ಬೆಕ್ಕು ಬಂದು ನಿಂತರೂ ಹೆದರದೆ ಅದನ್ನೇ ದಿಟ್ಟಿಸಿ ನೋಡುತ್ತಿದ್ದ ಪುಟ್ಟ ನಾಯಿ ಮರಿಯನ್ನು ಈ ವಿಡಿಯೋದಲ್ಲಿ ನಾವು ನೋಡಬಹುದು.

Viral Video: ಕಾಡು ಬೆಕ್ಕನ್ನು ಬೆದರಿಸಿದ ಪುಟ್ಟ ನಾಯಿ ಮರಿ; ವಿಡಿಯೋ ಆಯ್ತು ವೈರಲ್​
ಕಾಡು ಬೆಕ್ಕಿಗೆ ಹೆದರದೆ ಪುಟ್ಟ ನಾಯಿ ಮರಿಯೊಂದು ಮುಖವೊಡ್ಡಿನಿಂತ ವಿಡಿಯೋ
TV9 Web
| Edited By: |

Updated on: Dec 07, 2021 | 11:36 AM

Share

ಪ್ರತಿನಿತ್ಯ ನಮ್ಮ ಮಾತನ್ನು ಕೇಳುತ್ತಾ, ಮನೆಯ ಪಾಲಕನಾಗಿ ಇಡೀ ದಿನ ಕರ್ತವ್ಯಕ್ಕೆ ಬದ್ಧವಾಗಿ ಕೆಲಸ ಮಾಡುವ ಪ್ರಾಣಿ ನಾಯಿ. ನೀಯತ್ತಿಗೆ ಹೆಸರಾಗಿ ಮೋಟು ಬಾಲ ಅಲ್ಲಾಡಿಸುತ್ತಾ, ಬೌ.. ಬೌ ಎನ್ನುವ ಒಂದೇ ಭಾಷೆಯಲ್ಲಿ ಎಲ್ಲವನ್ನೂ ಅರ್ಥೈಸುತ್ತಾ ಮನೆಯ ಕಾವಲಾಗಿ ನಿಲ್ಲುತ್ತದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನಾಯಿ (Dog) ಮನೆಗೆ ಕಾವಲಾಗಿ ನಿಂತ ವಿಡಿಯೋ ವೈರಲ್ (Video viral) ಆಗಿದೆ. ಮನೆ ಮುಂದೆ ಬಂದ ಕಾಡು ಬೆಕ್ಕಿಗೆ ಹೆದರದೆ ಪುಟ್ಟ ನಾಯಿ ಮರಿಯೊಂದು ಮುಖವೊಡ್ಡಿನಿಂತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡುತ್ತಿದ್ದಂತೆಯೇ ನಿಮಗೂ ಆಶ್ಚರ್ಯವಾಗುತ್ತದೆ.

ಮನೆಯ ಗಾಜಿನ ಬಾಗಿಲಿನ ಆ ಕಡೆ ಕಾಡು ಬೆಕ್ಕು ಬಂದು ನಿಂತರೂ ಹೆದರದೆ ಅದನ್ನೇ ದಿಟ್ಟಿಸಿ ನೋಡುತ್ತಿದ್ದ ಪುಟ್ಟ ನಾಯಿ ಮರಿಯನ್ನು ಈ ವಿಡಿಯೋದಲ್ಲಿ ನಾವು ನೋಡಬಹುದು. ಡಿಸೆಂಬರ್ 2 ರಂದು ಮನೆಯ ಒಡತಿ ಸಾರಾ ಬೋಲೆ ಅವರು ಸಂಜೆ ಕೆಲಸದಿಂದ ಹಿಂದಿರುಗಿದಾಗ ಈ ವಿಲಕ್ಷಣ ದೃಶ್ಯ ಕಂಡಿದ್ದಾರೆ. ಅಲ್ಲದೇ ತಮ್ಮ ಮೊಬೈಲ್​ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಡ್ಯಾಶ್ ಎಂಬ ಹೆಸರಿನ ನಾಯಿ ಮರಿ ಗಾಜಿನ ಬಾಗಿಲ ಬಳಿ ನಿಂತು ಕಾಡು ಬೆಕ್ಕನ್ನು ಗಮನಿಸುತ್ತಿದ್ದು, ಸಾರಾ ತನ್ನ ಬಳಿ ನಾಯಿಯನ್ನು ಕರೆದರು ಅದು ಸ್ವಲ್ಪವೂ ಕೇಳಿಸದಂತೆ ಕಾಡು ಬೆಕ್ಕಿನ ಕಡೆಗೆ ತನ್ನ ಸಂಪೂರ್ಣ ಗಮನಹರಿಸಿದೆ.

2.54 ನಿಮಿಷದ ಈ ವಿಡಿಯೋದಲ್ಲಿ ದೂರದಲ್ಲಿದ್ದ ಕಾಡು ಬೆಕ್ಕು ಗಾಜಿನ ಬಾಗಿಲು ಇದೆ ಎಂದು ತಿಳಿಯದೇ ಹತ್ತಿರಬಂದ್ದು, ನಾಯಿಯನ್ನು ಬೇಟೆಯಾಡಲು ಪ್ರಯತ್ನಿಸಿದೆ. ಆದರೆ ಇದಕ್ಕೆ ಅಂಜದೆ ನಾಯಿ ಕಾಡು ಬೆಕ್ಕನ್ನು ಬೆದರಿಸಿದೆ. ಒಂದು ವೇಳೆ ಬಾಗಿಲು ತೆಗೆದಿದ್ದರೆ ಕಾಡು ಬೆಕ್ಕಿಗೆ ನಾಯಿ ಆಹಾರವಾಗುತ್ತಿತ್ತು ಎಂದು ವಿಡಿಯೋ ಕಂಡ ನೆಟ್ಟಿಗರು ಕಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಇಂದು ರಾತ್ರಿ ಕೆಲಸದಿಂದ ಮನೆಗೆ ಬಂದೆ ಮತ್ತು ಈ ದೃಶ್ಯ ನನ್ನ ಕಣ್ಣ ಮುಂದೆ ಬಿತ್ತು ಎಂಬ ಶೀರ್ಷಿಕೆಯೊಂದಿಗೆ ಬೋಲೆ ಅವರು ಫೇಸ್‌ಬುಕ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಪ್ರಿಯರನ್ನು ತನ್ನತ್ತ ಸೆಳೆದಿದೆ ಮತ್ತು ಅತಿ ಹೆಚ್ಚು ವ್ಯೂವ್ಸ್​ ಪಡೆದಿದೆ.

ಇದನ್ನೂ ಓದಿ:

Viral Video: ಸಲೂನ್​ಗೆ ಬಂದ ಕೋತಿ ಟ್ರಿಮ್ಮರ್​ಗೆ ಮುಖವೊಡ್ಡಿದ ವೈರಲ್​ ವಿಡಿಯೋ ನೋಡಿ

Viral Video: ಜಿಮ್​ನಲ್ಲಿ ಹುಡುಗಿಯನ್ನು ಇಂಪ್ರೆಸ್ ಮಾಡಲು ಟ್ರೆಡ್‌ಮಿಲ್‌ ಮೇಲೆ ಕಾಲಿಟ್ಟ ಹುಡುಗ; ತಮಾಷೆಯ ವಿಡಿಯೋ ವೈರಲ್

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್