AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಜಿಮ್​ನಲ್ಲಿ ಹುಡುಗಿಯನ್ನು ಇಂಪ್ರೆಸ್ ಮಾಡಲು ಟ್ರೆಡ್‌ಮಿಲ್‌ ಮೇಲೆ ಕಾಲಿಟ್ಟ ಹುಡುಗ; ತಮಾಷೆಯ ವಿಡಿಯೋ ವೈರಲ್

ಪ್ರತಿಯೊಬ್ಬರು ಫಿಟ್ ಆಗಿರಬೇಕು ಎಂದು ಇತ್ತೀಚೆಗೆ ಬಯಸುತ್ತಾರೆ. ಅದಕ್ಕಾಗಿಯೇ ಪ್ರತಿದಿನ ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಹರಿಸುತ್ತಾರೆ. ಆದರೆ ಕೆಲವರು ಎದುರಿಗಿನ ವ್ಯಕ್ತಿಯನ್ನು ತನ್ನತ್ತ ಸೆಳೆಯಲು ಜಿಮ್ ಹೋಗುತ್ತಾರೆ. ಇಂತಹದ್ದೇ ವಿಡಿಯೋ ಒಂದು ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಈ ತಮಾಷೆಯ ವಿಡಿಯೋ ಕಂಡು ಹಾಸ್ಯ ಲೋಕದಲ್ಲಿ ತೆಲಾಡಿದ್ದಾರೆ.

Viral Video: ಜಿಮ್​ನಲ್ಲಿ ಹುಡುಗಿಯನ್ನು ಇಂಪ್ರೆಸ್ ಮಾಡಲು ಟ್ರೆಡ್‌ಮಿಲ್‌ ಮೇಲೆ ಕಾಲಿಟ್ಟ ಹುಡುಗ; ತಮಾಷೆಯ ವಿಡಿಯೋ ವೈರಲ್
ಜಿಮ್​ನಲ್ಲಿ ನೆಲಕ್ಕೆ ಬಿದ್ದ ಯುವಕ
TV9 Web
| Updated By: preethi shettigar|

Updated on: Dec 07, 2021 | 9:01 AM

Share

ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವು ವಿಡಿಯೋಗಳು ನಗು ತಡೆಯಲಾರದಷ್ಟು ತಮಾಷೆಯಾಗಿರುತ್ತವೆ. ಅದೇ ಸಮಯದಲ್ಲಿ ಅನೇಕ ವೀಡಿಯೊಗಳು ಭಾವನಾತ್ಮಕವಾಗಿದ್ದು, ಕಣ್ಣಲ್ಲಿ ನೀರು ತರಿಸುತ್ತದೆ. ಇನ್ನು ನೋಡಿ ಬೆಚ್ಚಿ ಬೀಳುವ ಕೆಲವು ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಇದೀಗ ತಮಾಷೆಯ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಇದರಲ್ಲಿ ಹುಡುಗನೊಬ್ಬ ಹುಡುಗಿಯ ಎದುರು ಹೀರೋ ಆಗಲು ಹೋಗಿ ಮುಗ್ಗರಿಸಿ ಬಿದ್ದಿದ್ದಾನೆ.

ಪ್ರತಿಯೊಬ್ಬರು ಫಿಟ್ ಆಗಿರಬೇಕು ಎಂದು ಇತ್ತೀಚೆಗೆ ಬಯಸುತ್ತಾರೆ. ಅದಕ್ಕಾಗಿಯೇ ಪ್ರತಿದಿನ ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಹರಿಸುತ್ತಾರೆ. ಆದರೆ ಕೆಲವರು ಎದುರಿಗಿನ ವ್ಯಕ್ತಿಯನ್ನು ತನ್ನತ್ತ ಸೆಳೆಯಲು ಜಿಮ್ ಹೋಗುತ್ತಾರೆ. ಇಂತಹದ್ದೇ ವಿಡಿಯೋ ಒಂದು ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಈ ತಮಾಷೆಯ ವಿಡಿಯೋ ಕಂಡು ಹಾಸ್ಯ ಲೋಕದಲ್ಲಿ ತೆಲಾಡಿದ್ದಾರೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ಜಿಮ್ ಮಾಡುತ್ತಿರುವುದನ್ನು ನೀವು ನೋಡಬಹುದು. ಆಗಲೇ ಒಬ್ಬ ಹುಡುಗ ಅಲ್ಲಿಗೆ ಬಂದು ವ್ಯಾಯಾಮ ಮಾಡುವ ಹುಡುಗಿಯನ್ನು ಕರೆದು ಓಡುವ ಟ್ರೆಡ್‌ಮಿಲ್‌ನ ಮೇಲೆ ಹೆಜ್ಜೆ ಹಾಕುತ್ತಾನೆ. ಆದರೆ ಟ್ರೆಡ್​ಮಿಲ್​ ಮೇಲೆ ಕಾಲಿಡುತ್ತಿದ್ದಂತೆಯೇ ಅವನು ತಲೆಕೆಳಗಾಗಿ ನೆಲಕ್ಕೆ ಬೀಳುತ್ತಾನೆ. ಇನ್ನು ಬಿದ್ದರು ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆ ಮಾತಿನಂತೆ ನೆಲದಲ್ಲಿಯೇ ಕಸರತ್ತು ಮಾಡಿದವನಂತೆ ನಟಿಸುತ್ತಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಸದ್ದು ಮಾಡುತ್ತಿದ್ದು, ಅನೇಕರು ಕಮೆಂಟ್ ಮತ್ತು ರಿಪೋಸ್ಟ್ ಮಾಡಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನಾವು ಎಂದಿಗೂ ಪ್ರದರ್ಶನದ ಬಲೆಗೆ ಬೀಳಬಾರದು ಎಂದು ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದರೆ. ಮತ್ತೆ ಕೆಲವರು ಜಿಮ್​ನಲ್ಲಿ ಸ್ಟೈಲ್ ತೋರಿಸುವುದು ಅಪಾಯಕಾರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ತಮಾಷೆಯ ವೀಡಿಯೊವನ್ನು ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ 34 ಲಕ್ಷ ಕಮೆಂಟ್ ಬಂದಿದ್ದು, 1 ಕೋಟಿಗೂ ಹೆಚ್ಚು ವ್ಯೂವ್ಸ್ ಆಗಿದೆ.

ಇದನ್ನೂ ಓದಿ: Viral Video: ಸಲೂನ್​ಗೆ ಬಂದ ಕೋತಿ ಟ್ರಿಮ್ಮರ್​ಗೆ ಮುಖವೊಡ್ಡಿದ ವೈರಲ್​ ವಿಡಿಯೋ ನೋಡಿ

Viral Video: ಮದುವೆಯ ಸಂಭ್ರಮದಲ್ಲಿ ಪಿಜ್ಜಾ ರುಚಿ ಸವಿಯುತ್ತಿರುವ ವಧು; ವೈರಲ್​ ವಿಡಿಯೋ ನೋಡಿ

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ