Viral Video: ಮದುವೆ ಮಂಟಪಕ್ಕೆ ನುಗ್ಗಿ ಪ್ರೇಯಸಿಯ ಹಣೆಗೆ ಸಿಂಧೂರವಿಟ್ಟ ಯುವಕ; ತಾಳಿ ಕಟ್ಟಲು ರೆಡಿಯಾಗಿದ್ದ ವರ ಶಾಕ್!

Shocking Video: ಮದುವೆಯ ಸಮಯದಲ್ಲಿ ವಧು-ವರರು ಹೂವಿನ ಹಾರಗಳನ್ನು ಹಿಡಿದುಕೊಂಡು ಇನ್ನೇನು ಹಾರ ಬದಲಾಯಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮದುವೆ ಮಂಟಪದೊಳಗೆ ಓಡಿಬಂದ ಯುವಕ ವಧುವಿನ ಹಣೆಗೆ ಸಿಂಧೂರ ಇಟ್ಟಿದ್ದಾನೆ.

Viral Video: ಮದುವೆ ಮಂಟಪಕ್ಕೆ ನುಗ್ಗಿ ಪ್ರೇಯಸಿಯ ಹಣೆಗೆ ಸಿಂಧೂರವಿಟ್ಟ ಯುವಕ; ತಾಳಿ ಕಟ್ಟಲು ರೆಡಿಯಾಗಿದ್ದ ವರ ಶಾಕ್!
ಮದುವೆ ಮಂಟಪದಲ್ಲಿ ಯುವಕನ ಹುಚ್ಚಾಟ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 06, 2021 | 6:54 PM

ಲಕ್ನೋ: ಸಿನಿಮಾದಲ್ಲಿ ತೋರಿಸುವುದೆಲ್ಲ ಕಾಲ್ಪನಿಕ ಕತೆಗಳಾದರೂ ಸಿನಿಮಾದಲ್ಲಿ ತೋರಿಸುವ ರೀತಿಯಲ್ಲೇ ನಿಜ ಜೀವನದಲ್ಲೂ ಕೆಲವೊಮ್ಮೆ ಸಿನಿಮೀಯ ಘಟನೆಗಳು ನಡೆದುಬಿಡುತ್ತವೆ. ಇನ್ನು ಕೆಲವೊಮ್ಮೆ ನಿಜ ಜೀವನದ ಘಟನೆಗಳು ಚಲನಚಿತ್ರಗಳಲ್ಲಿ ತೋರಿಸುವ ಘಟನೆಗಳನ್ನು ಕೂಡ ಮೀರಿಸುತ್ತವೆ. ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದ ಒಂದು ವಿಚಿತ್ರವಾದ ಮದುವೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಮದುವೆಯ ಸಮಯದಲ್ಲಿ ವಧು-ವರರು ಹೂವಿನ ಹಾರಗಳನ್ನು ಹಿಡಿದುಕೊಂಡು ಇನ್ನೇನು ಹಾರ ಬದಲಾಯಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮದುವೆ ಮಂಟಪದೊಳಗೆ ಓಡಿಬಂದ ಯುವಕ ಅಲ್ಲಿದ್ದ ವಧುವಿನ ಹಣೆಗೆ ಸಿಂಧೂರ ಇಟ್ಟಿದ್ದಾನೆ. ಇದನ್ನು ನೋಡಿದ ವರ ಆಘಾತಕ್ಕೊಳಗಾಗಿದ್ದಾನೆ.

ಆ ಮದುವೆಮನೆಗೆ ಬಂದಿದ್ದ ವ್ಯಕ್ತಿಯೊಬ್ಬರು ಅಲ್ಲಿ ನಡೆದ ಸಂಪೂರ್ಣ ಘಟನೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಗೋರಖ್‌ಪುರದ ಬುಧಾತ್‌ನ ಹರ್‌ಪುರದಲ್ಲಿ ನಡೆದ ಮದುವೆ ಈ ರೀತಿಯ ಸಿನಿಮೀಯ ಘಟನೆಗೆ ಸಾಕ್ಷಿಯಾಗಿದೆ. ವರನು ವಧುವಿಗೆ ಹೂಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ಮುಖನ್ನು ಸ್ಕಾರ್ಫ್​ನಲ್ಲಿ ಮುಚ್ಚಿಕೊಂಡ ಯುವಕನೊಬ್ಬ ಮಂಟಪದೊಳಗೆ ಬಂದು ವಧುವಿನ ಹಣೆಗೆ ಸಿಂಧೂರ ಇಡುತ್ತಾನೆ. ಅದನ್ನು ವಿರೋಧಿಸುವ ಆಕೆ ತನ್ನ ಮುಖವನ್ನು ಮುಚ್ಚಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡದ ಆತ ಆಕೆಗೆ ಸಿಂಧೂರ ಇಡುತ್ತಾನೆ.

ಹಾಗೆ ಸಿಂಧೂರವನ್ನಿಟ್ಟ ವ್ಯಕ್ತಿ ವಧುವಿನ ಮಾಜಿ ಪ್ರೇಮಿಯಾಗಿದ್ದು, ಆತನ ಜೊತೆ ಆಕೆ ಬ್ರೇಕಪ್ ಮಾಡಿಕೊಂಡಿದ್ದಳು. ಆತ ಕೆಲವು ತಿಂಗಳ ಹಿಂದೆ ಕೆಲಸದ ನಿಮಿತ್ತ ಊರಿನಿಂದ ಹೊರಗೆ ಹೋಗಿದ್ದ. ಈ ಮಧ್ಯೆ, ಆ ಹುಡುಗಿಯ ಮದುವೆಯನ್ನು ಬೇರೆಯವರ ಜೊತೆ ಮಾಡಲು ನಿರ್ಧರಿಸಲಾಯಿತು. ಆ ವ್ಯಕ್ತಿಗೆ ವಿಷಯ ತಿಳಿದಾಗ, ಅವನು ತನ್ನ ಪ್ರೀತಿಯನ್ನು ಸಿನಿಮೀಯವಾಗಿ ಎಲ್ಲರೆದುರು ಹೇಳಿಕೊಳ್ಳಲು ಬಯಸಿದ.

ಹೀಗಾಗಿ, ಡಿಸೆಂಬರ್ 1ರಂದು ಮದುವೆ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಆತ ಬಲವಂತವಾಗಿ ಆಕೆಯ ಹಣೆಗೆ ಸಿಂಧೂರವನ್ನಿಟ್ಟಿದ್ದಾನೆ. ಆಕೆಯ ಮಾಜಿ ಪ್ರೇಮಿಯಿಂದ ಮದುವೆ ಮಂಟಪದಲ್ಲಿ ಗಲಾಟೆ ಸೃಷ್ಟಿಯಾದಾಗ ಕೆಲವು ಕುಟುಂಬ ಸದಸ್ಯರು 112ಗೆ ಕರೆ ಮಾಡಿದರು. ಪೊಲೀಸರಿಗೆ ದೂರನ್ನೂ ನೀಡಿದರು.

ಆತ ಸಿಂಧೂರ ಇಟ್ಟ ಮಾತ್ರಕ್ಕೆ ಆತನೊಂದಿಗೆ ಆ ವಧುವಿನ ಮದುವೆಯಾಗಲಿಲ್ಲ. ಪೊಲೀಸರು ಆ ಯುವಕನನ್ನು ವಶಕ್ಕೆ ಪಡೆದ ಬಳಿಕ ಮಾರನೇ ದಿನ ಬೆಳಗ್ಗೆ ಆ ಯುವತಿ ತನ್ನ ಮನೆಯವರು ನೋಡಿದ ಹುಡುಗನನ್ನೇ ಮದುವೆಯಾಗಿದ್ದಾಳೆ. ಅದೇ ದಿನ ಆ ಯುವಕನನ್ನು ಕೂಡ ಪೊಲೀಸರು ಮನೆಗೆ ಕಳುಹಿಸಿದರು.

ಇದನ್ನೂ ಓದಿ: Shocking News: ಹೋಂ ವರ್ಕ್ ಮಾಡದ ಮಗನ ಕೈ-ಕಾಲು ಕಟ್ಟಿ ಫ್ಯಾನ್​ಗೆ ನೇತು ಹಾಕಿದ ಅಪ್ಪ!

Viral News: ಕೃಷ್ಣನ ವಿಗ್ರಹದ ಮುರಿದ ಕೈಗೆ ಬ್ಯಾಂಡೇಜ್ ಹಾಕಿ; ಅರ್ಚಕನ ಬೇಡಿಕೆಗೆ ವೈದ್ಯರು ಶಾಕ್!

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ