Shocking News: ಹೋಂ ವರ್ಕ್ ಮಾಡದ ಮಗನ ಕೈ-ಕಾಲು ಕಟ್ಟಿ ಫ್ಯಾನ್​ಗೆ ನೇತು ಹಾಕಿದ ಅಪ್ಪ!

Crime News: ಉದಯ್‌ಪುರದ ಬುಂದಿ ಜಿಲ್ಲೆಯ ದಾಬಿಯಲ್ಲಿ ಈ ಘಟನೆ ನಡೆದಿದ್ದು, ಮಗನನ್ನು ಕಟ್ಟಿ, ತಲೆಕೆಳಗಾಗಿ ನೇತು ಹಾಕಿದಲ್ಲದೆ ಆತನಿಗೆ ಹೊಡೆಯಲು ಹೋಗಿದ್ದ. ಈ ದೃಶ್ಯವನ್ನು ವಿಡಿಯೋ ಮಾಡಿಕೊಂಡ ಆ ಬಾಲಕನ ತಾಯಿ ಬಳಿಕ  ಗಂಡನನ್ನು ತಡೆದಿದ್ದಾಳೆ.

Shocking News: ಹೋಂ ವರ್ಕ್ ಮಾಡದ ಮಗನ ಕೈ-ಕಾಲು ಕಟ್ಟಿ ಫ್ಯಾನ್​ಗೆ ನೇತು ಹಾಕಿದ ಅಪ್ಪ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 26, 2021 | 2:07 PM

ಉದಯಪುರ: ಮಗ ಹೋಂ ವರ್ಕ್ ಮಾಡಿಲ್ಲ ಎಂಬ ಸಿಟ್ಟಿನಿಂದ ತಂದೆ ತನ್ನ 8 ವರ್ಷದ ಮಗನನ್ನು ಫ್ಯಾನಿಗೆ ತಲೆಕೆಳಗಾಗಿ ನೇತು ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ. ಬಾಲಕ ಫ್ಯಾನ್​ಗೆ ನೇತಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ತಕ್ಷಣ ಆ ಬಾಲಕನ ತಾಯಿ ಹೋಗಿ ಮಗನನ್ನು ಬಿಡಿಸಿಕೊಂಡಿದ್ದಾಳೆ. ಇಲ್ಲದಿದ್ದರೆ ಅನಾಹುತವೇ ನಡೆದುಹೋಗುತ್ತಿತ್ತು.

ಮಗನ ಕೈ, ಕಾಲುಗಳನ್ನು ಕಟ್ಟಿ ಆತನನ್ನು ತಲೆ ಕೆಳಗಾಗಿ ಫ್ಯಾನ್​ಗೆ ನೇತು ಹಾಕಲಾಗಿತ್ತು. ಆತನಿಗೆ ಶಿಕ್ಷೆ ನೀಡಬೇಕೆಂದು ಮನಬಂದಂತೆ ಥಳಿಸಲು ಹೋದಾಗ ಆ ಬಾಲಕನ ತಾಯಿ ಬಂದು ಗಂಡನಿಂದ ತನ್ನ ಮಗನನ್ನು ಬಿಡಿಸಿಕೊಂಡಿದ್ದಾಳೆ. ಈ ಘಟನೆ ನಡೆದ ನಂತರ ಬಾಲಕನ ತಾಯಿ ಚಿತ್ತೋರ್​ಗಢದಲ್ಲಿರುವ ಜೋಗ್ನಿಯಮಠ ಪ್ರದೇಶಕ್ಕೆ ತೆರಳಿ ತನ್ನ ಮಾವನಿಗೆ ಆ ವಿಡಿಯೋವನ್ನು ತೋರಿಸಿದ್ದಾಳೆ. ತಕ್ಷಣ ಆತ ಮಕ್ಕಳ ಸಹಾಯವಾಣಿಗೆ ಫೋನ್ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಶಾಲೆಯಿಂದ ಮನೆಗೆ ಬಂದ ಮಗ ಹೋಂ ವರ್ಕ್‌ ಮಾಡಿಲ್ಲ ಎಂಬ ಕಾರಣಕ್ಕೆ ಆತನನ್ನು ತಲೆಕೆಳಗಾಗಿ ನೇತು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಉದಯ್‌ಪುರದ ಬುಂದಿ ಜಿಲ್ಲೆಯ ದಾಬಿಯಲ್ಲಿ ಈ ಘಟನೆ ನಡೆದಿದ್ದು, ಮಗನನ್ನು ಕಟ್ಟಿ, ತಲೆಕೆಳಗಾಗಿ ನೇತು ಹಾಕಿದಲ್ಲದೆ ಆತನಿಗೆ ಹೊಡೆಯಲು ಹೋಗಿದ್ದ. ಈ ದೃಶ್ಯವನ್ನು ವಿಡಿಯೋ ಮಾಡಿಕೊಂಡ ಆ ಬಾಲಕನ ತಾಯಿ ಬಳಿಕ  ಗಂಡನನ್ನು ತಡೆದಿದ್ದಾಳೆ. ಬೇಕಾದರೆ ನನ್ನನ್ನು ಇಲ್ಲೇ ಸಾಯಿಸಿಬಿಡು, ಆದರೆ, ಹೀಗೆಲ್ಲ ನೇತು ಹಾಕಬೇಡ ಎಂದು ಆ ಬಾಲಕ ಅಪ್ಪನ ಬಳಿ ಜೋರಾಗಿ ಅಳುತ್ತಾ ಬೇಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿತ್ತು.

ಬಾಲಕನ ತಂದೆ ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದು, ಪದೇ ಪದೆ ಮಗನನ್ನು ಹೊಡೆದು, ಹಿಂಸೆ ನೀಡುತ್ತಿದ್ದ. ಆದರೆ, ಈ ಘಟನೆಯ ಬಗ್ಗೆ ಮನೆಯವರಾರೂ ಆತನ ವಿರುದ್ಧ ದೂರು ನೀಡಿಲ್ಲ. ವಿಡಿಯೋ ಆಧಾರದಲ್ಲಿ ಪೊಲೀಸರೇ ಕೇಸ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Samantha: ಡಿವೋರ್ಸ್​ ಬಳಿಕ ಸಮಂತಾ ಗುಡ್​ ನ್ಯೂಸ್​; ಇಂಗ್ಲಿಷ್​ ಸಿನಿಮಾ ನಿರ್ದೇಶಕನನ್ನು ತಬ್ಬಿಕೊಂಡ ಫೋಟೋ ವೈರಲ್​

Viral Video: ಆನೆ ಮರಿಯ ಬಾಬ್ ಕಟ್ ಕೂದಲನ್ನು ಬಾಚಿದ ಮಾವುತನ ವಿಡಿಯೋ ವೈರಲ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ