Viral Video: ಆನೆ ಮರಿಯ ಬಾಬ್ ಕಟ್ ಕೂದಲನ್ನು ಬಾಚಿದ ಮಾವುತನ ವಿಡಿಯೋ ವೈರಲ್

Elephant Hair Style: ತಮಿಳುನಾಡಿನ ಆನೆಮರಿಯೊಂದು ತನ್ನ ಹೇರ್​ ಸ್ಟೈಲ್​ನಿಂದಲೇ ಗಮನ ಸೆಳೆಯುತ್ತಿದೆ. ಈ ಆನೆಗೆ ಬಾಬ್​ಕಟ್ ಸೆಂಗಮಲಂ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಬಾಬ್ ಕಟ್ ಕೇಶ ವಿನ್ಯಾಸ ಮಾಡಿಕೊಂಡಿರುವ ಈ ಆನೆಯ ಸ್ಟೈಲ್​ಗೆ ಫಿದಾ ಅಗದವರೇ ಇಲ್ಲ.

Viral Video: ಆನೆ ಮರಿಯ ಬಾಬ್ ಕಟ್ ಕೂದಲನ್ನು ಬಾಚಿದ ಮಾವುತನ ವಿಡಿಯೋ ವೈರಲ್
ಬಾಬ್ ಕಟ್ ಕೇಶ ವಿನ್ಯಾಸ ಮಾಡಿಕೊಂಡಿರುವ ಆನೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 20, 2021 | 2:56 PM

ಯುವಕರಿರಲಿ, ಯುವತಿಯರೇ ಇರಲಿ ಹೇರ್​ಸ್ಟೈಲ್​ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಹೊಸ ಹೊಸ ಹೇರ್​ಸ್ಟೈಲ್ ಮಾಡಿಸಿಕೊಳ್ಳಲು ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಆದರೆ, ಆನೆಯೂ ಹೇರ್​ಸ್ಟೈಲ್ ಮಾಡುತ್ತದೆ ಎಂದರೆ ನೀವು ನಂಬುತ್ತೀರಾ? ತಮಿಳುನಾಡಿನ ಆನೆಮರಿಯೊಂದು ತನ್ನ ಹೇರ್​ ಸ್ಟೈಲ್​ನಿಂದಲೇ ಗಮನ ಸೆಳೆಯುತ್ತಿದೆ. ಈ ಆನೆಗೆ ಬಾಬ್​ಕಟ್ ಸೆಂಗಮಲಂ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಬಾಬ್ ಕಟ್ ಕೇಶ ವಿನ್ಯಾಸ ಮಾಡಿಕೊಂಡಿರುವ ಈ ಆನೆಯ ಸ್ಟೈಲ್​ಗೆ ಫಿದಾ ಅಗದವರೇ ಇಲ್ಲ.

ಭೂಮಿಯ ಮೇಲಿನ ಅತ್ಯಂತ ಮುದ್ದಾದ ಪ್ರಾಣಿಗಳ ಪೈಕಿ ಆನೆಯೂ ಒಂದು. ಸೌಮ್ಯ ಮತ್ತು ಅತ್ಯಂತ ಬುದ್ಧಿವಂತ ಪ್ರಾಣಿಯಾಗಿರುವ ಆನೆಗಳಲ್ಲಿ ಬಾಬ್ ಕಟ್ ಹೇರ್ ಸ್ಟೈಲ್ ಹೊಂದಿರುವ ಆನೆಯ ಫೋಟೋ, ವಿಡಿಯೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ತಮಿಳುನಾಡಿನ ಆನೆಮರಿ ಮನ್ನಾರ್​ಗುಡಿಯ ರಾಜಗೋಪಾಲಸ್ವಾಮಿ ದೇವಸ್ಥಾನಕ್ಕೆ ಸೇರಿದ್ದಾಗಿದೆ. ಈ ಆನೆಮರಿಗೆ ಬಾಬ್ ಕಟ್ ಮಾಡಿಸಲಾಗಿದ್ದು, ಇದನ್ನು ಬಾಬ್ ಕಟ್ ಸೆಂಗಮಲಂ ಎಂದು ಕರೆಯಲಾಗುತ್ತದೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮಾವುತನು ಆನೆಯ ಬಾಬ್ ಕಟ್ ಕೂದಲು ಬಾಚುತ್ತಿದ್ದಾನೆ. ಈ ಆನೆಯ ಹಣೆಯ ಮೇಲೆ ದೊಡ್ಡ ತಿಲಕ ಕೂಡ ಇದೆ. ಮಾವುತ ಆನೆಯ ಕೂದಲನ್ನು ಬಾಚುವಾಗ ಆತನಿಗೆ ಸುಲಭವಾಗಲೆಂದು ಆನೆ ಕಾಲುಗಳನ್ನು ನೆಲಕ್ಕೆ ಬಗ್ಗಿಸಿ, ಬಾಗುತ್ತದೆ. ಈ ವಿಡಿಯೋ ಕೊಯಮತ್ತೂರಿನ ತೆಕ್ಕಂಪಟ್ಟಿ ಗ್ರಾಮದ್ದಾಗಿದೆ.

ಆನೆಯೊಂದು ತನ್ನ ಬಾಬ್ ಕಟ್ ಕೂದಲನ್ನು ಮಾವುತನ ಕೈಯಲ್ಲಿ ಬಾಚಿಸಿಕೊಳ್ಳುತ್ತಿರುವ ಕ್ಯೂಟ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆನೆ ಮರಿಯನ್ನು ತನ್ನ ಮಗುವಿನಂತೆ ನೋಡಿಕೊಳ್ಳುತ್ತಿರುವ ಮಾವುತನ ವಿಡಿಯೋ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ.

ಇದನ್ನೂ ಓದಿ: Smriti Irani: ತೂಕ ಇಳಿಸಿಕೊಂಡ ಸ್ಮೃತಿ ಇರಾನಿ ಫೋಟೋ ವೈರಲ್; ಬಾಲಿವುಡ್ ನಟಿಯರಿಂದಲೂ ಮೆಚ್ಚುಗೆ

Shocking Video: ದೆಹಲಿ ನಡುರಸ್ತೆಯಲ್ಲೇ ಕ್ಯಾಬ್ ಚಾಲಕನಿಗೆ ಥಳಿಸಿದ ಮಹಿಳೆ; ವಿಡಿಯೋ ವೈರಲ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ