Video: ವೇದಿಕೆ ಮೇಲೆ ಪ್ಯಾಂಟ್​ ಬಿಚ್ಚಿ ಅಭಿಮಾನಿ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ ಗಾಯಕಿ; ವಿಕೃತಿ ವಿರುದ್ಧ ನೆಟ್ಟಿಗರ ಆಕ್ರೋಶ

Sophia Urista: ಗಾಯಕಿ ಸೋಫಿಯಾ ಉರಿಸ್ಟಾ ಕ್ಷಮೆ ಕೇಳುವುದಕ್ಕೂ ಮೊದಲು ಮ್ಯೂಸಿಕಲ್ ಬ್ಯಾಂಡ್​ ಬ್ರಾಸ್​ ಅಗೇನೆಸ್ಟ್ ಕೂಡ ಜನರ ಕ್ಷಮೆ ಕೇಳಿದೆ. ರಾಕ್​ವಿಲ್ಲೆ ಉತ್ಸವದಲ್ಲಿ ಏನಾಯಿತೋ ಅದು ನಮ್ಮ ನಿರೀಕ್ಷೆಗೂ ಮೀರಿ ಆಗಿದ್ದು ಎಂದು ಹೇಳಿದೆ.

Video: ವೇದಿಕೆ ಮೇಲೆ ಪ್ಯಾಂಟ್​ ಬಿಚ್ಚಿ ಅಭಿಮಾನಿ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ ಗಾಯಕಿ; ವಿಕೃತಿ ವಿರುದ್ಧ ನೆಟ್ಟಿಗರ ಆಕ್ರೋಶ
ಗಾಯಕಿ ಉರಿಸ್ಟಾ
Follow us
TV9 Web
| Updated By: Lakshmi Hegde

Updated on:Nov 20, 2021 | 1:02 PM

ರಾಕ್​ ಸಂಗೀತವೆಂದರೆ ಅಲ್ಲಿ ಸ್ವಲ್ಪ ಅಬ್ಬರ ಇದ್ದೇ ಇರುತ್ತದೆ. ಗಾಯಕರೂ ಕೂಡ ಅತ್ಯುತ್ಸಾಹ, ಉದ್ರೇಕದಲ್ಲಿಯೇ ಹಾಡುತ್ತಾರೆ. ಅಂಥ ಸಂಗೀತ ಕೇಳುತ್ತ ಅಭಿಮಾನಿಗಳೂ ಕುಣಿದು ಕುಪ್ಪಳಿಸುತ್ತ, ಎಂಜಾಯ್​ ಮಾಡುವುದು ಸಾಮಾನ್ಯ. ಆದರೆ ವೇದಿಕೆ ಮೇಲೆ ಹಾಡು ಹಾಡುವ ಗಾಯಕನ ಉತ್ಸಾಹ, ಉದ್ರೇಕ ಮಿತಿಮೀರಿದರೆ ಎಂಬುದಕ್ಕೆ ಜ್ವಲಂತ ಉದಾಹರಣೆ ಯುಎಸ್​​ನ ಬ್ರಾಸ್​ ಅಗೇನೆಸ್ಟ್​ ಎಂಬ ಮ್ಯೂಸಿಕಲ್​ ಗ್ರೂಪ್​ (ಇದೊಂದು ರಾಕ್​ ಸಂಗೀತಗಾರರ ಗುಂಪು)ನ ಖ್ಯಾತ ಗಾಯಕಿ ಸೋಫಿಯಾ ಉರಿಸ್ಟಾ. ಈಕೆ  ಇತ್ತೀಚೆಗೆ ಒಂದು ಬಹುದೊಡ್ಡ ಮಟ್ಟದ ವಿವಾದ ಸೃಷ್ಟಿಸಿ, ಈಗ ಅದಕ್ಕೆ ಕ್ಷಮೆಯನ್ನೂ ಕೇಳಿದ್ದಾರೆ. 

ಇತ್ತೀಚೆಗೆ ಗಾಯಕಿ ಉರಿಸ್ಟಾ ಅವರ ಅತ್ಯಂತ ಕೆಟ್ಟ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿತ್ತು. ಅದನ್ನು ನೋಡಿದ ಬಹುತೇಕರು ಹೇಸಿಗೆ ಪಟ್ಟುಕೊಂಡಿದ್ದರು. ಕಳೆದವಾರ ಫ್ಲೋರಿಡಾದ ಡೇಟೋನಾ ಬೀಚ್​​ನಲ್ಲಿ ರಾಕ್​ವಿಲ್ಲೆ ಮೆಟಲ್​ ಉತ್ಸವ ನಡೆದಿತ್ತು.  ಈ ಉತ್ಸವದಲ್ಲಿ ಬ್ರಾಸ್​ ಅಗೇನೆಸ್ಟ್​ ರಾಕ್​ ಬ್ಯಾಂಡ್​​ನ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಉರಿಸ್ಟಾ ಗಾಯನವಿತ್ತು ಮತ್ತು ಇನ್ನೂ ಹಲವು ಕಲಾವಿದರು ಸಂಗೀತ ಸಾಧನಗಳನ್ನು ನುಡಿಸುತ್ತಿದ್ದರು. ಈ ಗಾಯಕಿಗೆ ಅದೇನಾಯ್ತೋ ಗೊತ್ತಿಲ್ಲ, ಗಾಯನ ಕೇಳುತ್ತಿದ್ದ ಅಭಿಮಾನಿಯೊಬ್ಬನನ್ನು ವೇದಿಕೆಗೆ ಕರೆದು ಮಲಗಿಸಿದಳು. ನಂತರ ತನ್ನ ಪ್ಯಾಂಟ್​ ಬಿಚ್ಚಿ, ಆ ಅಭಿಮಾನಿಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದಳು. ಇದನ್ನೆಲ್ಲ ಹಾಡು ಹೇಳುತ್ತಲೇ ಮಾಡಿ ಮುಗಿಸಿದ್ದಳು. ಆ ಅಭಿಮಾನಿಯೂ ಕೂಡ ಸಿಕ್ಕಾಪಟೆ ಖುಷಿಯಾಗಿಯೇ ಇದ್ದ. ಆದರೆ ನೆಟ್ಟಿಗರು ಮಾತ್ರ ವಿಪರೀತ ಆಕ್ರೋಶ ವ್ಯಕ್ತಪಡಿಸಿದ್ದರು.

ಕ್ಷಮೆ ಕೇಳಿದ ಗಾಯಕಿ ವೇದಿಕೆ ಮೇಲೆ ಅಭಿಮಾನಿ ಮೇಲೆ  ಮೂತ್ರವಿಸರ್ಜನೆ ಮಾಡಿದ್ದಕ್ಕೆ ತನ್ನ ವಿರುದ್ಧ ಆಕ್ರೋಶ ಹೆಚ್ಚುತ್ತಿರುವ ಬೆನ್ನಲ್ಲೇ ಸೋಫಿಯಾ ಉರಿಸ್ಟಾ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆ ಕೇಳಿದ್ದಾರೆ.  ಟ್ವೀಟ್​ ಮಾಡಿರುವ ಅವರು, ನಾನು ಯಾವುದೇ ಸಂಗೀತ ಕಾರ್ಯಕ್ರಮದಲ್ಲೂ, ವೇದಿಕೆಯ ಮೇಲೆ ಮಿತಿಯಲ್ಲೇ ಇರುತ್ತಿದ್ದೆ. ಆದರೆ ಪ್ರಸ್ತುತ ಈ ಕಾರ್ಯಕ್ರಮದಲ್ಲಿ ನನ್ನ ಮಿತಿಯನ್ನು ತುಂಬ ಮೀರಿಬಿಟ್ಟಿದ್ದೇನೆ. ನಾನು ನನ್ನ ಕುಟುಂಬವನ್ನು, ನನ್ನ ಬ್ಯಾಂಡ್​​ನ್ನು, ಅಭಿಮಾನಿಗಳನ್ನು ತುಂಬ ಪ್ರೀತಿಸುತ್ತೇನೆ. ನನಗೆ ಅಭಿಮಾನಿಗಳಿಗೆ ನೋವುಂಟು ಮಾಡುವ ಉದ್ದೇಶ ಇರಲಿಲ್ಲ. ಆದರೆ ಈಗ ನನಗೆ ಗೊತ್ತಿಲ್ಲದೇ ಮಾಡಿರುವ ನೋವಿಗೆ ನಾನು ಕ್ಷಮೆ ಕೇಳುತ್ತೇನೆ. ನಾನೆಂದಿಗೂ ಶಾಕ್​ ಆರ್ಟಿಸ್ಟ್​ (ಆಕಸ್ಮಿಕ ಆಘಾತ ಕೊಡುವ ಕಲಾವಿದೆ) ಅಲ್ಲ. ನನ್ನ ಪಾಲಿಗೆ ಸಂಗೀತಕ್ಕೇ ಮೊದಲ ಆದ್ಯತೆ. ನನಗೆ ಬೆಂಬಲ, ಪ್ರೀತಿ ಕೊಟ್ಟು ಸಲುಹುವ ಪ್ರತಿಯೊಬ್ಬರಿಗೂ ಕೃತಜ್ಞತೆಗಳು ಎಂದು ಹೇಳಿದ್ದಾರೆ.

ಇನ್ನು ಗಾಯಕಿ ಸೋಫಿಯಾ ಉರಿಸ್ಟಾ ಕ್ಷಮೆ ಕೇಳುವುದಕ್ಕೂ ಮೊದಲು ಮ್ಯೂಸಿಕಲ್ ಬ್ಯಾಂಡ್​ ಬ್ರಾಸ್​ ಅಗೇನೆಸ್ಟ್ ಕೂಡ ಜನರ ಕ್ಷಮೆ ಕೇಳಿದೆ. ರಾಕ್​ವಿಲ್ಲೆ ಉತ್ಸವದಲ್ಲಿ ಏನಾಯಿತೋ ಅದು ನಮ್ಮ ನಿರೀಕ್ಷೆಗೂ ಮೀರಿ ಆಗಿದ್ದು. ಇಂಥ ಘಟನೆ ಮುಂದೆಂದೂ ನಮ್ಮ ಶೋದಲ್ಲಿ ಆಗುವುದಿಲ್ಲ ಎಂಬ ಭರವಸೆಯನ್ನು ಕೊಡುತ್ತೇವೆ ಎಂದು ಹೇಳಿದ್ದರು.

ವಿವಾದ ಸೃಷ್ಟಿಸಿರುವ ವಿಡಿಯೋ:

ಇದನ್ನೂ ಓದಿ: ಬಿಡಿಎ ಕಡತಗಳ ಒಂದೊಂದು ಹಾಳೆಯನ್ನೂ ಜಾಲಾಡುತ್ತಿರುವ ಎಸಿಬಿ, ಬ್ರೋಕರ್‌ಗಳಿಂದ ತುಂಬಿದ್ದ ಆವರಣದಲ್ಲಿ ಸ್ಮಶಾನ ಮೌನ

Published On - 12:55 pm, Sat, 20 November 21

ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ