ನೀಳವಾದ ಕೂದಲು ಹೊಂದಿದ್ದ ಮಾಡೆಲ್ಗೆ ಕೆಟ್ಟ ಹೇರ್ ಸ್ಟೈಲ್ ಮಾಡಿ 2 ಕೋಟಿ ರೂ. ದಂಡ ಕಟ್ಟಿದ ಹೊಟೆಲ್; ನಿಜವಾಗ್ಯೂ ನಡೆದದ್ದೇನು?
Viral News: ಐಟಿಸಿ ಮೌರ್ಯ ಸಲೂನ್ನಲ್ಲಿ ಕೆಟ್ಟ ಕ್ಷೌರದ ಪರಿಣಾಮ ಮಾಡೆಲ್ ಹೊಂದಿದ್ದ ಉದ್ದವಾದ ಕೂದಲನ್ನು ಕಳೆದುಕೊಂಡರು. ಈ ಅವ್ಯವಸ್ಥೆ ಅವರ ವೃತ್ತಿ ಜೀವನದ ಮೇಲೂ ಪರಿಣಾಮ ಬೀರಿತು. ಇದರಿಂದಾಗಿ ಅವರು ಕೆಲಸ ಕಳೆದುಕೊಂಡು ಜೀವನ ಸಂಪೂರ್ಣವಾಗಿ ಬದಲಾಯಿತು. ಅವರ ಹಲವು ವರ್ಷದ ಕನಸು ಭಗ್ನವಾಯಿತು.
ಉದ್ದವಾದ ಕೂದಲನ್ನು ಹೊಂದಿದ್ದ ಮಾಡೆಲ್ ಆಶ್ನಾ ರಾಯ್ ಕೆಟ್ಟ ಕ್ಷೌರ ಮಾಡಿಸಿಕೊಂಡು ತೊಂದರೆಗೆ ಒಳಗಾದ ಬಳಿಕ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ (NCDRC) ದೂರು ನೀಡಿದ್ದಾರೆ. ಅವರಿಗೆ ಪರಿಹಾರವಾಗಿ 2 ಕೋಟಿ ರೂಪಾಯಿ ನೀಡುವಂತೆ ನ್ಯಾಯಪೀಠವು ಹೇಳಿದೆ. ಮಾಡೆಲ್ ಆಶ್ನಾ ರಾಯ್ ತಮ್ಮ ಉದ್ದ ಕೂದಲಿನಿಂದ ಜನಪ್ರಿಯರಾಗಿದ್ದರು. ಐಟಿಸಿ ಮೌರ್ಯ ಸಲೂನ್ನಲ್ಲಿ ಕೆಟ್ಟ ಕ್ಷೌರದ ಪರಿಣಾಮ ತಮ್ಮ ಉದ್ದವಾದ ಕೂದಲನ್ನು ಕಳೆದುಕೊಂಡರು. ಈ ಅವ್ಯವಸ್ಥೆ ಅವರ ವೃತ್ತಿ ಜೀವನದ ಮೇಲೂ ಪರಿಣಾಮ ಬೀರಿತು. ಇದರಿಂದಾಗಿ ಅವರು ಕೆಲಸ ಕಳೆದುಕೊಂಡು ಜೀವನ ಸಂಪೂರ್ಣವಾಗಿ ಬದಲಾಯಿತು.
ನ್ಯಾಯಮೂರ್ತಿ ಆರ್ ಕೆ ಅಗರವಾಲ್ ಮತ್ತು ಡಾ ಎಸ್ ಎಂ ಕಾಂತಿಕರ್ ಅವರು ಆದೇಶವನ್ನು ಜಾರಿಗೊಳಿಸಿದ್ದು, ಮಹಿಳೆಯರು ತಮ್ಮ ಕೂದಲು ಮತ್ತು ಅವುಗಳ ಆರೈಕೆಗೆ ಹೆಚ್ಚು ಜಾಗರೂಕರಾಗಿರುವುದರ ಬಗ್ಗೆ ಯಾವುದೇ ಸಂದೇಹವಿಲ್ಲ. ಮಹಿಳೆಯರು ತಮ್ಮ ಮುಖದ ಸೌಂದರ್ಯ ಮತ್ತು ಕೂದಲಿನ ಕುರಿತಾಗಿ ಹೆಚ್ಚು ಖರ್ಚು ಮಾಡುತ್ತಾರೆ. ಹಾಗಿರುವಾಗ ಅವರು ಹೆಚ್ಚು ಕಾಳಜಿ ಮಾಡುವುದರ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
2018 ಏಪ್ರಿಲ್ 12ರಂದು ಕೂದಲು ಕತ್ತರಿಸಿಕೊಳ್ಳಲು ಐಟಿಸಿ ಮೌರ್ಯ ಹೊಟೆಲ್ನ ಸಲೂನ್ಗೆ ಭೇಟಿ ನೀಡಿದ್ದರು. ಪ್ರತಿ ಬಾರಿಯೂ ಕೂದಲು ಕತ್ತರಿಸುತ್ತಿದ್ದ ಹೇರ್ ಸ್ಟೈಲಿಸ್ಟ್ ಅಂದು ಇಲ್ಲವಾದ ಕಾರಣ ಬೇರೊಬ್ಬ ಹೇರ್ ಸ್ಟೈಲಿಸ್ಟ್ ಅವರನ್ನು ನೇಮಿಸಲಾಯಿತು. ಅಂದು ಹೇರ್ ಸ್ಟೈಲಿಸ್ಟ್ ಮಾಡೆಲ್ ಆಶ್ನಾ ರಾಯ್ ಅವರ ಹೇರ್ ಕಟ್ ಮಾಡಿದ್ದಾರೆ.
ಕೂದಲು ಕತ್ತರಿಸುವಾಗ ಮಾಡೆಲ್ ಆಶ್ನಾ ರಾಯ್ ಅವರಿಗೆ ಗೊತ್ತಾಗಿಲ್ಲ. ತಲೆಯನ್ನು ಬಾಗಿಸಿದ್ದರಿಂದ ಎದುರಿಗಿದ್ದ ಕನ್ನಡಿಯೂ ಸಹ ಕಾಣಿಸುತ್ತಿರಲಿಲ್ಲ. ಉದ್ದವಾದ ಕೂದಲನ್ನು ಭುಜದವರೆಗೆ ಕತ್ತರಿಸಿರುವುದನ್ನು ನೋಡಿದ ಆಶ್ನಾ ರಾಯ್ ಹೇರ್ ಸ್ಟೈಲಿಸ್ಟ್ ವಿರುದ್ಧ ಮ್ಯಾನೇಜರ್ ಬಳಿಕ ದೂರು ನೀಡಿದ್ದಾರೆ. ಮಾಡೆಲ್ ಆಶ್ನಾ ರಾಯ್ ಅವರ ಮನವೊಲಿಸಲು ಪ್ರಯತ್ನಿಸಿ ಉಚಿತವಾಗಿ ಕೂದಲು ಚಿಕಿತ್ಸೆ ನೀಡುವುದಾಗಿ ಹೊಟೆಲ್ ಸಿಬ್ಬಂದಿ ಭರವಸೆ ನೀಡಿದ್ದಾರೆ. ಚಿಕಿತ್ಸೆಯಲ್ಲಿ ಬಳಸಿದ ರಾಸಾಯನಿಕ ಉತ್ಪನ್ನಗಳ ಕಾರಣದಿಂದ ಆಶ್ನಾ ರಾಯ್ ಅವರ ಕೂದಲಿಗೆ ಹಾನಿಯುಂಟಾಗಿದೆ. ನೆತ್ತಿಯ ಭಾಗ ಸುಟ್ಟು ಹೋಗಿದೆ ಹಾಗೂ ತಲೆ ತುರಿಕೆ ಸಮಸ್ಯೆ ಅತಿಯಾಗಿ ಕಾಡತೊಡಗಿದೆ.
ದೂರುದಾರರಾದ ಮಾಡೆಲ್ ಆಶ್ನಾ ರಾಯ್ ಹೊಂದಿದ್ದ ಉದ್ದ ಕೂದಲಿನಿಂದ ಸುಂದರವಾಗಿ ಕಾಣಿಸುತ್ತಿದ್ದರು ಮತ್ತು ಉತ್ತಮ ಕೆಲಸ ಅವರನ್ನು ಹುಡುಕಿಕೊಂಡು ಬರುವಂತೆ ಮಾಡುತ್ತಿತ್ತು. ಸದ್ಯದಲ್ಲಿ ಚಲನಚಿತ್ರದಲ್ಲಿ ನಟನೆಗೂ ಸಹ ಆಯ್ಕೆ ಆಗಿದ್ದರು. ಆದರೆ ಈ ಅವ್ಯವಸ್ಥೆಯಿಂದಾಗಿ ಅವರು ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ. ಇದರಿಂದ ಮನನೊಂದ ಮಾಡೆಲ್ ರಾಯ್ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆರೋಗಕ್ಕೆ ದೂರು ನೀಡಿದ್ದಾರೆ. ಪರಿಹಾರ ಧನವಾಗಿ 2 ಕೋಟಿ ರೂ ದಂಡ ಪಾವತಿಸುವಂತೆ ನ್ಯಾಯಪೀಠವು ಹೊಟೆಲ್ಗೆ ಆದೇಶಿಸಿದೆ.
ಹೇರ್ ಸ್ಟೈಲಿಸ್ಟ್ ಬೇಜಾವಾಬ್ದಾರಿಯ ಕಾರಣದಿಂದಾಗಿ ದೂರುದಾರ ಮಾಡೆಲ್ ಆಶ್ನಾ ರಾಯ್ ಅವರ ಕೂದಲು ಹಾನಿಗೊಳಗಾಗಿದೆ ಎಂದು ಆಯೋಗವು ತಿಳಿಸಿದೆ. ಮಹಿಳೆ ತನ್ನ ಇದ್ದ ಕೂದಲನ್ನು ಕಳೆದುಕೊಂಡಳು, ಇದರಿಂದ ಮನನೊಂದ ಅವರು ಮಾನಸಿಕವಾಗಿ ಕುಗ್ಗಿದರು, ಕಳೆದ ಎರಡು ವರ್ಷಗಳಿಂದ ಅವರು ಆಘಾತವನ್ನು ಅನುಭವಿಸುತ್ತಿದ್ದಾರೆ ಎಂದು ಆಯೋಗವು ತಿಳಿಸಿದೆ.
(Ashna roy vs ITC hotels NCDRC awards 2 crore to model after bad hair cut)
Published On - 11:45 am, Fri, 24 September 21