ಅಸ್ಸಾಂ ಪೊಲೀಸರ ಗುಂಡಿನ ದಾಳಿಯಲ್ಲಿ ಗಾಯಗೊಂಡು ಕುಸಿದು ಬಿದ್ದ ವ್ಯಕ್ತಿಯ ಮೇಲೆ ಜಿಗಿದು ಹಲ್ಲೆ ನಡೆಸಿದ ಫೋಟೊಗ್ರಾಫರ್ ಬಂಧನ

Assam Violence: ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಆರಂಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದರು ಎಂದು ಪೊಲೀಸರು ಹೇಳಿಕೊಂಡರು, ಆದರೆ ಇದು ವಿಫಲವಾಯಿತು. ನಂತರ ಅಧಿಕಾರಿಗಳು ಜನರ ಮೇಲೆ ಗುಂಡು ಹಾರಿಸಿದರು.ಇದರಲ್ಲಿ ಇಬ್ಬರು ಸಾವಿಗೀಡಾಗಿದ್ದು ಕನಿಷ್ಠ ಹತ್ತು ಜನರಿಗೆ ಗಾಯಗಳಾಗಿವೆ . ಮೃತರನ್ನು ಸದ್ದಾಂ ಹುಸೇನ್ ಮತ್ತು ಶೇಖ್ ಫೋರಿಡ್ ಎಂದು ಗುರುತಿಸಲಾಗಿದೆ.

ಅಸ್ಸಾಂ ಪೊಲೀಸರ ಗುಂಡಿನ ದಾಳಿಯಲ್ಲಿ ಗಾಯಗೊಂಡು ಕುಸಿದು ಬಿದ್ದ ವ್ಯಕ್ತಿಯ ಮೇಲೆ ಜಿಗಿದು ಹಲ್ಲೆ ನಡೆಸಿದ ಫೋಟೊಗ್ರಾಫರ್ ಬಂಧನ
ಅಸ್ಸಾಂ ಹಿಂಸಾಚಾರ

ಗುವಾಹಟಿ: ಗುರುವಾರ ಅಸ್ಸಾಂನ ದರ್ರಾಂಗ್ ಜಿಲ್ಲೆಯ ಸಿಪಾಜ್ಹಾರ್​​ನಲ್ಲಿ  (Sipajhar) ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯ ನಡುವೆ ಪೋಲೀಸರ ಗುಂಡಿನ ದಾಳಿಯಲ್ಲಿ ಗಾಯಗೊಂಡು ಕುಸಿದು ಬಿದ್ದಿರುವ ಪ್ರತಿಭಟನಾಕಾರನ ಮೇಲೆ ಛಾಯಾಗ್ರಾಹಕನೊಬ್ಬ ಜಿಗಿಯತ್ತಿರುವ ವಿಡಿಯೊ ವೈರಲ್ ಆಗಿದೆ. ಈ ವಿಡಿಯೊದಲ್ಲಿರುವ ಛಾಯಾಗ್ರಾಹಕರನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅಸ್ಸಾಂ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಭಾಸ್ಕರ್ ಜ್ಯೋತಿ ಮಹಾಂತ ( Bhaskar Jyoti Mahanta)  ಆ ಛಾಯಾಗ್ರಾಹಕನನ್ನು ಬಿಜೊಯ್ ಬೋನಿಯಾ (Bijoy Bonia) ಎಂಬ ಎಂದು ಗುರುತಿಸಲಾಗಿದ್ದು, ಆತನನ್ನು ಅಸ್ಸಾಂ ಸಿಐಡಿ ಬಂಧಿಸಿ ವಶಕ್ಕೆ ಪಡೆದಿದೆ ಎಂದು ಹೇಳಿದ್ದಾರೆ.

ವೈರಲ್ ವಿಡಿಯೊದಲ್ಲಿ ಅಸ್ಸಾಂ ಪೊಲೀಸರು ನಡೆಸುತ್ತಿದ್ದ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನಡೆದ ಸಂಘರ್ಷದ ದೃಶ್ಯವಿದೆ. ಪಿಟಿಐ ಸುದ್ದಿಸಂಸ್ಥೆ ಪ್ರಕಾರ ದಶಕಗಳಿಂದ ಅವರು ವಾಸಿಸುತ್ತಿದ್ದ ಭೂಮಿಯಿಂದ ತೆರವು ಮಾಡಲ್ಪಟ್ಟ ಸುಮಾರು 800 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಬೇಡಿಕೆಯ ಮೇಲೆ ಭುಗಿಲೆದ್ದ ಪ್ರತಿಭಟನೆಗಳ ನಡುವೆ ಇದು ಸಂಭವಿಸಿದೆ. ವಿಡಿಯೊದಲ್ಲಿ ಪೊಲೀಸರು ಗುಂಡು ಹಾರಿಸುತ್ತಿರುವುದು ಕಂಡುಬರುತ್ತಿದ್ದಂತೆ, ಪ್ರತಿಭಟನಾಕಾರರಲ್ಲಿ ಒಬ್ಬರು ಕೋಲು ಹಿಡಿದುಕೊಂಡು ಅವರ ಕಡೆಗೆ ಓಡುತ್ತಿರುವುದು ಕಂಡುಬರುತ್ತದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸುತ್ತಿರುವುದು ಕಂಡುಬರುತ್ತದೆ.
ಆಮೇಲೆ ಕುಸಿದು ಪ್ರಜ್ಞಾಹೀನನಾಗಿ ಬಿದ್ದಿರುವ ವ್ಯಕ್ತಿಯ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡುತ್ತಿರುವುದು ವಿಡಿಯೊದಲ್ಲಿದೆ. ಬಯಲಲ್ಲಿ ಕುಸಿದು ಬಿದ್ದ ವ್ಯಕ್ತಿಯ ಮೇಲೆ ಛಾಯಾಗ್ರಾಹಕ ಬಿಜೋಯ್ ಬೋನಿಯಾ ಹಾರಿ ಮೇಲೆ ಹಲ್ಲೆ ಮಾಡುತ್ತಿರುವುದು ಕಾಣುತ್ತದೆ ಎದೆಯ ಗಾಯದಿಂದ ರಕ್ತ ಸುರಿದು ಪ್ರಜ್ಞಾಹೀನನಾಗಿ ಮಲಗಿರುವ ವ್ಯಕ್ತಿಯ ಮೇಲೆ ಬೋನಿಯಾ ಹಲ್ಲೆ ನಡೆಸಿದ ನಂತರ ಪೊಲೀಸರು ಆತನನ್ನು ಚದುರಿಸುತ್ತಿರುವುದು ವಿಡಿಯೊದಲ್ಲಿದೆ.

ಫೋಟೊಗ್ರಾಫರ್​​ ನ್ನು ಪೋಲಿಸರು ಚದುರಿಸಿದ ನಂತರ ಆತ ಮತ್ತೆ ಬಂದು ಪ್ರತಿಭಟನಾಕಾರರ ದೇಹದ ಮೇಲೆ ಹಾರಿ ವಸ್ತುವಿನಿಂದ ಹೊಡೆದ. ಪ್ರತಿಭಟನಾಕಾರನ ಎಡಗೈ ಗಾಳಿಯಲ್ಲಿ ಕ್ಷಣಾರ್ಧದಲ್ಲಿ ಎತ್ತಿದಂತೆ ಕಾಣಿಸಿತು.ಜೊಯ್ ಶಂಕರ್ ಬೋನಿಯಾ ಅವರನ್ನು ವೃತ್ತಿಪರ ಛಾಯಾಚಿತ್ರಗ್ರಾಹಕರಾಗಿ ಡರಾಂಗ್ ಜಿಲ್ಲಾಡಳಿತವು ಪರಿಸ್ಥಿತಿಯನ್ನು ದಾಖಲಿಸಲು ನೇಮಿಸಿತ್ತು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಆರಂಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದರು ಎಂದು ಪೊಲೀಸರು ಹೇಳಿಕೊಂಡರು, ಆದರೆ ಇದು ವಿಫಲವಾಯಿತು. ನಂತರ ಅಧಿಕಾರಿಗಳು ಜನರ ಮೇಲೆ ಗುಂಡು ಹಾರಿಸಿದರು.ಇದರಲ್ಲಿ ಇಬ್ಬರು ಸಾವಿಗೀಡಾಗಿದ್ದು ಕನಿಷ್ಠ ಹತ್ತು ಜನರಿಗೆ ಗಾಯಗಳಾಗಿವೆ . ಮೃತರನ್ನು ಸದ್ದಾಂ ಹುಸೇನ್ ಮತ್ತು ಶೇಖ್ ಫೋರಿಡ್ ಎಂದು ಗುರುತಿಸಲಾಗಿದೆ.

ಅಸ್ಸಾಂ ಸರ್ಕಾರವು ಸಾರ್ವಜನಿಕ ಆಕ್ರೋಶದ ನಡುವೆ ಘಟನೆಗೆ ಕಾರಣವಾದ ಸನ್ನಿವೇಶಗಳ ಕುರಿತು ನ್ಯಾಯಾಂಗ ತನಿಖೆಯನ್ನು ಘೋಷಿಸಿತು. ಗೃಹ ಮತ್ತು ರಾಜಕೀಯ ಇಲಾಖೆಯ ಕಾರ್ಯದರ್ಶಿ ದೇಬಾಪರಸಾದ್ ಮಿಶ್ರ ಅವರು ಹೊರಡಿಸಿದ ಆದೇಶದಲ್ಲಿ ಗೌಹಾತಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ತನಿಖೆಯನ್ನು ನಡೆಸುತ್ತಾರೆ ಎಂದು ಸರ್ಕಾರ ನಿರ್ಧರಿಸಿದೆ.

ಅಸ್ಸಾಂನಲ್ಲಿ ಗುರುವಾರ ನಡೆದ ಈ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪೊಲೀಸ್ ಕ್ರಮವನ್ನು “ರಾಜ್ಯ ಪ್ರಾಯೋಜಿತ ಕಿಡಿ” ಎಂದು ಕರೆದರು. “ಅಸ್ಸಾಂ ರಾಜ್ಯ ಪ್ರಾಯೋಜಿತ ಬೆಂಕಿಯಲ್ಲಿದೆ. ನಾನು ರಾಜ್ಯದ ನಮ್ಮ ಸಹೋದರ ಸಹೋದರಿಯರಿಗೆ ಒಗ್ಗಟ್ಟಾಗಿ ನಿಂತಿದ್ದೇನೆ- ಭಾರತದ ಯಾವುದೇ ಮಕ್ಕಳು ಇದಕ್ಕೆ ಅರ್ಹರಲ್ಲ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.


“ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಸ್ವಂತ ಸಹೋದರ ಬರ್ಬರ ಹಿಂಸಾಚಾರ ನಡೆದ ದರ್ರಾಂಗ್ ಜಿಲ್ಲೆಯ ಸೂಪರಿಂಟೆಂಡೆಂಟ್ ಪೊಲೀಸ್. ಈ ಸಿಎಂ-ಎಸ್ಪಿ ಜೋಡಿ ಒತ್ತುವರಿ ತೆರವ ಕಾರ್ಯಾಚರಣೆಗೆ ಶಾಂತಿಯುತ ಪರಿಹಾರವನ್ನು ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಅಸ್ಸಾಂಗೆ ಸಿಎಂ ಅವಮಾನ ತರುತ್ತಲೇ ಇದ್ದಾರೆ ಎಂದು ಕಾಂಗ್ರೆಸ್ ಲೋಕಸಭಾ ಸಂಸದ ಗೌರವ್ ಗೊಗೊಯ್ ಟ್ವೀಟ್ ಮಾಡಿದ್ದಾರೆ.

ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮದ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್‌ ಜತೆ ಮಾತನಾಡಿದ ಅಸ್ಸಾಂ ವಿಶೇಷ ಡಿಜಿಪಿ ಜಿಪಿ ಸಿಂಗ್ “ಎಲ್ಲಿ ಎಸ್‌ಒಪಿ ಮತ್ತು ಪ್ರೋಟೋಕಾಲ್ ಉಲ್ಲಂಘನೆಯಾಗಿದೆಯೋ ಅಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು. “ನಾನು ಹೇಳಬಹುದಾದ ಏಕೈಕ ವಿಷಯವೆಂದರೆ, ವಿಡಿಯೊ ನೋಡಿದ ನಂತರ, ನಾವು ಆತನ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ (ಬೋನಿಯಾ) … ಯಾವುದೇ ಪ್ರಶ್ನೆಗಳನ್ನು ಕೇಳಿಲ್ಲ” ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಕಿರಿಯ ಸಹೋದರ ಸುಶಂತ ಬಿಸ್ವಾ ಶರ್ಮಾ ದಾರಾಂಗ್ ಪೊಲೀಸ್ ವರಿಷ್ಠಾಧಿಕಾರಿಪ್ರತಿಭಟನಾಕಾರರು ತೀಕ್ಷ್ಣವಾದ ಆಯುಧಗಳನ್ನು ಧರಿಸಿ, ಪೊಲೀಸ್ ಸಿಬ್ಬಂದಿ ಮತ್ತು ಇತರರ ಮೇಲೆ ಕಲ್ಲು ತೂರಾಟ ನಡೆಸಿದರು. ಪ್ರತಿಭಟನಾಕಾರರನ್ನು ಚದುರಿಸಲಾಯಿತು ಮತ್ತು ಹೊರಹಾಕುವ ಕಾರ್ಯಾಚರಣೆ ಮುಂದುವರಿದಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಗುವಾಹಟಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು. “ಭೂಮಿಯನ್ನು ಅತಿಕ್ರಮಣದಾರರಿಂದ ತೆರವುಗೊಳಿಸುವ ಜವಾಬ್ದಾರಿಯನ್ನು ಪೊಲೀಸರಿಗೆ ವಹಿಸಲಾಗಿದೆ ಮತ್ತು ಕೆಲಸ ಮುಗಿಯುವವರೆಗೂ ಅವರು ಅದನ್ನು ಮುಂದುವರಿಸುತ್ತಾರೆ. ಕತ್ತಲಾದ ನಂತರ ಈ ಕಾರ್ಯಾಚರಣೆ ನಿಲ್ಲುತ್ತದೆ ಮತ್ತು ನಾಳೆ ಮತ್ತೆ ಮುಂದುವರಿಯುತ್ತದೆ” ಎಂದು ಅವರು ಗುರುವಾರ ಹೇಳಿದರು.

ದರ್ರಾಂಗ್ ಜಿಲ್ಲಾಡಳಿತವು ಸೋಮವಾರದಿಂದ 602.40 ಹೆಕ್ಟೇರ್ ಭೂಮಿಯನ್ನು ತೆರವುಗೊಳಿಸಿದೆ ಮತ್ತು 800 ಕುಟುಂಬಗಳನ್ನು ಹೊರಹಾಕಿದೆ ಮತ್ತು ಸಿಪಜಾರ್‌ನಲ್ಲಿ ನಾಲ್ಕು “ಕಾನೂನುಬಾಹಿರವಾಗಿ” ನಿರ್ಮಿಸಲಾದ ಧಾರ್ಮಿಕ ಕಟ್ಟಡಗಳನ್ನು ನೆಲಸಮ ಮಾಡಿದೆ ಎಂದು ವರದಿಯಾಗಿದೆ. ಮುಖ್ಯಮಂತ್ರಿಗಳು ಜೂನ್ 7 ರಂದು ಸ್ಥಳಕ್ಕೆ ಭೇಟಿ ನೀಡಿದ್ದು ಧೋಲ್ಪುರ್ ಶಿವ ದೇವಾಲಯದ ಬಳಿ “ಅಕ್ರಮ ವಸಾಹತುಗಾರರು” ಅತಿಕ್ರಮಿಸಿಕೊಂಡಿದ್ದಾರೆ ಎಂದು ಹೇಳಲಾದ ನದಿ ತೀರದ ಪ್ರದೇಶಗಳನ್ನು ಪರಿಶೀಲಿಸಿದ್ದರು. ನಂತರ ಅವರು ಸರ್ಕಾರವು ಸಮುದಾಯ ಕೃಷಿ ಯೋಜನೆಯನ್ನು ಪ್ರಾರಂಭಿಸಲು ಪ್ರದೇಶವನ್ನು ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ನಿರ್ದೇಶಿಸಿದರು.

ಇದನ್ನೂ ಓದಿ: ಅಸ್ಸಾಂನಲ್ಲಿ ತೆರವು ಕಾರ್ಯಾಚರಣೆ ವೇಳೆ ಘರ್ಷಣೆ: ಪೊಲೀಸರಿಂದ ಲಾಠಿ ಪ್ರಹಾರ, ಗುಂಡಿನ ದಾಳಿಗೆ ಇಬ್ಬರು ವ್ಯಕ್ತಿಗಳು ಸಾವು

ಇದನ್ನೂ ಓದಿ: Assam Violence: ಒತ್ತುವರಿ ತೆರವುಗೊಳಿಸಲು ಬಂದ ಪೊಲೀಸರೊಂದಿಗೆ ಸಂಘರ್ಷ: ಇಬ್ಬರ ಸಾವು, ಜನರ ಮೇಲಿನ ಹಲ್ಲೆ ಕ್ಯಾಮೆರಾದಲ್ಲಿ ದಾಖಲು

(Assam police arrested the photographer seen in a viral video attacking a protester lying collapsed after police firing)

Click on your DTH Provider to Add TV9 Kannada