ಅಸ್ಸಾಂನಲ್ಲಿ ತೆರವು ಕಾರ್ಯಾಚರಣೆ ವೇಳೆ ಘರ್ಷಣೆ: ಪೊಲೀಸರಿಂದ ಲಾಠಿ ಪ್ರಹಾರ, ಗುಂಡಿನ ದಾಳಿಗೆ ಇಬ್ಬರು ವ್ಯಕ್ತಿಗಳು ಸಾವು
Eviction drive in Assam: ಈ ಅತಿಕ್ರಮಣಕಾರರನ್ನು ತೆರವು ಹಾಕುವ ಮೂಲಕ ಸಮುದಾಯ ಕೃಷಿಯನ್ನು ಆರಂಭಿಸುವ ಗುರಿಯನ್ನು ಹೊಂದಿದ್ದು, ಮೊದಲ ಹಂತದಲ್ಲಿ ಸೋಮವಾರ ಸುಮಾರು 4500 ಬಿಘಾ ಭೂಮಿಯಲ್ಲಿದ್ದ 800 ಮನೆಗಳನ್ನು ತೆರವು ಮಾಡಲಾಯಿತು
ಗುವಾಹಟಿ: ಅಸ್ಸಾಂನ ದರ್ರಾಂಗ್ ಜಿಲ್ಲೆಯ(Darrang district) ಧೋಲ್ಪುರ್ ಪ್ರದೇಶದ ಗರುಖುಟಿಯಲ್ಲಿ ರಾಜ್ಯದ ಚೌಕಟ್ಟಿನ ಯೋಜನೆಗೆ ಸೇರಿದ ದೊಡ್ಡ ಭೂಮಿಯಿಂದ ಅತಿಕ್ರಮಣಕಾರರನ್ನು ಹೊರಹಾಕಲು ಅಸ್ಸಾಂ ಪೊಲೀಸರು (Assam Police) ನಡೆಸುತ್ತಿದ್ದ ಕಾರ್ಯಾಚರಣೆ ವೇಳೆ ಅತಿಕ್ರಮಣಕಾರರು ಮತ್ತು ಪೊಲೀಸರ ನಡುವೆ ಸಂಘರ್ಷವುಂಟಾಗಿದೆ. ಈ ಘರ್ಷಣೆಯಲ್ಲಿ ಇಬ್ಬರು ವ್ಯಕ್ತಿಗಳು ಗುಂಡಿಗೆ ಬಲಿಯಾಗಿದ್ದು ಮತ್ತು ಕನಿಷ್ಠ ಏಳು ಪೊಲೀಸರಿಗೆ ಗಾಯಗಳಾಗಿವೆ. “ಪೋಲಿಸರಿಗೆ ಅತಿಕ್ರಮಣಕಾರರನ್ನು ಹೊರಹಾಕುವ ಕಾರ್ಯವನ್ನು ನೀಡಲಾಯಿತು ಮತ್ತು ಅವರು ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾಗ ಜನರು ಕಲ್ಲುಗಳಿಂದ ಮತ್ತು ಹರಿತವಾದ ಆಯುಧಗಳಿಂದ ದಾಳಿ ಮಾಡಿದರು. ಪೊಲೀಸರು ಗುಂಡು ಹಾರಿಸಿದ್ದಾರೆ. ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ ಅತಿಕ್ರಮಣಕಾರರನ್ನು ತೆರವು ಮಾಡುವ ಮೂಲಕ ಸಮುದಾಯ ಕೃಷಿಯನ್ನು ಆರಂಭಿಸುವ ಗುರಿಯನ್ನು ಹೊಂದಿದ್ದು, ಮೊದಲ ಹಂತದಲ್ಲಿ ಸೋಮವಾರ ಸುಮಾರು 4500 ಬಿಘಾ ಭೂಮಿಯಲ್ಲಿದ್ದ 800 ಮನೆಗಳನ್ನು ತೆರವು ಮಾಡಲಾಯಿತು. ನಾಲ್ಕು ಅಕ್ರಮ ಧಾರ್ಮಿಕ ಕಟ್ಟಡಗಳು ಮತ್ತು ಖಾಸಗಿ ಸಂಸ್ಥೆಯನ್ನು ಒತ್ತುವರಿ ಮಾಡಲಾಗಿದೆ.
Continuing our drive against illegal encroachments, I am happy and compliment district administration of Darrang and @assampolice for having cleared about 4500 bigha, by evicting 800 households, demolishing 4 illegal religious structures and a private instn at Sipajhar, Darrang. pic.twitter.com/eXG6XBNH6j
— Himanta Biswa Sarma (@himantabiswa) September 20, 2021
ಗುರುವಾರ ಉಳಿದಿರುವ ಮನೆಗಳನ್ನು ತೆರವು ಮಾಡಲು ಪೊಲೀಸರು ಆ ಪ್ರದೇಶಕ್ಕೆ ಬಂದಾಗ, ಅತಿಕ್ರಮಣಕಾರರು ಅವರ ಮೇಲೆ ದಾಳಿ ಮಾಡಿದರು. ಇದನ್ನು ತಡೆಯಲು ಪೊಲೀಸರು ಅಶ್ರುವಾಯು ಪ್ರಹಾರ ಮಾಡಿದ್ದು ಇದು ವಿಫಲರಾದ ನಂತರ ಗುಂಡು ಹಾರಿಸಬೇಕಾಯಿತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕಾನೂನುಬಾಹಿರ ಅತಿಕ್ರಮಣದಾರರ ಈ ಸರ್ಕಾರಿ ಭೂಮಿಯನ್ನು ಮುಕ್ತಗೊಳಿಸಲು ಮತ್ತು ಅದನ್ನು ಕೃಷಿ ಯೋಜನೆಗೆ ಪರಿವರ್ತಿಸಲು ಅಸ್ಸಾಂ ಸರ್ಕಾರ ಈ ಹಿಂದೆ ನಿರ್ಧರಿಸಿತ್ತು
ಇದನ್ನೂ ಓದಿ: ರಾಜ್ಯಸಭಾ ಉಪಚುನಾವಣೆ; ಅಸ್ಸಾಂ-ಮಧ್ಯಪ್ರದೇಶದ ಅಭ್ಯರ್ಥಿಗಳ ಆಯ್ಕೆ ಮಾಡಿದ ಬಿಜೆಪಿ, ಅಚ್ಚರಿಯ ಹೆಸರುಗಳು!
(Eviction drive in Assam Two persons were shot dead and at least seven policemen were injured in a clash )
Published On - 7:13 pm, Thu, 23 September 21