AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉರಿ ವಲಯದ ಬಳಿ ಮೂವರು ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆ; ಮೊನ್ನೆಯಷ್ಟೇ ಒಳನುಸುಳಿದ್ದ ಭಯೋತ್ಪಾದಕರು

ಉರಿ ವಲಯದ ಗಡಿ ನಿಯಂತ್ರಣಾ ರೇಖೆ ಬಳಿ ಉಗ್ರರು ಒಳನುಸುಳುವುದನ್ನು ಭಾರತೀಯ ಸೇನೆ ತಡೆಯುತ್ತಿದೆ. ಆದರೆ ಈ ಮೂವರು ಉಗ್ರರು ಸೋಮವಾರವೇ ಭಾರತದತ್ತ ಬಂದಿದ್ದರು.

ಉರಿ ವಲಯದ ಬಳಿ ಮೂವರು ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆ; ಮೊನ್ನೆಯಷ್ಟೇ ಒಳನುಸುಳಿದ್ದ ಭಯೋತ್ಪಾದಕರು
ಭಾರತೀಯ ಯೋಧರು
TV9 Web
| Edited By: |

Updated on: Sep 23, 2021 | 5:59 PM

Share

ಇಂದು ಭಾರತೀಯ ಸೇನೆ ಮೂವರು ಪಾಕ್​ ಉಗ್ರ (Pakistani Terrorists)ರನ್ನು ಉರಿ (Uri Sector) ಬಳಿಯ ಗಡಿನಿಯಂತ್ರಣ ರೇಖೆಯಲ್ಲಿರುವ ರಾಂಪುರ ಸೆಕ್ಟರ್​​ನ ಬಳಿ ಹತ್ಯೆಗೈದಿದ್ದಾರೆ. ಈ ಭಯೋತ್ಪಾದಕರು ಇತ್ತೀಚೆಗಷ್ಟೇ ಪಾಕ್ ಆಕ್ರಮಿತ ಕಾಶ್ಮೀರ (POK)ದಿಂದ ಭಾರತದ ಕಡೆಗೆ ನುಸುಳಿದ್ದರು.  ಮೂವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ, ಅವರಿಂದ 5 ಎಕೆ 47 ಬಂದೂಕುಗಳು, 8 ಪಿಸ್ತೂಲ್​  ಮತ್ತು 70 ಹ್ಯಾಂಡ್​ ಗ್ರೆನೇಡ್​ಗಳನ್ನು ವಶಪಡಿಸಿಕೊಂಡಿದೆ ಎಂದು ಸೇನಾ ಮೂಲಗಳು ತಿಳಿಸಿವೆ.  

ಉರಿ ವಲಯದ ಗಡಿ ನಿಯಂತ್ರಣಾ ರೇಖೆ ಬಳಿ ಉಗ್ರರು ಒಳನುಸುಳುವುದನ್ನು ಭಾರತೀಯ ಸೇನೆ ತಡೆಯುತ್ತಿದೆ. ಆದರೆ ಈ ಮೂವರು ಉಗ್ರರು ಸೋಮವಾರವೇ ಭಾರತದತ್ತ ಬಂದಿದ್ದರು. ಅವರ ಮೇಲೆ ಒಂದು ಕಣ್ಣಿಟ್ಟಿದ್ದ ಭದ್ರತಾ ಪಡೆ ಇಂದು ಮೂವರನ್ನೂ ಕೊಂದು ಹಾಕಿದೆ.  ಒಳನುಸುಳುವ ಭಯೋತ್ಪಾದಕ ವಿರುದ್ಧ ಕಾರ್ಯಾಚರಣೆ ಸತತವಾಗಿ ನಡೆಯುತ್ತಿದೆ. ಕಳೆದ 30 ತಾಸುಗಳಿಂದಲೂ ಇಲ್ಲಿ ಭದ್ರತಾ ಪಡೆಗಳು ಕಾರ್ಯನಿರತವಾಗಿವೆ. ಈ ಸ್ಥಳವನ್ನು ಸುತ್ತುವರಿದಿವೆ.

ಅಫ್ಘಾನ್ ಉಗ್ರರು ಭಾರತಕ್ಕೆ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಅಫ್ಘಾನ್​ ಉಗ್ರರೂ ಕೂಡ ಭಾರತಕ್ಕೆ ನುಸುಳುತ್ತಿದ್ದಾರೆ ಎಂಬ ಎಚ್ಚರಿಕೆಯನ್ನು ಗುಪ್ತಚರ ದಳ ನೀಡಿದೆ. ಭಾರತದಲ್ಲಿ ಅಫ್ಘಾನಿಸ್ತಾನದ ಭಯೋತ್ಪಾದಕರೂ ಕೂಡ ದೊಡ್ಡಮಟ್ಟದ ದಾಳಿ ನಡೆಸಬಹುದು. ದೊಡ್ಡ ಸೇನಾ ಶಿಬಿರಗಳು ಅಥವಾ ಸರ್ಕಾರಿ ಸಂಸ್ಥೆಗಳೇ ಟಾರ್ಗೆಟ್​ ಆಗಲಿವೆ. ಈ ಉಗ್ರರಿಗೆ ಭಾರತಕ್ಕೆ ನುಸುಳಲು ಪಾಕಿಸ್ತಾನ ಸಹಕಾರ ನೀಡುತ್ತಿದೆ ಎಂದೂ ಹೇಳಿದೆ.

ಇದನ್ನೂ ಓದಿ: ಗೆಲಾಕ್ಸಿ ಎ73 ಸರಣಿ ಫೋನ್​​ಗಳ ಬಿಡುಗಡೆಗೆ ಸಿದ್ಧತೆ ನಡೆಸಿರುವ ಸ್ಯಾಮ್ಸಂಗ್, ಇವು 108 ಎಮ್ ಪಿ ಮೇನ್ ಕೆಮೆರಾ ಹೊಂದಿರಲಿವೆ

ಅಪಘಾತಕ್ಕೆ ಪರಿಹಾರ ನೀಡಿಲ್ಲ; ದಾವಣಗೆರೆಯಲ್ಲಿ ಎರಡು ಸರ್ಕಾರಿ ಬಸ್​ಗಳು ಜಪ್ತಿ

(Indian Army kills 3 Pakistani terrorists in LoC near Uri sector)

ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ