ಕೊವಿಡ್‌ನಿಂದ ಮೃತಪಟ್ಟವರಿಗೆ ಪರಿಹಾರ ನೀಡುವ ವಿಚಾರ; ಅಕ್ಟೋಬರ್ 4ರಂದು ಸುಪ್ರೀಂಕೋರ್ಟ್‌ ಆದೇಶ

Coronavirus: ಪರಿಹಾರದ ಹಣವನ್ನು ರಾಜ್ಯ ಸರ್ಕಾರಗಳೇ ನೀಡಬೇಕು ಎಂದು ತಿಳಿಸಲಾಗಿದೆ. ಎಸ್​ಡಿಆರ್​ಎಫ್​ನಿಂದ ರಾಜ್ಯ ಸರ್ಕಾರಗಳೇ ಪರಿಹಾರ ಹಣ ನೀಡಬೇಕು. ಜಿಲ್ಲಾ ಮಟ್ಟದ ಸಮಿತಿ ಡೆತ್ ಸರ್ಟಿಫಿಕೆಟ್ ಪರಿಷ್ಕರಿಸಬಹುದು ಎಂದು ಹೇಳಲಾಗಿದೆ.

ಕೊವಿಡ್‌ನಿಂದ ಮೃತಪಟ್ಟವರಿಗೆ ಪರಿಹಾರ ನೀಡುವ ವಿಚಾರ; ಅಕ್ಟೋಬರ್ 4ರಂದು ಸುಪ್ರೀಂಕೋರ್ಟ್‌ ಆದೇಶ
ಸುಪ್ರೀಂ ಕೋರ್ಟ್
Follow us
TV9 Web
| Updated By: ganapathi bhat

Updated on: Sep 23, 2021 | 10:41 PM

ದೆಹಲಿ: ಕೊವಿಡ್‌ನಿಂದ ಮೃತಪಟ್ಟವರಿಗೆ ಪರಿಹಾರ ನೀಡುವ ವಿಚಾರವಾಗಿ ಸುಪ್ರೀಂಕೋರ್ಟ್‌ ಅಕ್ಟೋಬರ್ 4 ರಂದು ಆದೇಶ ನೀಡಲಿದೆ. 50 ಸಾವಿರ ಪರಿಹಾರ ನೀಡುವ ಬಗ್ಗೆ ಕೇಂದ್ರದಿಂದ ಅಫಿಡವಿಟ್ ಸಲ್ಲಿಕೆ ಮಾಡಲಾಗಿದೆ. ಆದರೆ, ಪರಿಹಾರದ ಹಣವನ್ನು ರಾಜ್ಯ ಸರ್ಕಾರಗಳೇ ನೀಡಬೇಕು ಎಂದು ತಿಳಿಸಲಾಗಿದೆ. ಎಸ್​ಡಿಆರ್​ಎಫ್​ನಿಂದ ರಾಜ್ಯ ಸರ್ಕಾರಗಳೇ ಪರಿಹಾರ ಹಣ ನೀಡಬೇಕು. ಜಿಲ್ಲಾ ಮಟ್ಟದ ಸಮಿತಿ ಡೆತ್ ಸರ್ಟಿಫಿಕೆಟ್ ಪರಿಷ್ಕರಿಸಬಹುದು ಎಂದು ಹೇಳಲಾಗಿದೆ.

ಭಾರತದ ಕೊವಿಡ್ ಪರಿಹಾರ ಯೋಜನೆಯನ್ನು ಶ್ಲಾಘಿಸಿದ ಸುಪ್ರೀಂಕೋರ್ಟ್ ಕೊರೊನಾವೈರಸ್ (Coronavirus) ಸಾಂಕ್ರಾಮಿಕಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಮಾಡಿದ್ದನ್ನು ಬೇರೆ ಯಾವುದೇ ದೇಶವು ನಿರ್ವಹಿಸಲು ಸಾಧ್ಯವಾಗಲಿಲ್ಲ ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ (Supreme Court) ಗುರುವಾರ ಸರ್ಕಾರದ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದೆ. ಅದೇ ವೇಳೆ ಕೊವಿಡ್ -19 ಸಾವಿಗೆ ಪ್ರಸ್ತಾಪಿಸಿದ ₹ 50,000 ಪರಿಹಾರ ಪ್ರಕರಣದ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ. “ಇಂದು ನಾವು ತುಂಬಾ ಸಂತೋಷವಾಗಿದ್ದೇವೆ. ತೊಂದರೆ ಅನುಭವಿಸಿದ ವ್ಯಕ್ತಿಗಳಿಗೆ ಸ್ವಲ್ಪ ಸಾಂತ್ವನ ಸಿಗುತ್ತದೆ. ಸರ್ಕಾರ ನಡೆಸುತ್ತಿರುವ ಎಲ್ಲ ಕಾರ್ಯದ ಬಗ್ಗೆಯೂ ಖುಷಿಯಾಗಿದೆ. ಬಳಲುತ್ತಿರುವ ವ್ಯಕ್ತಿಯ ಕಣ್ಣೀರು ಒರೆಸಲು ಏನಾದರೂ ಮಾಡಲಾಗುತ್ತಿದೆ ಎಂದು ನಮಗೆ ಸಂತೋಷವಾಗಿದೆ ಎಂದು ನ್ಯಾಯಮೂರ್ತಿ ಎಂಆರ್ ಶಾ ಹೇಳಿದ್ದಾರೆ.

ಎರಡನೇ ಅಲೆಗೆ ಸನ್ನದ್ಧತೆಯ ಕೊರತೆ ಮತ್ತು ವೈದ್ಯಕೀಯ ಆಮ್ಲಜನಕದಂತಹ ಅಗತ್ಯತೆಗಳ ಕೊರತೆಯಿಂದಾಗಿ ಸಾವಿರಾರು ಸಾವುಗಳ ಮೇಲೆ ತೀವ್ರ ಪರಿಶೀಲನೆ ನಡೆಸಿದ ಕೊರೊನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಭಾರತದ ಪ್ರತಿಕ್ರಿಯೆಯನ್ನು ನ್ಯಾಯಮೂರ್ತಿಗಳಾದ ಶಾ ಮತ್ತು ಎಎಸ್ ಬೋಪಣ್ಣ ಶ್ಲಾಘಿಸಿದ್ದಾರೆ.

“ನಮ್ಮ ಜನಸಂಖ್ಯೆಯ ಗಾತ್ರ, ಲಸಿಕೆ ವೆಚ್ಚಗಳು, ಆರ್ಥಿಕ ಪರಿಸ್ಥಿತಿ ಮತ್ತು ನಾವು ಎದುರಿಸಿದ ಪ್ರತಿಕೂಲ ಸನ್ನಿವೇಶಗಳನ್ನು ಗಮನಿಸಿದರೆ ನಾವು ಅನುಕರಣೀಯ ಕ್ರಮಗಳನ್ನು ಕೈಗೊಂಡಿದ್ದೇವೆ. ಭಾರತ ಮಾಡಿದ್ದನ್ನು ಬೇರೆ ಯಾವ ದೇಶವೂ ಮಾಡಲು ಸಾಧ್ಯವಾಗಲಿಲ್ಲ” ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಇದನ್ನೂ ಓದಿ: ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ 4ನೇ ತರಗತಿ ವಿದ್ಯಾರ್ಥಿ

ಇದನ್ನೂ ಓದಿ: ಕುಮಟಾ- ಹೊನ್ನಾವರ ಹೆದ್ದಾರಿ ಅಗಲೀಕರಣ ಕಾಮಗಾರಿ ಮುಂದುವರಿಸಲು ಹೈಕೋರ್ಟ್ ಅನುಮತಿ