ತ್ರಿವಿಕ್ರಮ್ ಡೇಂಜರ್ ಎಂದ ಭವ್ಯಾ ಗೌಡ; ಫಿನಾಲೆ ಹತ್ತಿರ ಬಂದಾಗ ರಾಧೆಗೆ ಬೇಡವಾದ ಕೃಷ್ಣ
ಇನ್ನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಫಿನಾಲೆ ಬರುತ್ತದೆ. ಕೆಲವೇ ದಿನಗಳು ಉಳಿದಿರುವಾಗ ಭವ್ಯಾ ಗೌಡ ಮತ್ತು ತ್ರಿವಿಕ್ರಮ್ ನಡುವೆ ಬಿರುಕು ಉಂಟಾಗಿದೆ. ಮೊದಲೆಲ್ಲ ಭವ್ಯಾ ಅವರಿಗೆ ತುಂಬ ಒಳ್ಳೆಯ ವ್ಯಕ್ತಿಯಾಗಿ ಕಾಣಿಸುತ್ತಿದ್ದ ತ್ರಿವಿಕ್ರಮ್ ಈಗ ಡೇಂಜರ್ ಎನಿಸುತ್ತಿದ್ದಾರೆ! ಈ ಮಾತನ್ನು ಸುದೀಪ್ ಎದುರಲ್ಲಿಯೇ ಭವ್ಯಾ ಹೇಳಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.
‘ಬಿಗ್ ಬಾಸ್’ ಮನೆಯಲ್ಲಿ ಡೇಂಜರ್ ಯಾರು ಎಂದು ಕೇಳಿದ್ದಕ್ಕೆ ಭವ್ಯಾ ಅವರು ತ್ರಿವಿಕ್ರಮ್ ಹೆಸರನ್ನು ಹೇಳಿದ್ದಾರೆ. ಆ ಮಾತು ಕೇಳಿ ಎಲ್ಲರಿಗೂ ಶಾಕ್ ಆಗಿದೆ. ಈ ಮೊದಲು ಭವ್ಯಾ ಮತ್ತು ತ್ರಿವಿಕ್ರಮ್ ಅವರನ್ನು ರಾಧಾ-ಕೃಷ್ಣ ಎಂದೆಲ್ಲ ಹೊಗಳಲಾಗಿತ್ತು. ಆದರೆ ಈಗ ಅವರ ಸಂಬಂಧದಲ್ಲಿ ಬಿರುಕು ಮೂಡಿದೆ. ಭಾನುವಾರದ (ಜನವರಿ 5) ಸಂಚಿಕೆಯ ಪ್ರೋಮೋ ಇಲ್ಲಿದೆ. ಪೂರ್ತಿ ಸಂಚಿಕೆಯಲ್ಲಿ ಇನ್ನಷ್ಟು ವಿವರಗಳು ತೆರೆದುಕೊಳ್ಳಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos