ಪತಿ ಜೊತೆ ಗೌತಮಿ, ಕದ್ದು ನೋಡಿದ ದೋಸ್ತರಿಗೆ ಕಂಡಿದ್ದೇನು?

ಪತಿ ಜೊತೆ ಗೌತಮಿ, ಕದ್ದು ನೋಡಿದ ದೋಸ್ತರಿಗೆ ಕಂಡಿದ್ದೇನು?

ಮಂಜುನಾಥ ಸಿ.
|

Updated on: Jan 05, 2025 | 12:10 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ರ ಈ ಭಾನುವಾರದ ಎಪಿಸೋಡ್ ಸಖತ್ ತಮಾಷೆಯ ಎಪಿಸೋಡ್ ಆಗಿರಲಿದೆ. ಈಗ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ಸುದೀಪ್, ಇತರೆ ಸ್ಪರ್ಧಿಗಳ ತಮಾಷೆಯ ವಿಡಿಯೋಗಳನ್ನು ಪ್ರದರ್ಶಿಸಿದ್ದಾರೆ. ಗೌತಮಿ ಹಾಗೂ ಅವರ ಪತಿ ಒಟ್ಟಿಗೆ ಇದ್ದಾಗ ಧನರಾಜ್-ಹನುಮಂತು ಕದ್ದುಮುಚ್ಚಿ ನೋಡಿದ ವಿಡಿಯೋ ನಗು ಎಬ್ಬಿಸಿದೆ.

ಕೆಲ ದಿನಗಳ ಹಿಂದೆ ಬಿಗ್​ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬದವರು ಆಗಮಿಸಿದ್ದರು. ಈ ವೇಳೆ ಗೌತಮಿ ಅವರ ಪತಿಯೂ ಮನೆಗೆ ಬಂದಿದ್ದರು. ಮನೆಯಲ್ಲಿ ಗೌತಮಿ ಹಾಗೂ ಅವರ ಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಗೌತಮಿ ಹಾಗೂ ಅವರ ಪತಿ ಒಟ್ಟಿಗೆ ಕೂತು ಮಾತನಾಡುತ್ತಿರುವಾಗ ಅದನ್ನು ಧನರಾಜ್ ಮತ್ತು ಹನುಮಂತು ಕದ್ದು ಮುಚ್ಚಿ ನೋಡುತ್ತಿದ್ದರು. ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾನುವಾರದ ಎಪಿಸೋಡ್​ನಲ್ಲಿ ಸುದೀಪ್ ಈ ತಮಾಷೆಯ ವಿಡಿಯೋಗಳನ್ನು ಎಲ್ಲರಿಗೂ ತೋರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ