AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಸತತ 18 ದಿನಗಳ ಬಳಿಕ ಏರಿಕೆ ಕಂಡ ಡೀಸೆಲ್​ ಬೆಲೆ; ಪೆಟ್ರೋಲ್​ ಬೆಲೆ ಸ್ಥಿರ!

Petrol Rate Today: ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಪೆಟ್ರೋಲ್ ದರ ಸ್ಥಿರವಾಗಿಯೇ ಇದೆ. ಆದರೆ ಸತತ 18 ದಿನಗಳ ಬಳಿಕ ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಲೀಟರ್ ಡೀಸೆಲ್ ಬೆಲೆಯಲ್ಲಿ 20 ರಿಂದ 25 ಪೈಸೆ ಹೆಚ್ಚಳ ಮಾಡಲಾಗಿದೆ.

Petrol Price Today: ಸತತ 18 ದಿನಗಳ ಬಳಿಕ ಏರಿಕೆ ಕಂಡ ಡೀಸೆಲ್​ ಬೆಲೆ; ಪೆಟ್ರೋಲ್​ ಬೆಲೆ ಸ್ಥಿರ!
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on:Sep 24, 2021 | 8:28 AM

Petrol Diesel Price Today | ದೆಹಲಿ: ಇಂದು ಸಹ (ಸೆಪ್ಟೆಂಬರ್ 24, ಶುಕ್ರವಾರ) ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಪೆಟ್ರೋಲ್ ದರ (Petrol Price) ಸ್ಥಿರವಾಗಿಯೇ ಇದೆ. ಆದರೆ ಸತತ 18 ದಿನಗಳ ಬಳಿಕ ಡೀಸೆಲ್ ಬೆಲೆಯಲ್ಲಿ (Diesel Price) ಏರಿಕೆ ಕಂಡು ಬಂದಿದೆ. ಲೀಟರ್ ಡೀಸೆಲ್ ಬೆಲೆಯಲ್ಲಿ 20 ರಿಂದ 25 ಪೈಸೆ ಹೆಚ್ಚಳ ಮಾಡಲಾಗಿದೆ.

ಮುಂಬೈನಲ್ಲಿ ಡೀಸೆಲ್ ಬೆಲೆಯಲ್ಲಿ 22 ಪೈಸೆ ಹೆಚ್ಚಳವಾಗಿದ್ದು, ಲೀಟರ್ ಡೀಸೆಲ್ ಬೆಲೆ 96.41 ರೂಪಾಯಿ ಇದೆ. ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲವಾದ್ದರಿಂದ ಲೀಟರ್ ಪೆಟ್ರೋಲ್​ಗೆ 107.26 ರೂಪಾಯಿ ಇದೆ. ಅದೇ ರೀತಿ ದೆಹಲಿಯಲ್ಲಿ 20 ಪೈಸೆ ಹೆಚ್ಚಳದ ಬಳಿಕ ಲೀಟರ್ ಡೀಸೆಲ್ ದರ 88.82 ರೂಪಾಯಿಗೆ ಏರಿಕೆ ಆಗಿದೆ. ಲೀಟರ್ ಪೆಟ್ರೋಲ್ ದರ 101.19 ರೂಪಾಯಿ ಇದೆ.

ಕೊಲ್ಕತ್ತಾದಲ್ಲಿ ಲೀಟರ್ ಡೀಸೆಲ್ ಬೆಲೆಯಲ್ಲಿ 21 ಪೈಸೆ ಹೆಚ್ಚಳ ಮಾಡಲಾಗಿದೆ. ಆ ಬಳಿಕ ಲೀಟರ್ ಡೀಸೆಲ್ ಬೆಲೆ 91.92 ರೂಪಾಯಿಗೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಲೀಟರ್ ಪೆಟ್ರೋಲ್​ಗೆ 101.62 ರೂಪಾಯಿ ಇದೆ.

ಚೆನ್ನೈನಲ್ಲಿ ಲೀಟರ್ ಡೀಸೆಲ್ ದರದಲ್ಲಿ 20 ಪೈಸೆ ಹೆಚ್ಚಳ ಮಾಡಲಾಗಿದೆ. ಬಳಿಕ 93.46 ರೂಪಾಯಿಗೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಲೀಟರ್ ಪೆಟ್ರೋಲ್​ ದರ 98.96 ರೂಪಾಯಿ ಇದೆ. ಬೆಂಗಳೂರಿನಲ್ಲಿ ಲೀಟರ್ ಡೀಸೆಲ್ ದರ 94.27 ರೂಪಾಯಿ ಇದೆ. ಅದೇ ರೀತಿ ಲೀಟರ್ ಪೆಟ್ರೋಲ್ ದರ 104.70 ರೂಪಾಯಿ ಇದೆ. ಹೈದರಾಬಾದ್​ನಲ್ಲಿ ಲೀಟರ್ ಡೀಸೆಲ್ ದರ 96.92 ರೂಪಾಯಿಗೆ ಏರಿಕೆ ಆಗಿದೆ. ಲೀಟರ್ ಪೆಟ್ರೋಲ್ ದರ 105.26 ರೂಪಾಯಿ ಇದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ:

ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

(Petrol Price Unchanged today on 2021 September 24 and check diesel price in Bangalore Delhi Mumbai and Major city)

Published On - 8:16 am, Fri, 24 September 21

ಮೂಲ ನಕ್ಷತ್ರದಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ನೋಡಿ
ಮೂಲ ನಕ್ಷತ್ರದಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ನೋಡಿ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು