ನೋಡುವಷ್ಟು ನೋಡಿ ಹನುಮಂತನ ಮುಖವಾಡ ಕಳಚಿದ ಕಿಚ್ಚ ಸುದೀಪ್

ಬಿಗ್ ಬಾಸ್ ಕನ್ನಡದಲ್ಲಿ ಹನುಮಂತ ಅವರು ಆರಂಭದಲ್ಲಿ ಗೆಲುವಿನ ಭರವಸೆಯಲ್ಲಿ ಇದ್ದರು. ಆದರೆ, ಇತ್ತೀಚೆಗೆ ಅವರ ವರ್ತನೆ ಮತ್ತು ಇತರ ಸ್ಪರ್ಧಿಗಳೊಂದಿಗಿನ ಸಂಬಂಧಗಳು ಹದಗೆಟ್ಟಿವೆ. ಕಿಚ್ಚ ಸುದೀಪ್ ಅವರು ಹನುಮಂತ ಅವರಿಗೆ ಹಲವಾರು ಬಾರಿ ಎಚ್ಚರಿಕೆ ನೀಡಿದ್ದಾರೆ. ಈಗ ಹನುಮಂತ ಅವರು ಮನೆಯಿಂದ ಹೊರ ನಡೆಯಲು ನಿರ್ಧರಿಸಿರುವ ಬಗ್ಗೆಯೂ ಹೇಳಿದ್ದರು.

ನೋಡುವಷ್ಟು ನೋಡಿ ಹನುಮಂತನ ಮುಖವಾಡ ಕಳಚಿದ ಕಿಚ್ಚ ಸುದೀಪ್
ಹನುಮಂತ-ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Jan 06, 2025 | 7:03 AM

ಹನುಮಂತ ಅವರು ಬಿಗ್ ಬಾಸ್​ನಲ್ಲಿ ಗೆಲ್ಲುವ ಕುದುರೆ ಆಗಿದ್ದರು. ಆದರೆ, ಈಗ ಆ ಕುದುರೆಯ ಚಾರ್ಮ್ ಹೋಗಿದೆ. ಓಟದಲ್ಲಿ ಕೊನೆಯಲ್ಲಿ ನಿಲ್ಲುತ್ತಿದೆ. ಕಿಚ್ಚ ಸುದೀಪ್ ಅವರ ನೆಚ್ಚಿನ ಸ್ಪರ್ಧಿಗಳಲ್ಲಿ ಹನುಮಂತ ಕೂಡ ಒಬ್ಬರಾಗಿದ್ದರು. ಏನೇ ಇದ್ದರೂ ನೇರವಾಗಿ ಹೇಳುತ್ತಿದ್ದರು. ಬುದ್ಧಿವಂತ ಎನಿಸಿಕೊಂಡಿದ್ದರು. ಈಗ ಸುದೀಪ್ ಅವರಿಗೆ ಹನುಮಂತನ ಬಗ್ಗೆ ಬೇಸರ ಮೂಡಿದೆ. ಹನುಮಂತ ಅವರ ಮುಖವಾಡವನ್ನು ಸುದೀಪ್ ಕಳಚಿದ್ದಾರೆ. ಖಡಕ್ ಮಾತಿನಲ್ಲಿ ಹನುಮಂತಗೆ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಕ್ಲಾಸ್ ತೆಗೆದುಕೊಂಡರೆ ಭಾನುವಾರ ಫನ್ ಆ್ಯಕ್ಟಿವಿಟಿ ಇರುತ್ತದೆ. ಎರಡೂ ಎಪಿಸೋಡ್​ನಲ್ಲಿ ಹನುಮಂತಗೆ ಎಚ್ಚರಿಕೆ ನೀಡುವ ಕೆಲಸ ಆಗಿದೆ. ಯಾವುದೇ ನೆಗೆಟಿವ್ ವಿಚಾರ ಬಂದರೂ ಎಲ್ಲರೂ ಚೈತ್ರಾ ಅವರ ಹೆಸರನ್ನು ತೆಗೆದುಕೊಳ್ಳುತ್ತಿದ್ದರು. ಇದಕ್ಕೆ ಹನುಮಂತ ಕೂಡ ಹೊರತಾಗಿರಲಿಲ್ಲ. ಈ ಕಾರಣಕ್ಕೆ ಸುದೀಪ್ ಅವರು ಹನುಮಂತಗೆ ಕ್ಲಾಸ್ ತೆಗೆದುಕೊಂಡರು. ಆ ಬಳಿಕ ಚೈತ್ರಾ ಬಿಟ್ಟು ಮತ್ಯಾರ ಹೆಸರು ತೆಗೆದುಕೊಳ್ಳುತ್ತೀರಿ ಎಂದಾಗ ಅವರು ಧನರಾಜ್ ಅವರ ಹೆಸರನ್ನು ಹೇಳಿದರು.

ಏನಾದರೂ ಆರೋಪ ಮಾಡುವ ವಿಚಾರ ಬಂದಾಗ ಹನುಮಂತ ಅವರು ಧನರಾಜ್ ಮೇಲೆ, ಧನರಾಜ್ ಅವರು ಹನುಮಂತ ಮೇಲೆ ಆರೋಪಿಸುತ್ತಾರೆ. ಈ ಮೂಲಕ ಬೇರೆಯವರ ಬಾಯಿಗೆ ಆಹಾರ ಆಗುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಸುದೀಪ್ ಅವರು ಪಾಠ ಮಾಡಿದರು. ಆ ಬಳಿಕ ಹನುಮಂತ ಮಂಕಾದರು. ನಂತರ ಅಪ್ಸೆಟ್ ಆದಂತೆ ಕಂಡು ಬಂತು.

ಭಾನುವಾರದ ಎಪಿಸೋಡ್​ನಲ್ಲಿ ಸುದೀಪ್ ಅವರು ಏನನ್ನೋ ಹೇಳ ಹೊರಟರು. ಆಗ ಹನುಮಂತ ಅವರ ಮುಖದಲ್ಲಿ ಯಾವುದೇ ನಗು ಬಂದಿಲ್ಲ. ‘ನಗುತ್ತಾ ಹೇಳಬಹುದಲ್ಲ ಹನುಮಂತ’ ಎಂದರು ಸುದೀಪ್. ಮುಂದುವರಿದು, ‘ನೀವು ಹಾಗೂ ಧನರಾಜ್​ ಅವರು ಏನೇನು ಮಾತಾಡುತ್ತೀರಾ ಎಂಬುದನ್ನು ಜೂಮ್​ ಹಾಕಿ ಕೇಳಿಸಿಕೊಳ್ಳುತ್ತಾ ಇರುತ್ತೇನೆ. ಈ ಜಾಗದಲ್ಲಿ ಮಾತ್ರ ಮಾತು ಕಡಿಮೆ ಆಯಿತು ಎಂದರೆ ನಾನು ನಂಬುವವನಲ್ಲ’ ಎಂದರು ಸುದೀಪ್. ಈ ಮೂಲಕ ಹನುಮಂತ ಅವರು ನಾಟಕ ಮಾಡುತ್ತಿದ್ದಾರೆ ಎಂಬುದನ್ನು ನೇರವಾಗಿ ಹೇಳಿದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಹೊರಬರಲು ಹನುಮಂತ ನಿರ್ಧಾರ; ಧನರಾಜ್ ಪ್ರತಿಕ್ರಿಯೆ ಏನು?

ಹನುಮಂತ ಅವರು ಈಗ ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ‘ನನಗೆ ಈ ಆಟ ಸಾಕಾಗಿದೆ’ ಎಂದು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ