AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಕೊರೊನಾ ಲಸಿಕೆ ತೆಗೆದುಕೊಂಡಿದ್ದಕ್ಕೆ ಪತಿಗೆ ಶಾಕ್​; ಹುಡುಕಿ ಹೋಗಿ ನರ್ಸ್​ಗೆ ಹೊಡೆದ ವ್ಯಕ್ತಿ

Covid 19 Vaccine: ಪತ್ನಿ ಕೊರೊನಾ ಲಸಿಕೆ ಪಡೆಯುತ್ತಿದ್ದಂತೆ ಆಕೆಯ ಬಳಿ ಎಲ್ಲಿ ಪಡೆದೆ? ಕೊಟ್ಟವರು ಯಾರು ಎಂಬಿತ್ಯಾದಿ ಪ್ರಶ್ನೆಗಳನ್ನು ಆ ವ್ಯಕ್ತಿ ಪಡೆದಿದ್ದಾನೆ.

ಪತ್ನಿ ಕೊರೊನಾ ಲಸಿಕೆ ತೆಗೆದುಕೊಂಡಿದ್ದಕ್ಕೆ ಪತಿಗೆ ಶಾಕ್​; ಹುಡುಕಿ ಹೋಗಿ ನರ್ಸ್​ಗೆ ಹೊಡೆದ ವ್ಯಕ್ತಿ
ಕೊರೊನಾ ಲಸಿಕೆ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on: Sep 23, 2021 | 5:27 PM

Share

ಕೆನಡಾದ  ಕ್ವಿಬೆಕ್​​ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬ ನರ್ಸ್​ ಮುಖದ ಮೇಲೆ ಹೊಡೆದು ಸುದ್ದಿಯಾಗಿದ್ದಾರೆ. ತನ್ನ ಪತ್ನಿಗೆ ಕೊವಿಡ್​ 19 ಲಸಿಕೆ (Covid 19 Vaccine) ನೀಡಿದ್ದಾರೆ ಎಂಬ ಒಂದೇ ಕಾರಣಕ್ಕೆ ಹೀಗೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಪತ್ನಿ ತನ್ನ ಕೇಳದೆ ಕೊವಿಡ್​ 19 ಲಸಿಕೆ ತೆಗೆದುಕೊಂಡಳು ಎಂಬುದನ್ನು ಕೇಳಿ ಸಿಕ್ಕಾಪಟೆ ಶಾಕ್​ಗೆ ಕೂಡ ಒಳಗಾಗಿದ್ದಾರೆ ಎಂದು ಪೊಲೀಸ್​ ವಕ್ತಾರ ತಿಳಿಸಿದ್ದಾರೆ.  

ಘಟನೆ ನಡೆದದ್ದು ಸೋಮವಾರವಾದರೂ ಇದೀಗ ಬೆಳಕಿಗೆ ಬಂದಿದೆ. ತನ್ನ ಪತ್ನಿ ಕೊರೊನಾ ಲಸಿಕೆ ಪಡೆಯುತ್ತಿದ್ದಂತೆ ಆಕೆಯ ಬಳಿ ಎಲ್ಲಿ ಪಡೆದೆ? ಕೊಟ್ಟವರು ಯಾರು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾನೆ. ನಂತರ ಆಕೆ ಲಸಿಕೆ ಪಡೆದ ಫಾರ್ಮಸಿಗೆ ತೆರಳಿ ಅಲ್ಲಿನ ನರ್ಸ್​​ ಮುಖಕ್ಕೆ ಹೊಡೆದಿದ್ದಾನೆ ಎಂದು ರಾಯಿಟರ್ಸ್​ ವರದಿ ಮಾಡಿದೆ.  ಆದರೆ ಆ ವ್ಯಕ್ತಿ ಯಾರೆಂದು ಇನ್ನೂ ಗೊತ್ತಾಗಲಿಲ್ಲ. ವ್ಯಕ್ತಿಯನ್ನು ಪತ್ತೆ ಹಚ್ಚಲು ಸಹಾಯ ಮಾಡುವಂತೆ ಪೊಲೀಸರು ಅಲ್ಲಿದ್ದ ಜನರ ಬಳಿ ಕೇಳಿದ್ದಾರೆ. ಆತ ಸಣ್ಣದಾದ ಕಪ್ಪುಬಣ್ಣದ ಕೂದಲು ಹೊಂದಿದೆ. ಹುಬ್ಬುಗಳು ದಪ್ಪವಾಗಿವೆ. ಆತನ ಕೈ ಮೇಲೆ ಟ್ಯಾಟೂ ಇದೆ ಎಂದು ಫಾರ್ಮಸಿಯಲ್ಲಿರುವವರು ಹೇಳಿದ್ದಾರೆ.

ವಿಚಿತ್ರವೆಂದರೆ ಕೆನಡಾದ ಹಲವು ಕಡೆಗಳಲ್ಲಿ ಕೊರೊನಾ ಲಸಿಕೆ ವಿರೋಧಿ ಪ್ರತಿಭಟನೆಗಳು ನಡೆಯುತ್ತಿವೆ. ಕ್ವಿಬೆಕ್ ಪ್ರಾಂತ್ಯದ ಆಡಳಿತಾಧಿಕಾರಿ ಫ್ರಾಂಕೋಯಿಸ್ ಲೆಗಾಲ್ಟ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ನಮ್ಮ ಪ್ರಾಂತ್ಯದಲ್ಲಿ ಲಸಿಕೆ ವಿರೋಧಿ ಪ್ರತಿಭಟನೆ ನಡೆಯುವದನ್ನು ತಪ್ಪಿಸಲು ವಿಶೇಷ ಕಾನೂನು ಜಾರಿಗೊಳಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ‘ತೆರೆ ಹಿಂದೆಯೂ ನಗ್ನಳಾಗುವಂತೆ ಸೂಚಿಸಿದ್ದರು’; ಮಲ್ಲಿಕಾ ಶೆರಾವತ್​ ಬಿಚ್ಚಿಟ್ಟ ನಟರ ಕರಾಳ ಮುಖ

Crime News: ಹಾಡಹಗಲೇ ಕಾಲೇಜು ಯುವತಿಯ ಕುತ್ತಿಗೆ ಸೀಳಿ ಕೊಲೆ; ಪ್ರೇಮ ವೈಫಲ್ಯದ ಶಂಕೆ

(A man punches nurse for giving coronavirus Vaccine to his Wife in Canada)

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ