Crime News: ಹಾಡಹಗಲೇ ಕಾಲೇಜು ಯುವತಿಯ ಕುತ್ತಿಗೆ ಸೀಳಿ ಕೊಲೆ; ಪ್ರೇಮ ವೈಫಲ್ಯದ ಶಂಕೆ

TV9 Digital Desk

| Edited By: Sushma Chakre

Updated on: Sep 23, 2021 | 5:00 PM

Murder News: 20 ವರ್ಷದ ಕಾಲೇಜು ವಿದ್ಯಾರ್ಥಿನಿ ಶ್ವೇತಾಳ ಕುತ್ತಿಗೆಯನ್ನು ಚಾಕುವಿನಿಂದ ಸೀಳಿದ ಬಳಿಕ ತನ್ನ ಕುತ್ತಿಗೆಯನ್ನೂ ಚುಚ್ಚಿಕೊಂಡ ಯುವಕನಿಗೆ ತೀವ್ರ ರಕ್ತಸ್ರಾವವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರೇಮ ವೈಫಲ್ಯವೇ ಈ ಕೊಲೆಗೆ ಕಾರಣ ಎನ್ನಲಾಗಿದೆ.

Crime News: ಹಾಡಹಗಲೇ ಕಾಲೇಜು ಯುವತಿಯ ಕುತ್ತಿಗೆ ಸೀಳಿ ಕೊಲೆ; ಪ್ರೇಮ ವೈಫಲ್ಯದ ಶಂಕೆ
ಕೊಲೆ ಮಾಡಿ, ಆತ್ಮಹತ್ಯೆಗೆ ಯತ್ನಿಸಿದ ಯುವಕ
Follow us

ಚೆನ್ನೈ: ತಮಿಳುನಾಡಿನ ಚೆನ್ನೈನ ತಂಬರಂ ರೈಲ್ವೆ ನಿಲ್ದಾಣದ ಹೊರಗೆ ಕಾಲೇಜು ಯುವತಿಯ ಕುತ್ತಿಗೆಯನ್ನು ಕೊಯ್ದು ಯುವಕನೋರ್ವ ಕೊಲೆ ಮಾಡಿರುವ ಘಟನೆ ನಡೆದಿದೆ. ಹಾಡಹಗಲೇ ನಡು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಯುವತಿಯನ್ನು ಕೊಲೆ ಮಾಡಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯುವಕ ಯತ್ನಿಸಿದ್ದು, ಅಕ್ಕಪಕ್ಕದಲ್ಲಿದ್ದವರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಪ್ರೀತಿಯ ವಿಷಯಕ್ಕೆ ಯುವತಿಯನ್ನು ಯುವಕ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಈ ಕೃತ್ಯಕ್ಕೆ ಕಾರಣವೇನೆಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ಯುವಕನ ಹುಚ್ಚಾಟಕ್ಕೆ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನ 20 ವರ್ಷದ ವಿದ್ಯಾರ್ಥಿನಿ ಶ್ವೇತಾ ಪ್ರಾಣ ಕಳೆದುಕೊಂಡಿದ್ದಾಳೆ. ಆಕೆಯ ಕುತ್ತಿಗೆಯನ್ನು ಚಾಕುವಿನಿಂದ ಸೀಳಿದ ಬಳಿಕ ತನ್ನ ಕುತ್ತಿಗೆಯನ್ನೂ ಚುಚ್ಚಿಕೊಂಡ ಯುವಕನಿಗೆ ತೀವ್ರ ರಕ್ತಸ್ರಾವವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರೇಮ ವೈಫಲ್ಯವೇ ಈ ಕೊಲೆಗೆ ಕಾರಣವೆಂಬ ಅನುಮಾನ ವ್ಯಕ್ತವಾಗಿದೆ.

ಯುವತಿಯನ್ನು ಕೊಲೆ ಮಾಡಿರುವುದು ಬೇರೆಯವರ ಗಮನಕ್ಕೆ ಬರುವುದು ತಡವಾಗಿದ್ದರಿಂದ ಆಕೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗಲಿಲ್ಲ. ತೀವ್ರ ರಕ್ತಸ್ರಾವದಿಂದ ರಸ್ತೆಯಲ್ಲೇ ಆಕೆ ಪ್ರಾಣ ಬಿಟ್ಟಿದ್ದಾಳೆ. 2016ರಲ್ಲಿ ಸ್ವಾತಿ ಎಂಬ ಯುವತಿಯನ್ನು ಕೂಡ ಇದೇ ರೀತಿಯಲ್ಲಿ ಕೊಲೆ ಮಾಡಲಾಗಿತ್ತು. ನುಂಗಂಬಕ್ಕಂ ರೈಲ್ವೆ ನಿಲ್ದಾಣದ ಹೊರಗೆ 5 ವರ್ಷದ ಹಿಂದೆ ಯುವಕನೊಬ್ಬ ಸ್ವಾತಿ ಎಂಬಾಕೆಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದ.

ಇದನ್ನೂ ಓದಿ: Crime News: ಪ್ರೀತಿಸಲು ನಿರಾಕರಿಸಿದ ಬಾಲಕಿಗೆ ಚಾಕು ಇರಿದ! ಒನ್​​ ಸೈಡ್ ಲವ್ ಹೆಸರಿನಲ್ಲಿ ಯುವಕನ ಹುಚ್ಚಾಟ

ಶಿವಮೊಗ್ಗ: ಪ್ರೇಯಸಿಯನ್ನು ಕೊಂದ ಕೊಲೆಗಾರನ ಸಾವು; ಏಳು ವರ್ಷದ ಪ್ರೀತಿ ಸಾವಿನಲ್ಲಿ ಅಂತ್ಯ

(Crime News: Chennai Man stabs college girl to death attempted suicide Police Suspects Love Failure behind the Murder)

ತಾಜಾ ಸುದ್ದಿ

Related Stories

Click on your DTH Provider to Add TV9 Kannada