Crime News: ಮಾಜಿ ಸಚಿವರ ಮನೆಯಲ್ಲಿ ಪೂಜೆ ಮುಗಿಸಿ ಹೊರಬಂದ ಅರ್ಚಕನ ಮೇಲೆ ಮಾರಣಾಂತಿಕ ಹಲ್ಲೆ
ಅರ್ಚಕ ಮಣಿಕಂಠ ಶರ್ಮಾ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆಗೈದು, ದರೋಡೆ ನಡೆಸಿದ್ದಾರೆ. 60 ಗ್ರಾಂನ ಚಿನ್ನದ ಸರ ಮತ್ತು 20 ಸಾವಿರ ನಗದು ಮತ್ತು ಮೊಬೈಲ್ ಕಸಿದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ಸೆಪ್ಟೆಂಬರ್ 20ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅರ್ಚಕ ಮಣಿಕಂಠ ಶರ್ಮಾ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆಗೈದು, ದರೋಡೆ ನಡೆಸಿದ್ದಾರೆ. 60 ಗ್ರಾಂನ ಚಿನ್ನದ ಸರ, 20 ಸಾವಿರ ನಗದು ಮತ್ತು ಮೊಬೈಲ್ ಕಸಿದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬೆಂಗಳೂರಿನ ಹೆಣ್ಣೂರು ಅಂಡರ್ಪಾಸ್ ಬಳಿ ಈ ಘಟನೆ ಸಂಭವಿಸಿದೆ. ಸೆ.20ರಂದು ಮಾಜಿ ಸಚಿವ ಆರ್.ಶಂಕರ್ ಮನೆಯಲ್ಲಿ ಪೂಜೆ ಮುಗಿಸಿ ಅರ್ಚಕ ಮಣಿಕಂಠ ಶರ್ಮಾ ವಾಪಸಾಗುತ್ತಿದ್ದರು. ಸತ್ಯನಾರಾಯಣ ಪೂಜೆ ಮುಗಿಸಿ ಬರುತ್ತಿರುವಾಗ ಈ ಘಟನೆ ನಡೆದಿದೆ. ಕಲ್ಯಾಣನಗರದಿಂದ ಹೋಗುವ ವೇಳೆ ಅರ್ಚಕನ ಮೇಲೆ ಹಲ್ಲೆ ನಡೆದಿದ್ದು, ಈ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾಜಿ ಸಚಿವರ ಮನೆಯಲ್ಲಿ ಪೂಜೆ ಮುಗಿಸಿ ಹೊರಬಂದ ಅರ್ಚಕನ ಮೇಲೆ ದುಷ್ಕರ್ಮಿಗಳು ಲಾಂಗ್ನಿಂದ ಹಲ್ಲೆ ಮಾಡಿದ್ದಾರೆ. ಮಾಜಿ ಸಚಿವ ಆರ್.ಶಂಕರ್ ನಿವಾಸದಲ್ಲಿ ಕಳೆದ ಸೆಪ್ಟೆಂಬರ್ 20ರ ಸಂಜೆ ಹುಣ್ಣಿಮೆ ದಿನ ಸತ್ಯನಾರಾಯಣ ಪೂಜೆ ಇತ್ತು. ಕಲ್ಯಾಣನಗರದಲ್ಲಿರುವ ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜೆಯಲ್ಲಿ ಅರ್ಚಕ ಮಣಿಕಂಠ ಶರ್ಮಾ ಭಾಗಿಯಾಗಿದ್ದರು. ಹುಣ್ಣಿಮೆ ಪೂಜೆಗೆ ಅರ್ಚಕನಾಗಿ ತೆರಳಿದ್ದರು.
ರಾತ್ರಿ 10.15ರ ಸುಮಾರಿಗೆ ಅರ್ಚಕ ಸತ್ಯನಾರಾಯಣ ಪೂಜೆ ಮುಗಿಸಿ ಸಚಿವರ ಮನೆಯಿಂದ ಹೊರಡುತ್ತಾರೆ. 10.45ರ ಸುಮಾರಿಗೆ ಹೆಣ್ಣೂರು ಅಂಡರ್ಪಾಸ್ ಬಳಿ ಅರ್ಚಕನ ಕಾರನ್ನು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಅರ್ಚಕನ ಕಾರನ್ನ ಫಾಲೋ ಮಾಡಿ ಅಡ್ಡಗಟ್ಟಿದ್ದಾರೆ. ಅರ್ಚಕ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಮಚ್ಚು, ಲಾಂಗನ್ನ ತೋರಿಸಿದ್ದಾರೆ. ಕೂಡಲೇ ಅರ್ಚಕ ಸ್ಥಳದಿಂದ ಓಡಲು ಯತ್ನಿಸಿದ್ದಾರೆ. ಆದರೂ ಅರ್ಚಕನ ಬಲಗೈ ಹಾಗೂ ಎಡಕಾಲಿನ ತೊಡೆಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.
ಹಲ್ಲೆ ಮಾಡಿ ಅರ್ಚಕನ ಬಳಿಯಿದ್ದ 60 ಗ್ರಾಂ ತೂಕದ ಚಿನ್ನದ ಸರ, 20 ಸಾವಿರ ನಗದು, 1 ರೆಡ್ ಮಿ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಸದ್ಯ ಗಾಯಗೊಂಡಿರುವ ಅರ್ಚಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ನಂತರ ಅರ್ಚಕನಿಗೆ ಕರೆಮಾಡಿ ಮಾಹಿತಿ ಪಡೆದ ಮಾಜಿ ಸಚಿವ ಆರ್.ಶಂಕರ್. ಆರೋಪಿಗಳು ಯಾರೇ ಇದ್ದರೂ ಕೂಡಲೇ ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
Crime News: ಪ್ರಿಯಕರನೊಂದಿಗೆ ಓಡಿಹೋಗಲು ಹೆತ್ತ ತಂದೆ ತಾಯಿಗೆ ವಿಷ ಪ್ರಾಶನ ಮಾಡಿಸಿದ ಯುವತಿ
(attack on priest in Bengaluru and 60 grams of gold and 20 thousand were stolen)
Published On - 10:21 am, Thu, 23 September 21