Crime News: ಗಂಡನನ್ನು ಕೊಂದು, ಶವವನ್ನು ಕತ್ತರಿಸಿ ಬ್ಯಾಗ್​ನಲ್ಲಿಟ್ಟ ಹೆಂಡತಿ; ಆ ಒಂದು ತಪ್ಪಿನಿಂದ ಸಿಕ್ಕಿಬಿದ್ದ ಹಂತಕಿ!

Murder News | ಗಂಡನನ್ನು ಕೊಲೆ ಮಾಡಿದ ಬಳಿಕ ಆ ಹೆಣವನ್ನು ಸಾಗಿಸುವುದು ಕಷ್ಟವೆಂದು ಅರಿತ ರಾಧಾ ಏನು ಮಾಡುವುದೆಂದು ಇಂಟರ್ನೆಟ್​ನಲ್ಲಿ ಹುಡುಕಾಡಿದ್ದಳು. ಬಳಿಕ ಪ್ರೇಮಿಯ ಜೊತೆ ಸೇರಿ ರಾಕೇಶನ ಶವವನ್ನು ತುಂಡಾಗಿ ಕತ್ತರಿಸಿ, ವಾಸನೆ ಹರಡದಂತೆ ರಾಸಾಯನಿಕ ಸಿಂಪಡಿಸಿದ್ದಳು.

Crime News: ಗಂಡನನ್ನು ಕೊಂದು, ಶವವನ್ನು ಕತ್ತರಿಸಿ ಬ್ಯಾಗ್​ನಲ್ಲಿಟ್ಟ ಹೆಂಡತಿ; ಆ ಒಂದು ತಪ್ಪಿನಿಂದ ಸಿಕ್ಕಿಬಿದ್ದ ಹಂತಕಿ!
ರಾಕೇಶ್- ರಾಧಾ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Sep 21, 2021 | 2:10 PM

ಲಕ್ನೋ: ಸ್ಮಾರ್ಟ್​ ಫೋನ್, ಲ್ಯಾಪ್​ಟಾಪ್​ನಿಂದಾಗಿ ಪ್ರತಿಯೊಬ್ಬರೂ ತಂತ್ರಜ್ಞಾನದ ವಿಷಯದಲ್ಲಿ ಅಪ್​ಡೇಟ್ ಆಗಿದ್ದಾರೆ. ಲೂಟಿ, ಕೊಲೆ, ಅಪಹರಣ, ಆನ್​ಲೈನ್ ವಂಚನೆ ಹೀಗೆ ಎಲ್ಲದಕ್ಕೂ ಇಂಟರ್ನೆಟ್​ನಲ್ಲಿ ಸಾವಿರಾರು ಪ್ಲಾನ್​ಗಳಿರುತ್ತವೆ. ಅವುಗಳನ್ನು ನೋಡಿಕೊಂಡು ಅಪರಾಧ ಕೃತ್ಯಗಳನ್ನು ಎಸಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಬಿಹಾರದಲ್ಲಿ ಮಹಿಳೆಯೊಬ್ಬಳು ಅಕ್ರಮ ಸಂಬಂಧವನ್ನು ಮುಚ್ಚಿಟ್ಟುಕೊಳ್ಳಲು ಪ್ರಿಯಕರನ ಸಹಾಯದಿಂದ ತನ್ನ ಗಂಡನನ್ನೇ ಕೊಲೆ ಮಾಡಿ, ರಾಸಾಯನಿಕದಲ್ಲಿ ಆ ಶವವನ್ನು ಮುಳುಗಿಸಿಟ್ಟ ಘಟನೆ ನಡೆದಿದೆ.

ಬೇರೊಬ್ಬ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಗೆ ತನ್ನ ಗಂಡನ ಜೊತೆ ಸಂಸಾರ ಮಾಡಲು ಇಷ್ಟವಿರಲಿಲ್ಲ. ಹೀಗಾಗಿ, ಆತನನ್ನು ಕೊಂದರೆ ತಾವಿಬ್ಬರೂ ಒಟ್ಟಿಗೇ ಸಂತೋಷವಾಗಿ ಜೀವನ ನಡೆಸಬಹುದು ಎಂಬುದು ಆಕೆಯ ಯೋಚನೆಯಾಗಿತ್ತು. ಇದಕ್ಕಾಗಿ ಪ್ರಿಯಕರನ ಸಹಾಯ ಪಡೆದ ಆಕೆ ಗಂಡನನ್ನು ಕೊಲೆ ಮಾಡಿ, ಸಾಕ್ಷಿಗಳು ಸಿಗಬಾರದು ಎಂದು ರಾಸಾಯನಿಕ ಬಳಸಿ ಮನೆಯನ್ನೆಲ್ಲ ಕ್ಲೀನ್ ಮಾಡಿದಳು. ಬಳಿಕ ಗಂಡನ ಶವಕ್ಕೆ ರಾಸಾಯನಿಕ ಸಿಂಪಡಿಸಿ ಇಟ್ಟಳು. ಆದರೆ, ಇದೇ ಆಕೆಗೆ ಮುಳುವಾಯಿತು. ತನ್ನ ಕೃತ್ಯದ ಬಗ್ಗೆ ಗೊತ್ತಾಗಬಾರದು ಎಂದು ಆಕೆ ಮಾಡಿದ್ದ ಪ್ಲಾನ್ ಆಕೆಗೆ ಉಲ್ಟಾ ಹೊಡೆದಿದೆ.

ಬಿಹಾರದ ಮುಜಾಫರ್​ಪುರದ ಸಿಖಂದರಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 30 ವರ್ಷದ ರಾಕೇಶ್ ಎಂಬಾತ ಕೊಲೆಯಾಗಿದ್ದ. ಆತನ ಸಾವಿನ ಬೆನ್ನತ್ತಿ ಹೋದ ಪೊಲೀಸರಿಗೆ ಅದರ ಹಿಂದೆ ಆತನ ಹೆಂಡತಿ ರಾಧಾ, ಆಕೆಯ ಪ್ರಿಯಕರ ಸುಭಾಷ್, ಆಕೆಯ ತಂಗಿ ಹಾಗೂ ತಂಗಿಯ ಗಂಡನ ಕೈವಾಡವಿರುವುದು ಗೊತ್ತಾಯಿತು. ಗಂಡನನ್ನು ಕೊಲೆ ಮಾಡಿದ ಬಳಿಕ ಆ ಹೆಣವನ್ನು ಸಾಗಿಸುವುದು ಕಷ್ಟವೆಂದು ಅರಿತ ರಾಧಾ ಏನು ಮಾಡುವುದೆಂದು ಇಂಟರ್ನೆಟ್​ನಲ್ಲಿ ಹುಡುಕಾಡಿದ್ದಳು. ಆಗ ಆಕೆಯ ಪ್ರೇಮಿಯ ಸಲಹೆಯಂತೆ ರಾಕೇಶನ ಶವವನ್ನು ಇಬ್ಬರೂ ಸೇರಿ ತುಂಡಾಗಿ ಕತ್ತರಿಸಿದ್ದರು. ನಂತರ ಅದಕ್ಕೆ ರಾಸಾಯನಿಕ ಸಿಂಪಡಿಸಿ, ವಾಸನೆ ಹರಡದಂತೆ ಮಾಡಿದ್ದರು. ಬಳಿಕ ಆ ಶವವನ್ನು ಕಟ್ಟಿ ತಮ್ಮ ಬಾಡಿಗೆ ಮನೆಯ ರೂಮಿನಲ್ಲಿ ಇಟ್ಟಿದ್ದರು. ಇದಕ್ಕೆ ರಾಧಾ ತನ್ನ ತಂಗಿ ಹಾಗೂ ತಂಗಿಯ ಗಂಡನ ಸಹಾಯವನ್ನೂ ಪಡೆದಿದ್ದಳು.

Crime News:

ಕೊಲೆ ನಡೆದ ಮನೆಯಲ್ಲಿ ಪೊಲೀಸರ ಪರಿಶೀಲನೆ

ಆದರೆ, ಶವಕ್ಕೆ ಸಿಂಪಡಿಸಿದ್ದ ರಾಸಾಯನಿಕದಿಂದ ಶವ ತುಂಬಿಟ್ಟಿದ್ದ ಬ್ಯಾಗ್ ಜೋರಾಗಿ ಶಬ್ದವಾಗಿ ಸ್ಫೋಟವಾಗಿತ್ತು. ಇದರಿಂದ ಹೆದರಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಅಪಾರ್ಟ್​ಮೆಂಟ್​ಗೆ ಬಂದ ಪೊಲೀಸರು ಶಬ್ದ ಕೇಳಿದ ಮನೆಯನ್ನು ಪರಿಶೀಲಿಸಿದಾಗ ಅಲ್ಲಿ ಶವವನ್ನು ಕಟ್ ಮಾಡಿದಾಗ ಬಿದ್ದಿದ್ದ ಸೂಕ್ಷ್ಮವಾದ ತುಂಡುಗಳನ್ನು ಗಮನಿಸಿದರು. ಅಲ್ಲದೆ, ಮನೆಯಲ್ಲಿ ರಾಸಾಯನಿಕ ಸಿಂಪಡನೆ ಮಾಡಿದ ಕುರುಹುಗಳಿದ್ದವು. ಇದರಿಂದ ಅನುಮಾನಗೊಂಡ ಅವರು ರೂಮನ್ನು ಪರಿಶೀಲಿಸಿದಾಗ ತುಂಡಾಗಿದ್ದ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ ಅದು ರಾಕೇಶನ ಶವ ಎಂಬುದು ಖಚಿತವಾಗಿತ್ತು.

ಬಿಹಾರದಲ್ಲಿ ಆಲ್ಕೋಹಾಲ್ ನಿಷೇಧವಿದ್ದರೂ ರಾಕೇಶ್ ಅಕ್ರಮವಾಗಿ ಲಿಕ್ಕರ್ ಬ್ಯುಸಿನೆಸ್ ನಡೆಸುತ್ತಿದ್ದ. ಆಗೆಲ್ಲ ತನ್ನ ಹೆಂಡತಿಯೊಂದಿಗೆ ಈ ಮನೆಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ವಾಸ ಮಾಡುತ್ತಿದ್ದ. ಆತ ಅಲ್ಲಿರುವ ವಿಚಾರ ಬಹುತೇಕರಿಗೆ ಗೊತ್ತಿರಲಿಲ್ಲ. ಪೊಲೀಸರು ಕೂಡ ಆತನಿಗಾಗಿ ಹುಡುಕಾಡುತ್ತಿದ್ದರು. ಬ್ಯುಸಿನೆಸ್ ಸಲುವಾಗಿ ಬೇರೆ ರಾಜ್ಯಗಳಿಗೆ ಓಡಾಡುತ್ತಿದ್ದ ರಾಕೇಶ್ ತನ್ನ ಮನೆಯ ಕಡೆ ನೋಡಿಕೊಳ್ಳಲು ಗೆಳೆಯ ಸುಭಾಷ್​ಗೆ ಹೇಳಿದ್ದ. ರಾಕೇಶ್ ಇಲ್ಲದಿದ್ದಾಗ ಆತನ ಮನೆಗೆ ಹೋಗುತ್ತಿದ್ದ ಸುಭಾಷ್​ ರಾಧಾ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ. ಈ ವಿಷಯ ರಾಕೇಶನಿಗೆ ಗೊತ್ತಿರಲಿಲ್ಲ.

ಕ್ರಮೇಣ ರಾಕೇಶನ ಬಗ್ಗೆ ಆಸಕ್ತಿ ಕಳೆದುಕೊಂಡ ರಾಧಾ ಆತನನ್ನು ಕೊಂದು ಸುಭಾಷ್​ ಜೊತೆ ಇರಲು ಯೋಚಿಸಿದಳು. ಅದಕ್ಕೆ ಆಕೆಯ ತಂಗಿ ಕೂಡ ಸಹಾಯ ಮಾಡಿದಳು. ತೀಜ್ ಪ್ರಯುಕ್ತ ಗಂಡ ರಾಕೇಶನಿಗೆ ಮನೆಗೆ ಬರಲು ಹೇಳಿದ್ದ ರಾಧಾ ಸುಭಾಷ್​ನ ಸಹಾಯದೊಂದಿಗೆ ಆತನನ್ನು ಅಂದೇ ಕೊಲೆ ಮಾಡಿದ್ದಳು. ಹಕವು ದಿನಗಳಾದರೂ ರಾಕೇಶನ ಸುಳಿವು ಇಲ್ಲದ ಕಾರಣ ಆತನ ಸೋದರ ದಿನೇಶ್ ರಾಧಾಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ. ರಾಧಾ ತನ್ನ ಅಕ್ರಮ ಸಂಬಂಧವನ್ನು ಮುಚ್ಚಿಟ್ಟುಕೊಳ್ಳಲು ನನ್ನ ಅಣ್ಣನನ್ನು ಕೊಲೆ ಮಾಡಿರುವ ಅನುಮಾನವಿದೆ ಎಂದು ದೂರು ನೀಡಿದ್ದ. ಅಲ್ಲದೆ, ರಾಧಾ ಹಾಗೂ ಸುಭಾಷ್​ ಅಕ್ರಮ ಸಂಬಂಧದ ಬಗ್ಗೆ ಸುತ್ತಮುತ್ತಲಿನ ಎಲ್ಲರಿಗೂ ಗೊತ್ತಿದೆ. ಆದರೆ, ರಾಕೇಶ್ ಇದನ್ನು ನಂಬಿರಲಿಲ್ಲ ಎಂದು ಆತ ದೂರಿನಲ್ಲಿ ತಿಳಿಸಿದ್ದ. ಆತನ ದೂರನ್ನು ಆಧರಿಸಿ ರಾಧಾಳ ವಿಚಾರಣೆ ನಡೆಸಿದ ಪೊಲೀಸರಿಗೆ ಆಕೆ ತನಗೇನೂ ಗೊತ್ತಿಲ್ಲವೆಂದೇ ಹೇಳಿದ್ದಳು. ಆದರೆ, ರಾಸಾಯನಿಕ ಸ್ಫೋಟವಾಗಿದ್ದರಿಂದ ಆಕೆಯ ಕೃತ್ಯ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: Crime News: ಅಕ್ರಮ ಸಂಬಂಧ ತಂದ ಕಂಟಕ; ಹೆಂಡತಿಯ ಪ್ರಿಯಕರನ ಗುಪ್ತಾಂಗಕ್ಕೆ ಶೂಟ್ ಮಾಡಿದ ಗಂಡ!

Murder: ಗೆಳೆಯನನ್ನೇ ಬರ್ಬರವಾಗಿ ಕೊಂದು, ರೂಮ್ ಕ್ಲೀನ್ ಮಾಡಿ ಮಲಗಿದ ಕೊಲೆಗಾರ

(Crime News: Woman Murders husband dissolves body in chemical after Having Sexual Affair with Boyfriend in Bihar)

Published On - 2:09 pm, Tue, 21 September 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್