ಟೆಕ್ಕಿಗಳಿಂದಲೇ ಟೆಕ್ಕಿ ಕಿಡ್ನ್ಯಾಪ್! ಆರೋಪಿಗಳಿಗೆ ಹಣ ನೀಡಿ ಬಂಧಿಸಿದ ಬೆಂಗಳೂರು ಪೊಲೀಸರು

ಹಣದ ವಿಚಾರಕ್ಕೆ ವಿನೀತ್ ವರ್ಧನ್ ಕಿಡ್ನ್ಯಾಪ್ ಆಗಿತ್ತು. ಎಡ್ವಿನ್ ಪ್ರಶಾಂತ್ ಮತ್ತು ಆತನ ಟೀಮ್ ವಿನೀತ್​ನ ಕಿಡ್ನ್ಯಾಪ್ ಮಾಡಿದ್ದರು. ಕಿಡ್ನ್ಯಾಪರ್ಸ್ 50 ಕಿಲೋಮೀಟರ್ ಕ್ರಮಿಸಿ ಫೋನ್ ಕರೆ ಮಾಡಿದ್ದರು.

ಟೆಕ್ಕಿಗಳಿಂದಲೇ ಟೆಕ್ಕಿ ಕಿಡ್ನ್ಯಾಪ್! ಆರೋಪಿಗಳಿಗೆ ಹಣ ನೀಡಿ ಬಂಧಿಸಿದ ಬೆಂಗಳೂರು ಪೊಲೀಸರು
ಕಿಡ್ನ್ಯಾಪ್ ಆಗಿದ್ದ ವಿನೀತ್ ವರ್ಧನ್
Follow us
TV9 Web
| Updated By: sandhya thejappa

Updated on:Sep 23, 2021 | 12:28 PM

ಬೆಂಗಳೂರು: ಹಣದ ಆಸೆಯಿಂದ ಟೆಕ್ಕಿಗಳು ಇನ್ನೊರ್ವ ಟೆಕ್ಕಿಯನ್ನು ಕಿಡ್ನ್ಯಾಪ್ (Kidnap) ಮಾಡಿದ್ದು, ಕಿಡ್ನ್ಯಾಪ್ ಆಗಿದ್ದ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಕಿಡ್ನ್ಯಾಪ್ ಆಗಿದ್ದ ಟೆಕ್ಕಿ ವಿನೀತ್ ವರ್ಧನ್ ಎಂಬುವವರನ್ನು ರಕ್ಷಣೆ ಮಾಡಲಾಗಿದೆ. ಚೆನ್ನೈನಲ್ಲಿ ಬೆಂಗಳೂರು ಪೊಲೀಸರು ವಿನೀತ್​ನ ರಕ್ಷಣೆ ಮಾಡಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಕೋರಮಂಗಲ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹಣದ ವಿಚಾರಕ್ಕೆ ವಿನೀತ್ ವರ್ಧನ್​ನ ಕಿಡ್ನ್ಯಾಪ್ ಆಗಿತ್ತು. ಎಡ್ವಿನ್ ಪ್ರಶಾಂತ್ ಮತ್ತು ಆತನ ಟೀಮ್ ವಿನೀತ್​ನ ಕಿಡ್ನ್ಯಾಪ್ ಮಾಡಿದ್ದರು. ಕಿಡ್ನ್ಯಾಪರ್ಸ್ 50 ಕಿಲೋಮೀಟರ್ ಕ್ರಮಿಸಿ ಫೋನ್ ಕರೆ ಮಾಡಿದ್ದರು. ಫೋನ್ ಕರೆ ಮಾಡಿದ ಬಳಿಕ ಸ್ವಿಚ್ ಆಫ್ ಮಾಡುತ್ತಿದ್ದರು. ಫಾಸ್ಟ್​ಟ್ಯಾಗ್​ ಮೂಲಕ ಕಿಡ್ನ್ಯಾಪರ್ಸ್ ಸುಳಿವು ಪತ್ತೆಯಾಗಿತ್ತು. ಕೋರಮಂಗಲ ಪೊಲೀಸರು ಕಾರ್ಯಚರಣೆ ನಡೆಸಿ ಎಡ್ವಿನ್ ಪ್ರಶಾಂತ್, ಸಂತೋಷ್, ಅರಿವೇಗಲನ್ ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಆರೋಪಿಗಳಿಗೆ ಹಣ ವರ್ಗಾವಣೆ ಕೃತ್ಯಕ್ಕೆ ಬಳಸಿದ್ದ ಕಾರ್ ಮಾಲೀಕನಿಂದ ಮಾಹಿತಿ ಕಲೆ ಹಾಕಲಾಗಿತ್ತು. ಕಿಡ್ನಾಪ್ ಬಳಿಕ ಕಾರು ಚೆನ್ನೈಗೆ ಹೊಗಿರುವುದು ದೃಢವಾಗಿತ್ತು. ಟೋಲ್​ನಲ್ಲಿ ಫಾಸ್ಟ್​ಟ್ಯಾಗ್​ ಆಪರೇಟ್ ಆದಾಗ, ಆ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ಬಳಿಕ, ಸಂತ್ರಸ್ತ ವಿನೀತ್ ಕಡೆಯವರ ಮೂಲಕ ಪೊಲೀಸರಿಂದ ಆರೋಪಿಗಳಿಗೆ ಹಣ ವರ್ಗಾವಣೆ ಮಾಡಲಾಯಿತು. ಹಣ ಜಮೆಯಾದ ಬಳಿಕ ಆರೋಪಿಗಳು ಕಾರ್ಡ್ ಸ್ವೈಪ್ ಮಾಡುತ್ತಿದ್ದರು. ಆಗ ಪೊಲೀಸರು ಕಾರ್ಡ್ ಸ್ವೈಪ್ ಆದ ಜಾಗದ ಮಾಹಿತಿಯನ್ನು ಪಡೆದರು.

ಜೊತೆಗೆ ಆರೋಪಿಗಳು ಪ್ರತಿ 5 ಗಂಟೆಗಳಿಗೊಮ್ಮೆ 50 ಕಿಲೋಮೀಟರ್ ವ್ಯಾಪ್ತಿಯಿಂದ ಫೋನ್ ಮಾಡುತ್ತಿದ್ದರು. ಬಳಿಕ ಫೋನ್ ಸ್ವಿಚ್ ಆಫ್ ಮಾಡುತ್ತಿದ್ದರು. ಹೀಗೆ ಪ್ರತಿ ಬಾರೀ ಯಾವ ಕಡೆಗಳಿಂದ ಕರೆ ಬರುತ್ತಿದೆ ಎಂದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದರು. ಹೊಟೆಲ್​ನಲ್ಲಿ ಇದ್ದುಕೊಂಡು ಕರೆ ಮಾಡಲು 50 ಕಿಲೋಮೀಟರ್ ದೂರ ಹೋಗುತ್ತಿರುವುದು ಬೆಳಕಿಗೆ ಬಂತು.

ಆಗಸ್ಟ್ 25ಕ್ಕೆ 5 ಕೋಟಿ ಹಣ ವಿನೀತ್ ಕೈ ಸೇರಬೇಕಿತ್ತು. ಈ ವಿಷಯ ತಿಳಿದ ಆರೋಪಿಗಳು ವಿನೀತ್ ಕಿಡ್ನ್ಯಾಪ್​ಗೆ ಸ್ಕೆಚ್ ಹಾಕಿದ್ದರು. ಪಾರ್ಟಿ ಮಾಡುವ ನೆಪದಲ್ಲಿ ವಿನೀತ್​ನ ಕಿಡ್ನಾಪ್ ಮಾಡಿದ್ದಾರೆ. ಬೆಂಗಳೂರಿನಿಂದ ನೇರವಾಗಿ ತಮಿಳುನಾಡಿಗೆ ಶಿಫ್ಟ್ ಮಾಡಿದ್ದಾರೆ. ಆಗಸ್ಟ್ 25ರೊಳಗೆ ವಿನಿತ್​ಗೆ ಹಣ ಬರತ್ತೆ. ಅಲ್ಲಿಯವರಗೆ ವಿನೀತ್​ನ ಇಟ್ಟುಕೊಳ್ಳುಣ ಅಂತ ಆರೋಪಿಗಳು ಯೋಚಿಸಿದ್ದರು.

ಠಾಣೆಯಲ್ಲಿ ಇರುವಾಗಲೇ ಬೆದರಿಕೆ ಕರೆ ಪಾರ್ಟಿ ಮಾಡೋಣ ಅಂತ ಹೇಳಿ, ಎಣ್ಣೆ ಸಮೇತ ವಿನೀತ್ ಮನೆ ಬಳಿ ಆರೋಪಿಗಳು ಬಂದಿದ್ದರು. ನಂತರ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಎಲೆಕ್ಟ್ರಾನಿಕ್ ಸಿಟಿ ಟೋಲ್ ದಾಟಿದಾಗ ಅನುಮಾನಗೊಂಡ ವಿನೀತ್ ವರ್ಧನ್, ಎಲ್ಲಿಗೆ ಹೋಗುತ್ತಿರುವುದು ಅಂತ ಕೇಳಿದಾಗ ಬಾಯಿಗೆ ಬಟ್ಟೆ ಸುತ್ತಿದ್ದಾರೆ. ಎರಡು ದಿನವಾದರೂ ವಿನೀತ್ ಮನೆಗೆ ಬರದಿದ್ದಾಗ ಕುಟುಂಬಸ್ಥರು ಕೋರಮಂಗಲ ಠಾಣೆಗೆ ದೂರು ನೀಡಿದರು. ಕುಟುಂಬಸ್ಥರು ಠಾಣೆಯಲ್ಲಿ ಇರುವಾಗಲೇ 2 ಕೋಟಿ ಕೊಟ್ಟರೆ ಬಿಡುತ್ತೇವೆ ಎಂದು ಆರೋಪಿಗಳು ಬೆದರಿಕೆ ಕರೆ ಹಾಕಿದ್ದರು.

ಆರೋಪಿಗಳು ಕುಟುಂಬಸ್ಥರಿಗೆ ವಾಟ್ಸಾಪ್ ಕಾಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಎರಡು ದಿನಕ್ಕೆ ಒಂದೊಂದು ಕಾಲ್ ಮಾಡಿ ಹಣ ನೀಡುವಂತೆ ಹೇಳಿದ್ದರು. ದೂರು ದಾಖಲಾಗಿರುವ ವಿಚಾರ ಆರೋಪಿಗಳಿಗೆ ತಿಳಿಯುತ್ತಿದ್ದಂತೆ ವಿನೀತ್​ನ ಕೊಲೆ ಮಾಡಿ, ನಾವು ಸಾಯುತ್ತೇವೆ ಅಂದಿದ್ದರು. ಎರಡು ದಿನದಲ್ಲಿ ಹಣ ಕೊಡಲಿಲ್ಲ ಅಂದರೆ ನಾವು ಸಾಯುತ್ತೀವಿ, ಅವನನ್ನು ಸಾಯಿಸುತ್ತೇವೆ ಅಂತ ಹೇಳಿದ್ದರು. ತಕ್ಷಣವೇ ಪೊಲೀಸರ ಎರಡು ತಂಡಗಳು ತಮಿಳುನಾಡಿನತ್ತ ಪ್ರಯಾಣ ಬೇಳೆಸಿತು.

ಮರುದಿನ ಕಾಲ್ ಮಾಡುವಷ್ಟರಲ್ಲಿ ಪೊಲೀಸರ ತಂಡ ಹೋಟೆಲ್​ನ ಸುತ್ತವರಿದಿತ್ತು. ಸಿನಿಮೀಯ ಶೈಲಿಯಲ್ಲಿ ಪೊಲೀಸರು ಆರೋಪಿಗಳನ್ನ ಬಂಧಿಸಿದರು. ಆರೋಪಿಗಳಿಗೆ ತಮಿಳುನಾಡಿನಲ್ಲಿ ಸಹಾಯ ಮಾಡಿದ್ದವರಿಗಾಗಿ ಹುಡುಕಾಟ ಮಡೆಯುತ್ತಿದೆ. ಟೋಲ್ ಪಾಸ್ ಆಗುವ, ಕಿಡ್ನಾಪರ್ಸ್ ಟೆಕ್ಕಿ ಇರುವ ಜಾಗಕ್ಕೆ ಬರುವ ಎಲ್ಲಾ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ

ಭಾರಿ ಮುಖಭಂಗ ತಪ್ಪಿಸಿಕೊಂಡ ಮೈಸೂರು ವಿಶ್ವವಿದ್ಯಾಲಯ: ನ್ಯಾಕ್ ಪರೀಕ್ಷೆಯಲ್ಲಿ ಜಸ್ಟ್ ಪಾಸ್, ಕಾರಣ ಏನು?

ಸರ್ಕಾರಿ ಉರ್ದು ಶಾಲೆ ಪ್ರಾರ್ಥನಾ ಮಂದಿರವಾಗಿ ಬದಲಾವಣೆ; ಧಾರ್ಮಿಕ ಮುಖಂಡರ ಅತಿಕ್ರಮಣಕ್ಕೆ ಸಾಥ್ ಕೊಟ್ತಾ ಗ್ರಾಮ ಪಂಚಾಯಿತಿ?

(Tekkis kidnap another Tekki in Bengaluru Police have protected the man in cinematic style)

Published On - 11:57 am, Thu, 23 September 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?