ಭಾರಿ ಮುಖಭಂಗ ತಪ್ಪಿಸಿಕೊಂಡ ಮೈಸೂರು ವಿಶ್ವವಿದ್ಯಾಲಯ: ನ್ಯಾಕ್ ಪರೀಕ್ಷೆಯಲ್ಲಿ ಜಸ್ಟ್ ಪಾಸ್, ಕಾರಣ ಏನು?
ಮೈಸೂರು ವಿವಿ ಕಳೆದ ಬಾರಿ 3.47 ಅಂಕ ಪಡೆದುಕೊಂಡಿತ್ತು. ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ನಿಗದಿತ ಟಾರ್ಗೆಟ್ ಮುಟ್ಟುವಲ್ಲಿ ವಿಫಲಗೊಂಡಿದೆ. 2007 ರಿಂದಲೂ ಮೈಸೂರು ವಿವಿಗೆ ಖಾಯಂ ಸಿಬ್ಬಂದಿಗಳ ನೇಮಕಾತಿ ನಡೆದಿಲ್ಲ. ಪರಿಣಾಮ ಯುಜಿಸಿ ನಿಗದಿ ಪಡಿಸಿದ ಗೈಡ್ ಲೈನ್ ಗಳ ಗುರಿಮುಟ್ಟುವಲ್ಲಿ ವಿವಿ ವಿಫಲಗೊಂಡಿದೆ.
ಮೈಸೂರು: ದಿನೇದಿನೆ ತನ್ನ ಮೌಲ್ಯ ಕಳೆದುಕೊಳ್ಳುತ್ತಿರುವ ಮೈಸೂರು ವಿಶ್ವವಿದ್ಯಾಲಯವು ನ್ಯಾಕ್ ನಡೆಸಿದ ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಆಗಿದೆ. ನ್ಯಾಕ್ ಮಾನ್ಯತೆಯಲ್ಲಿ ಮೈಸೂರು ವಿವಿಗೆ A ಗ್ರೇಡ್ ಲಭಿಸಿದ್ದು, 0.01 ಅಂಕದಿಂದ ಭಾರಿ ಮುಖಭಂಗ ತಪ್ಪಿಸಿಕೊಂಡಿದೆ. ಯುಜಿಸಿ ನಿಗದಿಪಡಿಸಿದ ಗೈಡ್ಲೈನ್ಸ್ ಗುರಿಮುಟ್ಟುವಲ್ಲಿ ವಿಫಲವಾಗಿದ್ದು, ಇದು ನ್ಯಾಕ್ ಮಾನ್ಯತೆ ಮೇಲೆ ನೇರ ಪರಿಣಾಮ ಬೀರಿದೆ
ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್‌ನ 4ನೇ ಆವೃತ್ತಿಯಲ್ಲಿ ‘ಎ’ ಗ್ರೇಡ್: ಕಳೆದ ಸಾಲಿಗಿಂತ 0.46 ಅಂಕ ಕಡಿಮೆ ಗಳಿಸಿದೆ ಮೈಸೂರು ವಿವಿ. ನೇಮಕಾತಿ ನಡೆಯದಿರುವುದೇ ಹಿನ್ನಡೆಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಕಳೆದ 12 ವರ್ಷದಿಂದ ಮೈಸೂರು ವಿವಿಯಲ್ಲಿ ನೇಮಕಾತಿ ಮಾಡಿಕೊಂಡಿಲ್ಲ. 2007ರಿಂದ ಮೈಸೂರು ವಿವಿಗೆ ಕಾಯಂ ಸಿಬ್ಬಂದಿ ನೇಮಕವಾಗಿಲ್ಲ. ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್‌ನ (ನ್ಯಾಕ್) 4ನೇ ಆವೃತ್ತಿಯಲ್ಲಿ ‘ಎ’ ಗ್ರೇಡ್ ಸಿಕ್ಕಿದೆ.
ಸೆಪ್ಟಂಬರ್ 15 ರಂದು 7 ಜನರ ನ್ಯಾಕ್ ತಂಡ (National Assessment and Accreditation Council -NAAC)) ಮೈಸೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿತ್ತು. 2014 ರಿಂದ 2019 ರವರೆಗೆ ನೀಡಿದ ಡೇಟಾವನ್ನೇ ನ್ಯಾಕ್ ಕಮಿಟಿ ಪರಿಗಣಿಸಿತ್ತು. ಒಟ್ಟು ಸಾವಿರ ಅಂಕದಲ್ಲಿ 700 ಅಂಕ ವಿವಿ ಸಲ್ಲಿಸಿದ ಡೇಟಾಗಳಿಗೂ ಹಾಗೂ 300 ಅಂಕಗಳು ನ್ಯಾಕ್ ತಂಡದ ಪರಿಶೀಲನೆ ಬಳಿಕ ನೀಡಬೇಕಾಗಿತ್ತು. ಇದರಲ್ಲಿ ಮೈಸೂರು ವಿವಿಗೆ 3.01 ಅಂಕಗಳು ಅಂದ್ರೆ ಶೇ. 75.05 ರಷ್ಟು ಅಂಕ ಪಡೆದು A ಗ್ರೇಡ್ ಪ್ರಾಪ್ತಿಯಾಗಿದೆ. ಇನ್ನು 0.1 ಅಂಕ ಕಡಿಮೆ ಆಗಿದ್ದರೂ B++ ಗ್ರೇಡ್‌ಗೆ ಕುಸಿದುಬಿಡುತ್ತಿದ್ದ ಆತಂಕವೂ ಇತ್ತು.
ಆದರೆ ಕಳೆದ ಬಾರಿ 3.47 ಅಂಕ ಪಡೆದುಕೊಂಡಿದ್ದ ವಿವಿ: ಮೈಸೂರು ವಿವಿ ಕಳೆದ ಬಾರಿ 3.47 ಅಂಕ ಪಡೆದುಕೊಂಡಿತ್ತು. ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ನಿಗದಿತ ಟಾರ್ಗೆಟ್ ಮುಟ್ಟುವಲ್ಲಿ ವಿಫಲಗೊಂಡಿದೆ. 2007 ರಿಂದಲೂ ಮೈಸೂರು ವಿವಿಗೆ ಖಾಯಂ ಸಿಬ್ಬಂದಿಗಳ ನೇಮಕಾತಿ ನಡೆದಿಲ್ಲ. ಪರಿಣಾಮ ಯುಜಿಸಿ ನಿಗದಿ ಪಡಿಸಿದ ಗೈಡ್ ಲೈನ್ ಗಳ ಗುರಿಮುಟ್ಟುವಲ್ಲಿ ವಿವಿ ವಿಫಲಗೊಂಡಿದೆ. ಇದು ನ್ಯಾಕ್ ಮಾನ್ಯತೆ ಮೇಲೆ ನೇರ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ.
Also Read: ಮೈಸೂರು ವಿವಿ 101ನೇ ಘಟಿಕೋತ್ಸವ; ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಚೈತ್ರಾ ಹೆಗಡೆ 20 ಚಿನ್ನದ ಪದಕಗಳ ಸಾಧನೆ
Also Read: ವರನಟ ಡಾ. ರಾಜ್ಕುಮಾರ್ಗೆ ಮೊದಲು ಗೌರವ ಡಾಕ್ಟರೇಟ್ ನೀಡಿ 45 ವರ್ಷ ಪೂರ್ಣ: ಇದು ಮೈಸೂರು ವಿಶ್ವವಿದ್ಯಾಲಯದ ಗೌರವ
(fail to recruitment since 12 years mysore university just pass in naac exam)
Published On - 11:49 am, Thu, 23 September 21