ಹಾಲು, ತಿಂಡಿಯ ಜೊತೆ ಆಲ್ಕೋ ಹಾಲ್ ಮಾರಾಟ; ಮದ್ಯ ಮಾರಾಟ ಮಾಡುತ್ತಿದ್ದವನಿಗೆ ತರಾಟೆಗೆ ತೆಗೆದುಕೊಂಡ ಮಹಿಳೆಯರು
ಹಾಡಿಗೆ ಟಿವಿಎಸ್ ಮೊಫೆಡ್ನಲ್ಲಿ ಮಾರಾಟ ಮಾಡಲು ಬಂದಿದ್ದ ವ್ಯಕ್ತಿ ಹಾಲಿನ ಪ್ಯಾಕೇಟ್, ಮಕ್ಕಳು ತಿನ್ನುವ ತಿಂಡಿಯ ಜೊತೆ ಮದ್ಯ ಮಾರಾಟ ಕೂಡ ಮಾಡುತ್ತಿದ್ದ. ಇದನ್ನು ಗಮನಿಸಿದ ಮಹಿಳೆಯರು ಮದ್ಯ ಮಾರಾಟ ಮಾಡುತ್ತಿದ್ದವನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೈಸೂರು: ಹಾಲು, ತಿಂಡಿಯ ಜೊತೆ ಮದ್ಯ ಮಾರಾಟ ಹಿನ್ನೆಲೆ ಮದ್ಯ ಮಾರಾಟ ಮಾಡುತ್ತಿದ್ದವನಿಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬಸವನಗಿರಿ ಹಾಡಿಯಲ್ಲಿ ನಡೆದಿದೆ.
ಹಾಡಿಗೆ ಟಿವಿಎಸ್ ಮೊಫೆಡ್ನಲ್ಲಿ ಮಾರಾಟ ಮಾಡಲು ಬಂದಿದ್ದ ವ್ಯಕ್ತಿ ಹಾಲಿನ ಪ್ಯಾಕೇಟ್, ಮಕ್ಕಳು ತಿನ್ನುವ ತಿಂಡಿಯ ಜೊತೆ ಮದ್ಯ ಮಾರಾಟ ಕೂಡ ಮಾಡುತ್ತಿದ್ದ. ಇದನ್ನು ಗಮನಿಸಿದ ಮಹಿಳೆಯರು ಮದ್ಯ ಮಾರಾಟ ಮಾಡುತ್ತಿದ್ದವನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೆ ಹಾಡಿಯತ್ತ ಬರದಂತೆ ವಾರ್ನಿಂಗ್ ಕೊಟ್ಟಿದ್ದಾರೆ. ಬಸವನಗಿರಿ ಹಾಡಿಯಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ದಂಧೆ ನಡೆಯುತ್ತಿದೆ. ಅಕ್ರಮ ಮದ್ಯ ಮಾರಾಟದ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಗ್ರಾಮದ ಮಹಿಳೆಯರೇ ಮದ್ಯ ಮಾರುತ್ತಿದ್ದವನಿಗೆ ಬೈದು ಕಳಿಸಿದ್ದಾರೆ.
ಇಡೀ ದಿನ ಕೂಲಿ ಮಾಡಿ ಗಳಿಸಿದ ಹಣ ಮದ್ಯಕ್ಕೆ ಹಾಕುತ್ತಾರೆ. ಮನೆಯಲ್ಲಿ ಹೆಂಡತಿ ಮಕ್ಕಳು ಉಪವಾಸವಿದ್ದರೂ ಮದ್ಯಕ್ಕೆ ಹಣ ಬೇಕೇ ಬೇಕು. ಅಬಕಾರಿ ಇಲಾಖೆ ದೂರು ನೀಡಿದರೂ ಉಪಯೋಗ ಇಲ್ಲ ಎಂದು ಹಾಡಿ ಮಹಿಳೆಯರು ಆರೋಪಿಸಿದ್ದಾರೆ.
ಇದನ್ನೂ ಓದಿ: Batter: ಇನ್ಮುಂದೆ ಕ್ರಿಕೆಟ್ನಲ್ಲಿ ‘ಬ್ಯಾಟ್ಸ್ಮನ್’ ಎನ್ನುವಂತಿಲ್ಲ: ಲಿಂಗ ಸಮಾನತೆಗಾಗಿ ‘ಬ್ಯಾಟರ್’ ಪದ ಬಳಕೆಗೆ ಆದೇಶ
ರಾಜ್ಯದಲ್ಲಿ ಇನ್ಮುಂದೆ ಭಾನುವಾರ ಕೊರೊನಾ ಲಸಿಕೆ ಸಿಗಲ್ಲ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಭಾನುವಾರ ರಜೆ ದಿನ