ರಾಜ್ಯದಲ್ಲಿ ಇನ್ಮುಂದೆ ಭಾನುವಾರ ಕೊರೊನಾ ಲಸಿಕೆ ಸಿಗಲ್ಲ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಭಾನುವಾರ ರಜೆ ದಿನ
ಯಾವುದೇ ರಜೆ ಇಲ್ಲದೇ, ನಿರಂತರವಾಗಿ ಆರೋಗ್ಯ ಸಿಬ್ಬಂದಿ ಕೆಲಸ ಮಾಡ್ತಾ ಇದ್ದರು. ಹೀಗಾಗಿ ಹೀಗಾಗಿ ರಾಜ್ಯದಲ್ಲಿ ಆರೋಗ್ಯ ಸಿಬ್ಬಂದಿಗೆ ಭಾನುವಾರ ರಜೆ ನೀಡಲು ಇಲಾಖೆ ಚಿಂತಿಸಿದ್ದು ರಾಜ್ಯದಲ್ಲಿ ಇನ್ಮುಂದೆ ಭಾನುವಾರ ಕೊರೊನಾ ಲಸಿಕೆ ಹಾಕದಿರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ಭಾನುವಾರ ಕೊರೊನಾ ಲಸಿಕೆ ಹಾಕದಿರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ. ಇಡೀ ದೇಶವನ್ನು ಕೊರೊನಾ ಮುಕ್ತ ಮಾಡಲು ಮಕ್ಕಳು ಹೊರೆತು ಪಡಿಸಿ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆಯನ್ನು ಹಾಕಲಾಗುತ್ತಿತ್ತು. ವಾರದ 7 ದಿನವೂ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿತ್ತು. ಆದ್ರೆ ಈಗ ಭಾನುವಾರ ಕೊರೊನಾ ಲಸಿಕೆ ಹಾಕದಿರಲು ಆರೋಗ್ಯ ಇಲಾಖೆ ಮುಂದಾಗಿದೆ.
ಯಾವುದೇ ರಜೆ ಇಲ್ಲದೇ, ನಿರಂತರವಾಗಿ ಆರೋಗ್ಯ ಸಿಬ್ಬಂದಿ ಕೆಲಸ ಮಾಡ್ತಾ ಇದ್ದರು. ಹೀಗಾಗಿ ಹೀಗಾಗಿ ರಾಜ್ಯದಲ್ಲಿ ಆರೋಗ್ಯ ಸಿಬ್ಬಂದಿಗೆ ಭಾನುವಾರ ರಜೆ ನೀಡಲು ಇಲಾಖೆ ಚಿಂತಿಸಿದ್ದು ರಾಜ್ಯದಲ್ಲಿ ಇನ್ಮುಂದೆ ಭಾನುವಾರ ಕೊರೊನಾ ಲಸಿಕೆ ಹಾಕದಿರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ಭಾನುವಾರ ಹೊರತುಪಡಿಸಿ ಉಳಿದ 6 ದಿನ ಲಸಿಕೆ ನೀಡಲಾಗುತ್ತೆ. ಇನ್ಮುಂದೆ ಭಾನುವಾರ ಕೊರೊನಾ ಲಸಿಕೆ ಸಿಗಲ್ಲ ಎಂದು ಇಲಾಖೆ ತಿಳಿಸಿದೆ.
ವ್ಯಾಕ್ಸಿನ್ ಪಡೆಯದವರೇ ಮೂರನೇ ಅಲೆ ಟಾರ್ಗಟ್ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಲಸಿಕೆ ಪಡೆಯದವರ ಬಗ್ಗೆ ಶಾಂಕಿಂಗ್ ನ್ಯೂಸ್ ಹೊರಹಾಕುತ್ತಿದೆ. ಲಸಿಕೆ ಪಡೆಯದವರಿಗೆ ಮೂರನೇ ಅಲೆ ಎಫೆಕ್ಟ್ ಮಾಡಲಿದೆಯಂತೆ. ವ್ಯಾಕ್ಸಿನ್ ಪಡೆದವರಿಗೆ ಕೊರೊನಾ ಸೋಂಕಿನಿಂದ ಅಪಾಯ ಕಡಿಮೆ. ಆದ್ರೆ ವ್ಯಾಕ್ಸಿನ್ ಪಡೆಯದವರಿಗೆ ಹೆಚ್ಚು ಸೋಂಕು ತಗಲುತಿದ್ದು ಹೆಚ್ಚು ಸಾವಿಗಿಡಾಗುತ್ತಿದ್ದಾರೆ. ವ್ಯಾಕ್ಸಿನ್ ಪಡೆಯದವರೇ ಹೆಚ್ಚು ಐಸಿಯು ಬೆಡ್ಗಳಿಗೆ ಹೋಗ್ತಾ ಇದ್ದಾರೆ.
ಕಳೆದ 14 ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ವ್ಯಾಕ್ಸಿನ್ ಪಡೆದವರಿಗೆ ಶೇ 20% ರಷ್ಟು ಸೋಂಕು ಕಾಣಿಸಿಕೊಂಡ್ರೆ, ವ್ಯಾಕ್ಸಿನ್ ಪಡೆಯದವರಲ್ಲಿ ಶೇ 80% ರಷ್ಟು ಸೋಂಕು ಕಾಣಿಸಿಕೊಂಡಿದೆ. ಇನ್ನು ಸಾವಿನ ಸಂಖ್ಯೆಯಲ್ಲಿಯೂ ವ್ಯಾಕ್ಸಿನ್ ಪಡೆದವರು ಶೇ% 15-20 ರಷ್ಟು ತುತ್ತಾಗುತ್ತಿದ್ರೆ. ಶೇ 80-85% ವ್ಯಾಕ್ಸಿನ್ ಪಡೆಯದವರೇ ಕೊರೊನಾಕ್ಕೆ ಬಲಿಯಾಗ್ತಾ ಇದ್ದಾರೆ. ವ್ಯಾಕ್ಸಿನ್ ಪಡೆಯದವರಿಗೆ ಕೊರೊನಾ ಗಂಭೀರ ಸಮಸ್ಯೆಯಾಗುತ್ತಿದ್ದು ಶೇ 80-85 % ರಷ್ಟು ICU ಬೆಡ್ ಅಗ್ಯತೆತೆ ಎದುರಾಗಿದೆ. ಶೇ 20 ರಷ್ಟು ವ್ಯಾಕ್ಸಿನ್ ಪಡೆದವರಿಗೆ ಐಸಿಯು ಬೆಡ್ ಅಗತ್ಯತೆ ಕೇಳಿ ಬಂದಿದೆ. ಹೀಗಾಗಿ ವ್ಯಾಕ್ಸಿನ್ ಪಡೆಯದವರೆ ಮೂರನೇ ಅಲೆಯ ಪ್ರೈಮ್ ಟಾರ್ಗೆಟ್ ಎನ್ನಲಾಗುತ್ತಿದೆ.
ಇದನ್ನೂ ಓದಿ: 5 ಡೋಸ್ ಕೊರೊನಾ ಲಸಿಕೆ ಪಡೆದ ಬಿಜೆಪಿ ನಾಯಕ !-ಸರ್ಟಿಫಿಕೇಟ್ ಡೌನ್ಲೋಡ್ ಮಾಡಿದಾಗ ಬೆಳಕಿಗೆ ಬಂತು ಪ್ರಮಾದ