5 ಡೋಸ್ ಕೊರೊನಾ ಲಸಿಕೆ ಪಡೆದ ಬಿಜೆಪಿ ನಾಯಕ !-ಸರ್ಟಿಫಿಕೇಟ್ ಡೌನ್ಲೋಡ್ ಮಾಡಿದಾಗ ಬೆಳಕಿಗೆ ಬಂತು ಪ್ರಮಾದ
ಸರ್ಟಿಫಿಕೇಟ್ ನೋಡಿ ರಾಮಪಾಲ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾನು ಪಡೆದಿದ್ದು ಎರಡೇ ಡೋಸ್. ಹಾಗಿರುವಾಗ 5 ಡೋಸ್ ಎಂದು ಹೇಗೆಬಂತು ಎಂದು ಪ್ರಶ್ನಿಸಿದ್ದಾರೆ.
ಮೀರತ್: ಉತ್ತರ ಪ್ರದೇಶದ ಬಿಜೆಪಿ ನಾಯಕರೊಬ್ಬರು ಕೊರೊನಾ ಲಸಿಕೆ (Covid 19 Vaccine Certificate) ಪಡೆದು ಸರ್ಟಿಫಿಕೇಟ್ ಡೌನ್ ಲೋಡ್ ಮಾಡಿಕೊಂಡರೆ ಅಲ್ಲೊಂದು ವಿಚಿತ್ರ ಸಂಗತಿ ಬಯಲಾಗಿದೆ. ರಾಮಪಾಲ್ ಸಿಂಗ್ (73) ಎಂಬುವರು ಕೊರೊನಾ ಲಸಿಕೆ ಪಡೆದು ಸರ್ಟಿಫಿಕೇಟ್ ಡೌನ್ ಲೋಡ್ ಮಾಡಿಕೊಂಡಿದ್ದರು. ಅದರಲ್ಲಿ ಕೊರೊನಾ ಲಸಿಕೆ 5 ಡೋಸ್ ಪಡೆಯಲಾಗಿದೆ ಎಂದು ಉಲ್ಲೇಖವಾಗಿದ್ದು, ಆರನೇ ಲಸಿಕೆಗೆ ದಿನಾಂಕವನ್ನೂ ತಿಳಿಸಲಾಗಿದೆ. ಇದನ್ನು ನೋಡಿ ಸ್ವತಃ ರಾಮಪಾಲ್ ಸಿಂಗ್ ಕಂಗಾಲಾಗಿದ್ದಾರೆ.
ರಾಮಪಾಲ್ ಸಿಂಗ್ ಅವರು ಮೀರತ್ನ ಸರ್ಧನ ಪ್ರದೇಶದ ಬೂತ್ ನಂ.79ರ ಬಿಜೆಪಿ ಅಧ್ಯಕ್ಷರು. ಹಿಂದು ಯುವ ವಾಹಿನಿಯ ಸದಸ್ಯರೂ ಹೌದು. ಅವರು ಕೊರೊನಾ ಲಸಿಕೆ ಎರಡೂ ಡೋಸ್ ಲಸಿಕೆಯನ್ನು ಪಡೆದು, ಅದರ ಸರ್ಟಿಫಿಕೇಟ್ ಡೌನ್ಲೋಡ್ ಮಾಡಿಕೊಂಡಿದ್ದರು. ಆದರೆ ಆ ಸರ್ಟಿಫಿಕೇಟ್ನಲ್ಲಿ, ರಾಮಪಾಲ್ 5 ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ ಎಂದು ಉಲ್ಲೇಖವಾಗಿದೆ. ಆರನೇ ಲಸಿಕೆ ಪಡೆಯುವ ದಿನಾಂಕವನ್ನೂ ತಿಳಿಸಿದ್ದಾರೆ.
ಅದನ್ನು ನೋಡಿ ರಾಮಪಾಲ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾನು ಪಡೆದಿದ್ದು ಎರಡೇ ಡೋಸ್. ಹಾಗಿರುವಾಗ 5 ಡೋಸ್ ಎಂದು ಹೇಗೆಬಂತು ಎಂದು ಪ್ರಶ್ನಿಸಿದ್ದಾರೆ. ಇದೀಗ ಈ ಬಗ್ಗೆ ತನಿಖೆಯೂ ನಡೆಯುತ್ತಿದೆ. ಅಂದಹಾಗೆ ರಾಮಪಾಲ್ ತಮ್ಮ ಮೊದಲ ಡೋಸ್ನ್ನು ಮಾರ್ಚ್ 16ರಂದು, ಎರಡನೇ ಡೋಸ್ನ್ನು ಮೇ 8ರಂದು ಪಡೆದಿದ್ದರು. ಆದರೆ ಸರ್ಟಿಫಿಕೇಟ್ನಲ್ಲಿ ಆರನೇ ಡೋಸ್ ಲಸಿಕೆಯನ್ನು 2021ರ ಡಿಸೆಂಬರ್ನಿಂದ ಜನವರಿ 2022ರೊಳಗೆ ಪಡೆಯಬೇಕು ಎಂದು ಉಲ್ಲೇಖಿಸಲಾಗಿದೆ ಮತ್ತು ರಾಮಪಾಲ್ ಅವರು ಮೊದಲ ಡೋಸ್ನ್ನು ಮಾರ್ಚ್ 16, ಎರಡನೇ ಡೋಸ್ನ್ನು ಮೇ 8, ಮೂರನೇ ಡೋಸ್ ಮೇ 15 ಮತ್ತು 4-5ನೇ ಡೋಸ್ನ್ನು ಸೆಪ್ಟೆಂಬರ್ 15ರಂದು ಪಡೆದಿದ್ದಾರೆ ಎಂದೂ ತೋರಿಸಲಾಗಿದೆ.
ಇದನ್ನೂ ಓದಿ: Statue of Equality: ದಿವ್ಯ ಸಾಕೇತಂ ಆಶ್ರಮದಲ್ಲಿ ತ್ರಿದಂಡಿ ಚಿನ್ನಜೀಯರ್ ಶ್ರೀಗಳ ಸುದ್ದಿಗೋಷ್ಠಿ
ವೈರಲ್ ಆಯ್ತು ಚೀಸ್ ಜತೆಗೆ ಮ್ಯಾಂಗೋ ಐಸ್ಕ್ರೀಮ್ ಚಾಟ್; ಇದ್ಯಾವ್ದಪ್ಪಾ ಹೊಸ ರೆಸಿಪಿ ಎಂದ ನೆಟ್ಟಿಗರು
(Uttar Pradesh BJP leader given 5 doses of Covid 19 vaccine shows Certificate)