ವೈರಲ್ ಆಯ್ತು ಚೀಸ್​ ಜತೆಗೆ ಮ್ಯಾಂಗೋ ಐಸ್ಕ್ರೀಮ್ ಚಾಟ್; ಇದ್ಯಾವ್ದಪ್ಪಾ ಹೊಸ ರೆಸಿಪಿ ಎಂದ ನೆಟ್ಟಿಗರು

ಇದೀಗ ವೈರಲ್​ ಆದ ಹೊಸ ರೆಸಿಪಿ ಮ್ಯಾಂಗೋ ಡಾಲಿ ಐಸ್ಕ್ರೀಮ್​ ಚಾಟ್​ ಹೆಸರು ಕೇಳಿ ಕೆಲವರು ಮ್ಯಾಂಗೋ ಐಸ್ಕ್ರೀಮ್ ಜತೆ ಚೀಸ್ ಬೆರೆಸುವಾದಾ? ಎಂದು ಮೂಗು ಮುರಿದಿದ್ದಾರೆ. ಇನ್ನು ಕೆಲವರು ಹೊಸ ವಿಧಾನವನ್ನು ಒಮ್ಮೆ ಪ್ರಯತ್ನಿಸಿ ರುಚಿ ಹೇಗಿರುತ್ತೆ ಅಂತ ನೋಡ್ಬೇಕು ಎಂದು ಹೇಳಿದ್ದಾರೆ.

ವೈರಲ್ ಆಯ್ತು ಚೀಸ್​ ಜತೆಗೆ ಮ್ಯಾಂಗೋ ಐಸ್ಕ್ರೀಮ್ ಚಾಟ್; ಇದ್ಯಾವ್ದಪ್ಪಾ ಹೊಸ ರೆಸಿಪಿ ಎಂದ ನೆಟ್ಟಿಗರು

ಐಸ್ಕ್ರೀಮ್​ ವಡಾಪಾವ್​ನಿಂದ ಮ್ಯಾಗಿ ಮಿಲ್ಕ್ ಶೇಕ್, ಗುಲಾಮ್ ಜಾಮೂನ್ ಪಿಜ್ಜಾ, ಚಾಕಲೇಟ್ ಬಿರಿಯಾನಿ ಹೆಸರುಗಳೆಲ್ಲಾ ಇತ್ತೀಚೆಗೆ ಟ್ರೆಂಡ್ ಆಗಿಬಿಟ್ಟಿದೆ. ವಿಶಿಷ್ಟ ಖಾದ್ಯಗಳ ಹೆಸರುಗಳು ಜತೆಗೆ ಮಾಡುವ ವಿಧಾನ ಕೂಡಾ ಆನ್​ಲೈನ್​ನಲ್ಲಿ ಭಾರೀ ಸುದ್ದಿಯಲ್ಲಿದೆ. ಕೆಲವರು ಹೊಸ ಹೊಸ ರೆಸಿಪಿಯನ್ನು ಸವಿಯಲು ಕಾಯುತ್ತಿದ್ದರೆ, ಇನ್ನು ಕೆಲವರು ಇದೆನಪ್ಪಾ ಹೀಗೆದೆ ಎಂದು ಮೂಗು ಮುರಿಯುತ್ತಿದ್ದಾರೆ. ಇತ್ತೀಚೆಗೆ ಮತ್ತೊಮದು ಹೊಸ ರೆಸಿಪಿ ವೈರಲ್​ ಆಗಿದೆ. ಅದೇ ಮ್ಯಾಂಗೋ ಡಾಲಿ ಐಸ್ಕ್ರೀಮ್ ಚಾಟ್​.

ಗುಜರಾತ್​ನ ಬೀದಿ ಆಹಾರ ಅಂಗಡಿಯಿಂದ ಜನಪ್ರಿಯ ಐಸ್ಕ್ರೀಮ್​ಗಳಲ್ಲಿ ಇತ್ತೀಚೆಗೆ ತಯಾರಿಸಲಾದ ಮ್ಯಾಂಗೋ ಡಾಲಿ ಐಸ್ಕ್ರೀಮ್​ ಚಾಟ್​ಅನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಆದ್ರೆ ನೆಟ್ಟಿಗರು ಈ ಕುರಿತಂತೆ ಅಷ್ಟಾಗಿ ಆಸಕ್ತಿ ತೋರಿಸಿಲ್ಲ. ಕೆಲವರು ಮ್ಯಾಂಗೋ ಐಸ್ಕ್ರೀಮ್ ಜತೆ ಚೀಸ್ ಬೆರೆಸುವಾದಾ? ಎಂದು ಮೂಗು ಮುರಿದಿದ್ದಾರೆ. ಇನ್ನು ಕೆಲವರು ಹೊಸ ವಿಧಾನವನ್ನು ಒಮ್ಮೆ ಪ್ರಯತ್ನಿಸಿ ರುಚಿ ಹೇಗಿರುತ್ತೆ ಅಂತ ನೋಡ್ಬೇಕು ಎಂದು ಹೇಳಿದ್ದಾರೆ.

ಈ ವಿಡಿಯೋವನ್ನು ಸ್ಟ್ರೀಟ್ ಫುಡ್ ಎಂಬ ಖಾತೆಯಿಂದ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಇತ್ತೀಚಿನ ವಿಡಿಯೋದಲ್ಲಿ ಮಾವಿನ ಮ್ಯಾಂಗೋ ಡಾಲಿ ಐಸ್ಕ್ರೀಮ್ ಚೀಸ್ ಮಾಡುವ ವಿಡಿಯೋ ವೈರಲ್ ಆಗಿದೆ. ಈ ಹೊಸ ರೆಸಿಪಿಯನ್ನು ಅಂಗಡಿಯವನು ಹೇಗೆ ತಯಾರಿಸುತ್ತಿದ್ದಾನೆ ಎಂಬುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದ್ದು 27,500 ಕ್ಕೂ ಹೆಚ್ಚಿನ ವಕ್ಷಣೆಗಳನ್ನು ಗಳಿಸಿಕೊಂಡಿದೆ. ನಂತರ ಇತರ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಸ್ ವಿಭಾಗದಲ್ಲಿ ಹಂಚಿಕೊಂಡಿದ್ದು, ಚೀಸ್​ನೊಂದಿಗೆ ಐಸ್ಕ್ರೀಮ್ ಎಂದು ಕೆಲವರು ಮೂಗು ಮುರಿದಿದ್ದಾರೆ. ಇನ್ನು ಕೆಲವರು ಒಂದು ಬಾರಿ ಈ ವಿಧಾನವನ್ನು ತಯಾರಿಸಿ ರುಚಿ ಹೇಗಿರುತ್ತೆ ನೋಡಬೇಕು ಎಂದು ಹೇಳಿದ್ದಾರೆ.

ಇತ್ತೀಚೆಗೆ ವೈರಲ್ ಆಗಿದ್ದ ಮತ್ತೊಂದು ರೆಸಿಪಿಯಾದ ಮ್ಯಾಗೀ ಮಿಲ್ಕ್​ಶೇಕ್​ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿತ್ತು. ಮಿಲ್ಕ್​ಶೇಕ್ ಮೇಲೆ ಮ್ಯಾಗಿಯನ್ನು ಮಿಶ್ರಣ ಮಾಡಿದ್ದ ಹೊಸ ರೆಸಿಪಿಯನ್ನು ಕೆಲವರು ನೆಚ್ಚಿಕೊಂಡಿದ್ದರೆ, ಇನ್ನು ಕೆಲವರು ಈ ಕಣ್ಣಲ್ಲಿ ಇನ್ನೇನೇನ್ ನೋಡ್ಬೇಕೋ, ಈ ಕಿವಿಯಲ್ಲಿ ಇನ್ನೇನ್ ಕೇಳ್ಬೇಕೋ ಅಂದಿದ್ದರು.

ಇದನ್ನೂ ಓದಿ:

Viral Video: ವೈರಲ್ ಆಗಲು ನಡು ರಸ್ತೆಯಲ್ಲಿ ಮೈ ಬಳುಕಿಸಿದ ಯುವತಿ

Viral Video: ಸಲೂನ್​ಗೆ ಬಂದು ಕಿಮ್​ ಜಾಂಗ್​ ಉನ್​ ಹೆಸರು ಹೇಳಿದ ಯುವಕ; ಬಳಿಕ ನಡೆದಿದ್ದು ಅದ್ಭುತ !

(Mango dolly ice cream chaat with cheese in going viral social media)

Read Full Article

Click on your DTH Provider to Add TV9 Kannada