Nashik: ಒಂದು ಕೆಜಿ ಮೋದಕದ ಬೆಲೆ ಬರೋಬ್ಬರಿ 12,000 ರೂ.; ಅದೆಂತಾ ವಿಶೇಷ ಮೋದಕ ಗೊತ್ತಾ?

ಗಣಪ ಮೋದಕ ಪ್ರಿಯ ಎಂಬುದು ಪುರಾಣದಲ್ಲೇ ಉಲ್ಲೇಖವಾಗಿದೆ. ಹಾಗಾಗಿ ಗಣೇಶ ಚತುರ್ಥಿಯಂದು ವಿವಿಧ ರೀತಿಯ ಮೋದಕಗಳನ್ನು ತಯಾರಿಸುವುದು ಸಾಮಾನ್ಯ.

Nashik: ಒಂದು ಕೆಜಿ ಮೋದಕದ ಬೆಲೆ ಬರೋಬ್ಬರಿ 12,000 ರೂ.; ಅದೆಂತಾ ವಿಶೇಷ ಮೋದಕ ಗೊತ್ತಾ?
ಗೋಲ್ಡನ್​ ಮೋದಕ
Follow us
TV9 Web
| Updated By: Lakshmi Hegde

Updated on: Sep 19, 2021 | 6:05 PM

ನಾಸಿಕ್: ಯಾವುದೇ ಹಬ್ಬವಿರಲಿ ಅಲ್ಲಿ ಸಿಹಿತಿಂಡಿ ಇರಲೇಬೇಕು. ಅದರಲ್ಲೂ ಗಣೇಶ ಚೌತಿಯಂತೂ ಸಿಹಿ ತಿಂಡಿಗೇ ಹೆಸರಾದ ಹಬ್ಬ. ಮಹಾರಾಷ್ಟ್ರದಲ್ಲಿ ಈ ಗಣೇಶನ ಹಬ್ಬದ ಸಂಭ್ರಮ ಇನ್ನೂ ಮುಗಿದಿಲ್ಲ. ಸುಮಾರು 10 ದಿನಗಳ ಕಾಲ ಗಣೇಶ ಚತುರ್ಥಿ ಸಂಭ್ರಮ, ಹಾಡು, ಗಣೇಶನಿಗೆ ಪೂಜೆ ಇದ್ದೇ ಇರುತ್ತದೆ. ಇದೀಗ ಈ ವರ್ಷ ನಾಸಿಕ್​​ನಲ್ಲಿರುವ ಒಂದು ಸಿಹಿತಿಂಡಿಯ ಅಂಗಡಿ ಒಂದು ವಿಶೇಷ ಮೋದಕವನ್ನು ಮಾರಾಟ ಮಾಡುತ್ತಿದೆ. ಅದೆಷ್ಟು ದುಬಾರಿಯೆಂದರೆ, ಒಂದು ಕೆಜೆ ಮೋದಕದ ಬೆಲೆ ಬರೋಬ್ಬರಿ 12,000 ರೂ. !

ಗಣಪ ಮೋದಕ ಪ್ರಿಯ ಎಂಬುದು ಪುರಾಣದಲ್ಲೇ ಉಲ್ಲೇಖವಾಗಿದೆ. ಹಾಗಾಗಿ ಗಣೇಶ ಚತುರ್ಥಿಯಂದು ವಿವಿಧ ರೀತಿಯ ಮೋದಕಗಳನ್ನು ತಯಾರಿಸುವುದು ಸಾಮಾನ್ಯ. ಅದರಲ್ಲಿ ಮುಖ್ಯವಾಗಿ ಗಣೇಶನಿಗಾಗಿ ಚಾಕಲೇಟ್​, ಕೇಸರಿ, ಕಾಜು, ಮೋತಿಚೂರ್​ ಮತ್ತು ಖೋಯಾ ಮೋದಕಗಳು ತಯಾರಾಗುತ್ತವೆ.  ಆದರೆ ಈ ಸಾಗರ್​ ಸ್ವೀಟ್ಸ್​ ಎಂಬ ಅಂಗಡಿ ಮಾರುತ್ತಿರುವ ಮೋದಕದ ಹೆಸರು ಗೋಲ್ಡನ್​ ಮೋದಕ್​ (ಬಂಗಾರದ ಮೋದಕ). ಈ ಅಂಗಡಿ ಸುಮಾರು 26 ವಿಧದ ಮೋದಕಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಅದರಲ್ಲಿ ಬಂಗಾರದ ಮೋದಕ ಹೆಚ್ಚಿನ ಹಣ ಗಳಿಸುತ್ತಿದೆ. ಎಡಿಬಲ್​ ಬಂಗಾರದ ಮೋದಕವನ್ನು ಜನರು ತುಂಬ ಖುಷಿಯಿಂದ ಖರೀದಿಸುತ್ತಿದ್ದಾರೆ. ಅದರೊಂದಿಗೆ ಎಡಿಬಲ್​ ಬೆಳ್ಳಿ ಮೋದಕವೂ ಸಹ ಈ ಅಂಗಡಿಯಲ್ಲಿ ಮಾರಾಟಕ್ಕಿದ್ದು, ಅದರ ಬೆಲೆ ಕೆಜಿಗೆ 1460 ರೂಪಾಯಿ.

ಮೋದಕದ ಬಗ್ಗೆ ಪ್ರತಿಕ್ರಿಯೆ ನೀಡಿದ ಅಂಗಡಿ ಮಾಲೀಕ ದೀಪಕ್ ಚೌಧರಿ, ಈ ಬಂಗಾರದ ಮೋದಕಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಭರ್ಜರಿ ಮಾರಾಟವಾಗುತ್ತಿದೆ. ಉಳಿದ 25 ವಿಧದ ಮೋದಕಕ್ಕಿಂತಲೂ ಇದೇ ಸಿಕ್ಕಾಪಟೆ ಸೇಲ್​ ಆಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: Dairy Milk: 1990ರ ಡೈರಿಮಿಲ್ಕ್ ಚಾಕೊಲೇಟ್ ಜಾಹೀರಾತು ಹೊಸ ರೂಪದಲ್ಲಿ ಬಿಡುಗಡೆ! ಮನಸೋತ ನೆಟ್ಟಿಗರು

ಮಹಾತ್ಮಾ ಗಾಂಧೀಜಿ ಕುರಿತು ವಿವಾದಾತ್ಮ ಹೇಳಿಕೆ ನೀಡಿದ ಹಿಂದೂ ಮಹಾಸಭಾ ಮುಖಂಡನ ಬಂಧನ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ