ಮಮತಾ ಬ್ಯಾನರ್ಜಿ ಕಾರ್ಟೂನ್ ಫಾರ್ವರ್ಡ್ ಮಾಡಿದ ಪ್ರಕರಣದಲ್ಲಿ ಇನ್ನೂ ಮುಗಿದಿಲ್ಲ ಅಂಬಿಕೇಶ್ ಮಹಾಪಾತ್ರರ ಕಾನೂನು ಹೋರಾಟ
ಮಾಹಿತಿ ತಂತ್ರಜ್ಞಾನ ಕಾಯಿದೆಯ ಒಂದು ನಿಷ್ಕ್ರಿಯ ವಿಭಾಗದ ಅಡಿಯಲ್ಲಿ ಆರೋಪಗಳನ್ನು ಕೈಬಿಡಲಾಗಿದ್ದರೂ, ವಿಚಾರಣಾ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮುಂದುವರಿಸುವುದಾಗಿ ಹೇಳಿದೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ವ್ಯಂಗ್ಯಚಿತ್ರವನ್ನು ಫಾರ್ವರ್ಡ್ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿ ಸುಮಾರು ಒಂಬತ್ತೂವರೆ ವರ್ಷಗಳ ನಂತರ, ಕೋಲ್ಕತ್ತಾದ ನ್ಯಾಯಾಲಯವು ಪ್ರೊಫೆಸರ್ ಅಂಬಿಕೇಶ್ ಮಹಾಪಾತ್ರ ಅವರನ್ನು ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 66 ಎ ಅಡಿಯಲ್ಲಿರುವ ಆರೋಪದಿಂದ ಮುಕ್ತಗೊಳಿಸಿದೆ. ಆದರೆ ಪ್ರಾಧ್ಯಾಪಕ ಮಹಾಪಾತ್ರ ಮೇಲಿನ ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿದೆ.
ಐಪಿಸಿ ಸೆಕ್ಷನ್ 500/509 ರ ಅಡಿಯಲ್ಲಿ ಯಾವುದೇ ಪ್ರಕರಣವನ್ನು ಅಥವಾ ಇನ್ನಾವುದೇ ಕಾನೂನನ್ನು ಆರೋಪಿ ಅಂಬಿಕೇಶ್ ಮಹಾಪಾತ್ರ ವಿರುದ್ಧ ಮಾಡಬಹುದೇ ಅಥವಾ ಆರೋಪಿಯನ್ನು ಪ್ರಕರಣದಿಂದ ಬಿಡುಗಡೆ ಮಾಡಲು ಅರ್ಹತೆ ಇದೆಯೇ ಎಂಬುದನ್ನು 17-11-2021 ಕ್ಕೆ ವಿಚಾರಣೆ ಮಾಡಲಾಗುವುದು ಎಂದು ಅಲಿಪೋರ್, 24 ಪರಗಣಗಳು (ದಕ್ಷಿಣ) ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸುಬ್ರತಾ ಮುಖರ್ಜಿ ಮಂಗಳವಾರದ ಆದೇಶ ನೀಡಿದ್ದರು.
ಸುಪ್ರೀಂ ಕೋರ್ಟ್ 2015 ರಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಕಠಿಣ ಸೆಕ್ಷನ್ 66 ಎ ಅನ್ನು ರದ್ದುಗೊಳಿಸುವ ಮಹತ್ವದ ನಿರ್ಧಾರವನ್ನು ಅಂಗೀಕರಿಸಿತು. ಆದರೆ ಅವರು ಆರು ವರ್ಷಗಳ ಕಾಲ ಆರೋಪದ ವಿರುದ್ಧದ ಹೋರಾಟವನ್ನು ಮುಂದುವರಿಸಿದರು. ಐಪಿಸಿ ಅಡಿಯಲ್ಲಿ, ಸೆಕ್ಷನ್ 509 (ಪದ, ಗೆಸ್ಚರ್ ಅಥವಾ ಆಕ್ಟ್ ಮಹಿಳೆಯರನ್ನು ಅವಮಾನಿಸುವ ಉದ್ದೇಶ) ಮತ್ತು ಸೆಕ್ಷನ್ 500 (ಮಾನನಷ್ಟಕ್ಕೆ ಶಿಕ್ಷೆ) ಗೆ ಸಂಬಂಧಿಸಿದೆ ಎಂದು ಪ್ರೊಫೆಸರ್ ಮಹಾಪಾತ್ರ ಹೇಳಿದ್ದಾರೆ.
ಪ್ರೊ.ಮಹಾಪಾತ್ರಾ ಅವರು ಸತ್ಯಜಿತ್ ರೇ ಅವರ ಸೋನಾರ್ ಕೆಲ್ಲಾವನ್ನು ಆಧರಿಸಿದ ಕಾರ್ಟೂನ್ ಒಳಗೊಂಡ ಇಮೇಲ್ ಅನ್ನು ರವಾನಿಸಿದರ. ಇದು ದಿನೇಶ್ ತ್ರಿವೇದಿ ಅವರನ್ನು ರೈಲ್ವೇ ಸಚಿವ ಸ್ಥಾನದಿಂದ ತೆಗೆದು ಮುಕುಲ್ ರಾಯ್ ಅವರನ್ನು ನೇಮಿಸಿರುವುದರ ಬಗ್ಗೆ ಗೇಲಿ ಮಾಡಿದಂತಿತ್ತು ಎಂಬ ಆರೋಪ ಹೊರಿಸಲಾಗಿತ್ತು.
ಇನ್ನೂ ಮುಗಿದಿಲ್ಲ ಕಾನೂನು ಹೋರಾಟ ಮಾಹಿತಿ ತಂತ್ರಜ್ಞಾನ ಕಾಯಿದೆಯ ಒಂದು ನಿಷ್ಕ್ರಿಯ ವಿಭಾಗದ ಅಡಿಯಲ್ಲಿ ಆರೋಪಗಳನ್ನು ಕೈಬಿಡಲಾಗಿದ್ದರೂ, ವಿಚಾರಣಾ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮುಂದುವರಿಸುವುದಾಗಿ ಹೇಳಿದೆ. ಏಕೆಂದರೆ ಒಬ್ಬ ಕೋಲ್ಕತ್ತಾದ ಪ್ರಜೆ, ಮಾನನಷ್ಟ ಮತ್ತು ಅವಮಾನ ಮಾಡಿದ ಆರೋಪಗಳನ್ನು ಹೊರಿಸಲು ಉದ್ದೇಶಿಸಿದ್ದಾರೆ . ಮುಖ್ಯಮಂತ್ರಿಯನ್ನು ಅವಮಾನ ಮಾಡಿದ ಆರೋಪಗಳು ಮಹಾಪಾತ್ರ ಅವರ ಮೇಲಿದ್ದು, ಮುಖ್ಯಮಂತ್ರಿಯವರು ಈವರೆಗೆ ಯಾವುದೇ ಕಾನೂನು ನಡೆ ಸ್ವೀಕರಿಸಿಲ್ಲ
ಪೂರ್ವ ಜಾದವ್‌ಪುರ ಪೊಲೀಸ್ ಠಾಣೆಯಿಂದ ಏಪ್ರಿಲ್ 2012 ರಲ್ಲಿ ಅವರನ್ನು ಬಂಧಿಸಿದ ನಂತರ, ರಸಾಯನಶಾಸ್ತ್ರ ಪ್ರಾಧ್ಯಾಪಕರಾದ ಮಹಾಪಾತ್ರ ಮತ್ತು ಆಗ ನಿವೃತ್ತ ಎಂಜಿನಿಯರ್ ಆಗಿದ್ದ ಸುಬ್ರತಾ ಸೇನ್‌ಗುಪ್ತಾ ಅವರನ್ನು 2013 ರ ಚಾರ್ಜ್ ಶೀಟ್‌ನಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆ, 2000ಸೆಕ್ಷನ್ 66 ಎ (ಬಿ) ಮತ್ತು (ಸಿ) ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. ನ್ಯೂ ಗರಿಯಾದಲ್ಲಿ ಹೌಸಿಂಗ್ ಸೊಸೈಟಿಯ ಕಾರ್ಯದರ್ಶಿಯಾಗಿದ್ದ ಸೇನ್‌ಗುಪ್ತಾ ವಿರುದ್ಧ ಹೆಚ್ಚುವರಿಯಾಗಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 109 ರ ಅಡಿಯಲ್ಲಿ ಆರೋಪ ಹೊರಿಸಲಾಯಿತು.
ಬಂಧನದ ಕೆಲವು ಗಂಟೆಗಳ ನಂತರ ಇಬ್ಬರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತಾದರೂ, ಪೋಲಿಸ್ ಕ್ರಮವು ಸಂಚಲನವನ್ನು ಉಂಟುಮಾಡಿತು, ಏಕೆಂದರೆ ಇದು ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಆಗಿತ್ತು. ವಿರೋಧ ಪಕ್ಷಗಳು, ಬುದ್ಧಿಜೀವಿಗಳು, ಹಕ್ಕುಗಳ ಗುಂಪುಗಳು ಮತ್ತು ನಾಗರಿಕರು ತಮ್ಮ ಧ್ವನಿಯನ್ನು ಎತ್ತಿದರು, ಕಾರ್ಟೂನ್‌ನ ಥೀಮ್ ಸೋನಾರ್ ಕೆಲ್ಲಾ ಆಧರಿಸಿದೆ, ಸತ್ಯಜಿತ್ ರೇ 1970 ರ ದಶಕದಲ್ಲಿ ಅವರು ಮಕ್ಕಳಿಗಾಗಿ ನಿರ್ಮಿಸಿದ ಸಿನಿಮಾ ಆಗಿದೆ. ರಾಯ್ ಅವರ ಕಥೆಯಲ್ಲಿ ಬಾಲನಾಯಕನಿಗೆ ಮುಕುಲ್ ಎಂದೂ ಹೆಸರಿಡಲಾಗಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ವಾದಗಳನ್ನು ಅಲ್ಲಗೆಳೆದಿದ್ದ, ವ್ಯಂಗ್ಯಚಿತ್ರವು ದುರುದ್ದೇಶಪೂರಿತ ಉದ್ದೇಶದಿಂದ ಪ್ರಸಾರವಾಗಿದೆ ಎಂದು ಹೇಳಿತ್ತು.
ಇದನ್ನೂ ಓದಿ: Punjab CM: ಚರಣ್‌ಜಿತ್ ಸಿಂಗ್ ಛನ್ನಿ ಪಂಜಾಬ್‌ನ ನೂತನ ಮುಖ್ಯಮಂತ್ರಿ
(Nine and half years after Ambikesh Mahapatra arrested for forwarding a cartoon of West Bengal CM Mamata Banerjee now fears new case)