Statue of Equality: ದಿವ್ಯ ಸಾಕೇತಂ ಆಶ್ರಮದಲ್ಲಿ ತ್ರಿದಂಡಿ ಚಿನ್ನಜೀಯರ್ ಶ್ರೀಗಳ ಸುದ್ದಿಗೋಷ್ಠಿ

2022ರ ಫೆಬ್ರವರಿ 2ರಿಂದ 14ರವರೆಗೂ ಸಹಸ್ರಮಾನೋತ್ಸವ ನಡೆಯಲಿದೆ. ದೇಶದ ಅತಿರಥ ಮಹಾರಥ ಗಣ್ಯರಿಗೆಲ್ಲಾ ಚಿನ್ನಜೀಯರ್‌ ಸ್ವಾಮೀಜಿ ಜೊತೆಗೆ ‘ಮೈ ಹೋಮ್ ಗ್ರೂಪ್’ ಚೇರ್ಮನ್ ಡಾ.ಜೆ.ರಾಮೇಶ್ವರ್ ರಾವ್ ಭೇಟಿ ಮಾಡಿ ಸ್ವಾಗತಿಸಿದ್ದಾರೆ. ಮಹೋತ್ಸವಕ್ಕೆ ನಡೆದಿರುವ ಸಿದ್ಧತೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಚಿನ್ನಜೀಯರ್ ಶ್ರೀ ವಿವರಣೆ ನೀಡಲಿದ್ದಾರೆ.

Statue of Equality: ದಿವ್ಯ ಸಾಕೇತಂ ಆಶ್ರಮದಲ್ಲಿ ತ್ರಿದಂಡಿ ಚಿನ್ನಜೀಯರ್ ಶ್ರೀಗಳ ಸುದ್ದಿಗೋಷ್ಠಿ
ಶ್ರೀ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ
Follow us
TV9 Web
| Updated By: ಆಯೇಷಾ ಬಾನು

Updated on:Sep 20, 2021 | 1:56 PM

ಹೈದರಾಬಾದ್: ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಮುಚ್ಚಿಂತಲ್ ಸಮೀಪದ ‘ದಿವ್ಯ ಸಾಕೇತಂ’ ಆಶ್ರಮದಲ್ಲಿ ತ್ರಿದಂಡಿ ಚಿನ್ನಜೀಯರ್ ಶ್ರೀಗಳ ಸುದ್ದಿಗೋಷ್ಠಿ ನಡೆಸಿದ್ದಾರೆ. ಶ್ರೀರಾಮಾನುಜರ 216 ಅಡಿ ಪ್ರತಿಮೆ ಅನಾವರಣದ ಉತ್ಸವದ ಮಾಹಿತಿ ನೀಡಿದ್ದಾರೆ.

2022ರ ಫೆಬ್ರವರಿ 2ರಿಂದ 14ರವರೆಗೂ ಸಹಸ್ರಮಾನೋತ್ಸವ ನಡೆಯಲಿದೆ. ದೇಶದ ಅತಿರಥ ಮಹಾರಥ ಗಣ್ಯರಿಗೆಲ್ಲಾ ಚಿನ್ನಜೀಯರ್‌ ಸ್ವಾಮೀಜಿ ಜೊತೆಗೆ ‘ಮೈ ಹೋಮ್ ಗ್ರೂಪ್’ ಚೇರ್ಮನ್ ಡಾ.ಜೆ.ರಾಮೇಶ್ವರ್ ರಾವ್ ಭೇಟಿ ಮಾಡಿ ಸ್ವಾಗತಿಸಿದ್ದಾರೆ. ಮಹೋತ್ಸವಕ್ಕೆ ನಡೆದಿರುವ ಸಿದ್ಧತೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಚಿನ್ನಜೀಯರ್ ಶ್ರೀ ವಿವರಣೆ ನೀಡಲಿದ್ದಾರೆ. ‘ಸಮಾನತೆ ಪ್ರತಿಮೆ’ಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿನ್ನಜೀಯರ್ ಶ್ರೀಗಳ, ಇಂದಿನಿಂದಲೇ ಚಾತುರ್ಮಾಸ ಕಾರ್ಯಕ್ರಮ ಆರಂಭವಾಗಲಿದೆ. ಇಂದಿನಿಂದ ಮಚ್ಚಿಂತಲ್ ಆಶ್ರಮದಲ್ಲಿ ಚಾತುರ್ಮಾಸ ದೀಕ್ಷೆ ನೀಡಲಿದ್ದೇವೆ. ಫೆಬ್ರವರಿಯಲ್ಲಿ ರಾಮಾನುಜಾಚಾರ್ಯರ ಪ್ರತಿಮೆ ಲೋಕಾರ್ಪಣೆ ಮಾಡಲಾಗುತ್ತೆ ಎಂದರು.

ವಿಶ್ವದಲ್ಲಿರುವ ಎಲ್ಲರ ಶ್ರೇಯಸ್ಸಿಗಾಗಿ ಮಹತ್ವದ ಕಾರ್ಯ ನಡೆಯಲಿದೆ. ರಾಮಾನುಜಾಚಾರ್ಯರು ಅವತರಿಸಿ 1 ಸಾವಿರ ವರ್ಷವಾಗಿದೆ. ಈ ಸಮಯದಲ್ಲಿ ರಾಮಾನುಜರ ಸಮಾನತೆ ಸಿದ್ಧಾಂತ ಈ ಸಮಾಜಕ್ಕೆ ತಿಳಿಹೇಳಬೇಕು. ಹೀಗಾಗಿ ಈ ಸಮಯದಲ್ಲಿ ಮಹತ್ತರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕೊರೊನಾದಿಂದ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ. ನಮ್ಮ ದೇಶದಲ್ಲಿ ಎರಡು ಅಲೆ ಈಗಾಗಲೇ ಬಂದಿದೆ. ಮೂರನೇ ಅಲೆ ಬರುವುದಾಗಿ ವೈದ್ಯರು ಹೇಳುತ್ತಿದ್ದಾರೆ. ಕೊರೊನಾ ಹಿನ್ನೆಲೆ ಫೆಬ್ರವರಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಫೆಬ್ರವರಿಯಲ್ಲಿ 12 ದಿನಗಳ ಕಾಲ ಹೋಮ ಮಾಡಲಾಗುತ್ತೆ. ದೇಶಿ ತಳಿ ಹಸುಗಳ ತುಪ್ಪದಿಂದ ಹೋಮ ಮಾಡಲಾಗುತ್ತದೆ. 5 ಸಾವಿರ ಋಷಿಗಳು ಈ ಹೋಮದಲ್ಲಿ ಭಾಗಿಯಾಗುತ್ತಾರೆ. ಪ್ರತಿ ಹೋಮ ಕುಂಡದ ಬಳಿ ಗೋವಿಗಳಿಗೆ ಪೂಜೆ ಸಲ್ಲಿಸಲಾಗುವುದು. ಈ ಕಾರ್ಯಕ್ರಮ ಒಂದು ಗ್ರಾಮ, ರಾಜ್ಯ, ದೇಶಕ್ಕಾಗಿ ಅಲ್ಲ. ಇಡೀ ಸಮುದಾಯಕ್ಕಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಈ ಮಹೋತ್ಸವಕ್ಕೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಸಚಿವರು ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ಮಾಡಲಾಗಿದೆ. ಎಲ್ಲರೂ ಈ ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದಾರೆ.

ಫೆಬ್ರವರಿ 5ರಂದು ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ. ರಾಮಾನುಜಾಚಾರ್ಯರ ಪ್ರತಿಮೆ ಲೋಕಾರ್ಪಣೆ ಮಾಡ್ತಾರೆ. ಮಹೋತ್ಸವದ ಅಂತ್ಯದ ವೇಳೆಗೆ ರಾಷ್ಟ್ರಪತಿಗಳು ಬರುತ್ತಾರೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ರಾಜ್ಯಪಾಲರು. ಕೇಂದ್ರ ಸಚಿವರು, ಸಂಸದರು, ಶಾಸಕರು, ಗಣ್ಯರು ಭಾಗಿಯಾಗ್ತಾರೆ ಎಂದರು.

ತಮಿಳುನಾಡಿನಲ್ಲಿ ಪ್ರತಿಮೆ ಸ್ಥಾಪಿಸಲು ಅಂದುಕೊಂಡಿದ್ದೆವು ‘ಮೈ ಹೋಮ್ ಗ್ರೂಪ್’ ಚೇರ್ಮನ್ ರಾಮೇಶ್ವರ್ ರಾವ್ ಪ್ರತಿಮೆ ಸ್ಥಾಪನೆಗೆ ಜಾಗ ತೋರಿಸಿದ್ದರು. ಜೆ.ರಾಮೇಶ್ವರ್ ರಾವ್ ತೋರಿಸಿದ ಜಾಗ ಅತ್ಯದ್ಭುತವಾಗಿದೆ. ಆದ್ರೆ ಈ ಹಿಂದೆ ತಮಿಳುನಾಡಿನಲ್ಲಿ ಪ್ರತಿಮೆ ಸ್ಥಾಪಿಸಲು ಅಂದುಕೊಂಡಿದ್ದೆವು. ಆದರೆ ಇದೇ ಜಾಗದಲ್ಲಿ ಸ್ಥಾಪನೆಯಾಗಬೇಕೆಂದು ನಿಶ್ಚಯವಾಗಿದೆ. ಜೆ.ರಾಮೇಶ್ವರ್ ರಾವ್‌ರವರು ಭೂಮಿ ತೋರಿಸಿದ್ದರು ಅದೇ ಜಾಗದಲ್ಲಿ ಈಗ ಸಮಾನತೆ ಪ್ರತಿಮೆ ಸ್ಥಾಪಿಸ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಕೇವಲ ಉಭಯ ಆಂಧ್ರದವರಲ್ಲ ದೇಶದ ಎಲ್ಲ ರಾಜ್ಯದ ಜನರಿಗೂ ಆಹ್ವಾನ ನೀಡಲಾಗಿದೆ ಎಂದರು.

ವಿಜಯದಶಮಿ ದಿನ ಯಾಗ ಶಾಲೆ ನಿರ್ಮಾಣ ಮಾಡ್ತೇವೆ ರಾಮಾನುಜಾಚಾರ್ಯರ ಬಗ್ಗೆ ಮಾಹಿತಿ ನೀಡುವುದಕ್ಕೆ ಆಡಿಯೋ ಡಿವೈಸ್ ಕೂಡ ಇರುತ್ತೆ. ಎಲ್ಲ ಭಾಷೆಗಳಲ್ಲಿ ಮಾಹಿತಿ ಲಭ್ಯವಾಗಲಿದೆ. ಎಲ್ಲರೂ ಕೂಡ ಕಾರ್ಯಕ್ರಮಕ್ಕೆ ಬನ್ನಿ. ವಿಜಯದಶಮಿ ದಿನ ಯಾಗ ಶಾಲೆ ನಿರ್ಮಾಣ ಮಾಡ್ತೇವೆ. 100 ಎಕರೆ ಪ್ರದೇಶದಲ್ಲಿ ಯಾಗ ಶಾಲೆ ನಿರ್ಮಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Statue of Equality: ಹೈದರಾಬಾದ್‌ನಲ್ಲಿ ತಲೆ ಎತ್ತಲಿದೆ ವಿಶ್ವದ ಎರಡನೇ ಅತೀ ಎತ್ತರದ ಶ್ರೀ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ‌

Published On - 12:35 pm, Mon, 20 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ